ಇಂದಿನಿಂದ ಹುಕ್ಕೇರಿ ಶಿಡ್ಲಿಹಾಳ ಗ್ರಾಮದ ಅಲ್ಲಮಪ್ರಭು ದೇವರ ಜಾತ್ರೆ
Allama Prabhu Devara Fair in Hukkeri Shidlihala village from today
ಲೋಕದರ್ಶನ ವರದಿ
ಯಮಕನಮರಡಿ 18 : ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಹಳೇ ಶಿಡ್ಲಿಹಾಳ ಗ್ರಾಮದ ಶ್ರೀ ಅಲ್ಲಮಪ್ರಭು ದೇವರ ಜಾತ್ರೆಯ ದಿನಾಂಕ 19 ರಂದು ಪ್ರಾರಂಭವಾಗಿ ಎರಡು ದಿನಗಳ ಕಾಲ ಅತಿ ಹೆಚ್ಚಿನ ವಿಜೃಂಭಣೆಯಿಂದ ಜರುಗಲಿದೆ ಎಂದು ಯಾತ್ರಾ ಕಮಿಟಿ ತಿಳಿಸಿದೆ.
ಸದರಿ ಅಲ್ಲಮಪ್ರಭು ದೇವರ ಮಂದಿರವು ಸುಮಾರು 800 ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದು ಸದರಿ ದೇವಸ್ಥಾನಕ್ಕೆ ಅಂದಿನ ಒಂಟಮೂರಿ ಸಂಸ್ಥಾನದ ರಾಜ ಲಕ್ಕಮ್ಮಗೌಡ ಸರ್ವೆ ಸಾಯಿ ಅವರ ಮನೆತನದ ಅಲ್ಲಮಪ್ರಭು ದೇವರ ದೇವಸ್ಥಾನವು ನಿರ್ಮಾಣವಾಗಿದ್ದು ಆಗಿನ ಕಾಲದಲ್ಲಿ ಸಂಸ್ಥಾನದ ಸರ ದೇಸಾಯಿ ಕುಟುಂಬದವರು ಸದರಿ ದೇವಸ್ಥಾನಕ್ಕೆ ವೀಣೆ ಮುಖಾಂತರ ಬಂದು ಪ್ರಭುದೇವರ ದರ್ಶನ ಪಡೆಯುತ್ತಿದ್ದರಂದು ಹಿರಿಯರು ಹೇಳುತ್ತಾರೆ.
ಈಗಲೂ ಸಹಿತ ಒಟ್ಟು ಮೂರು ಸಂಸ್ಥಾನದ ಸಂಬಂಧಿಕರು ಬಂದು ಪ್ರಭುದೇವರ ಜಾತ್ರೆಯ ಮುಖಂಡತ್ವವನ್ನು ಪೂರೈಸುತ್ತಾರೆ ಸದರಿ ದೇವಸ್ಥಾನವು ಹಿಡ್ಕಲ್ ಜಲಾಶಯದಲ್ಲಿ ಮುಳುಗಡೆ ಹೊಂದಿ ತನ್ನ ಗತವೈಭವವನ್ನು ಕಳೆದುಕೊಂಡಿತು ಆದರೆ ಸದರಿ ಗ್ರಾಮದ ಭಕ್ತಾದಿಗಳು ಘಟಪ್ರಭಾ ನದಿ ಪಕ್ಕದಲ್ಲಿರುವ ಎತ್ತರ ಪ್ರದೇಶದಲ್ಲಿ ಮತ್ತೊಂದು ಪ್ರಭುದೇವರ ಮಂದಿರವನ್ನು ನಿರ್ಮಾಣ ಮಾಡಿ ಸಕಲ ಭಕ್ತರು ಹಾಗೂ ದೇಸಾಯಿ ಕುಟುಂಬದವರು ಆಗಮಿಸಿ
ಭಕ್ತಿ ಪೂರ್ವಕ ಜಾತ್ರೆಯನ್ನು ನಡೆಸುತ್ತಾ ಬಂದಿರುವುದು ಒಂದು ಪ್ರತಿತಿ ದಿನಾಂಕ 19 ರಂದು ರಾತ್ರಿ ಭಜನಾ ಕಾರ್ಯಕ್ರಮ ಹಾಗೂ ಇತರೆ ಮನರಂಜನ ಕಾರ್ಯಕ್ರಮಗಳು ಜರುಗಲಿದ್ದು ದಿನಾಂಕ 20 ರಂದು ಪಲ್ಲಕ್ಕಿ ಮೆರವಣಿಗೆ ಮಹಾಪ್ರಸಾದ ಆಯೋಜಿಸಲಾಗಿದ್ದು ಸಂಜೆ ನಾಲ್ಕು ಗಂಟೆಗೆ ಜೋಡಿತ್ತಿನ ಗಾಡಿ ಸರಿಯತ್ತು ಕುದುರೆ ಗಾಡಿ ಸರಿಯತ್ತು ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಯಾತ್ರಾ ಕಮಿಟಿ ತಿಳಿಸಿದೆ.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 