200ನೇ ಅದ್ದೂರಿ ಕಿತ್ತೂರು ಉತ್ಸವಕ್ಕೆ ಸಕಲ ಸಿದ್ದತೆ ; 3 ದಿನ ವಿವಿಧ ಕಾರ್ಯಕ್ರಮ ಆಯೋಜನೆ : dc ಮೊಹಮ್ಮದ್ ರೋಷನ್

ಬೆಳಗಾವಿ : ಇದೇ ದಿ. 23ರಿಂದ ಮೂರು ದಿನಗಳ ವರೆಗೆ ನಡೆಯಲಿರುವ 200ನೇ ಕಿತ್ತೂರು ಚನ್ನಮ್ಮ ಉತ್ಸವಕ್ಕೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಈ ಉತ್ಸವ ದಲ್ಲಿ ಒಂದು ಲಕ್ಷ ಜನ ಸೇರಿವ ನಿರೀಕ್ಷೆ ಇದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಇಂದಿಲ್ಲಿ ಹೇಳಿದರು. 

    ಬೆಳಗಾವಿಯ ಪ್ರವಾಸಿ ಮಂದಿರಲ್ಲಿ ಶನಿವಾರ ಮಧ್ಯಾಹ್ನ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಿತ್ತೂರು ಚನ್ನಮ್ಮನ ಉತ್ಸವದ ಅಂಗವಾಗಿ ದಿ. 22ರಂದು ಬೆಳಗಾವಿ ನಗರದಲ್ಲಿ ಸಾಧು ಕೋಕಿಲ್ ಮತ್ತು ಕುನಾಲ್ ಗಂಜವಾಲ ಅವರಿಂದ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 

  ಅದೇ ರೀತಿಯಾಗಿ ದಿ. 23 ದಿ. 24, ದಿ. 25 ಹೀಗೆ ಮೂರು ದಿನಗಳ ಕಾಲ ಕಿತ್ತೂರು ಚೆನ್ನಮ್ಮ ಉತ್ಸವ ನಿಯಮಿತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕ್ರೀಡೆ ಗಳನ್ನು ಆಯೋಜಿಸಲಾಗಿದೆ. 

    ಅದೇ ರೀತಿ ಈ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ರಖ್ಯಾತ ಕಲಾವಿದರು ಭಾಗ ವಹಿಸಲಿದ್ದಾರೆ. ಉತ್ಸವಕ್ಕೆ ಬರುವ ಜನರಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಇಲ್ಲಿನ ಕೆಲವು ಸಮಿತಿ ಗಳ ಸಭೆ ನಡೆಸುವ ಮೂಲಕ ಎಲ್ಲ ಸಿದ್ದತೆ ಮಾಡಿಕೊಳ್ಳಲಾಗಿದೆ. 

    ಈ ಕಾರ್ಯಕ್ರಮಕ್ಕೆ ಬರುವ ಜನರಿಗಾಗಿ ಕುಡಿಯುವ ನೀರಿನ ವ್ಯವಸ್ಥೆ, ರಸ್ತೆ ಅಗಲಿಕರಣ ಸೇರಿ ಎಲ್ಲ ಸೌಕರ್ಯ ಮಾಡಲಾಗುತ್ತಿದೆ ಎಂದರು. ಅದೆ ರೀತಿಯಲ್ಲಿ ಬೈಲಹೊಂಗಲದ ಚನ್ನಮ್ಮನ‌ ಸಮಾಧಿಯ ಪಕ್ಕದಲ್ಲಿ ಕಾರ್ಯಕ್ರಮ ಒಂದನ್ನು ಆಯೋಜಿಸುವ ಚಿಂತನೆ ಕೂಡಾ‌ ಮಾಡಲಾಗುತ್ತಿದೆ ಎಂದು ನುಡಿದರು.

   ಇದೇ ವೇಳೆ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಅವರು ಮಾತನಾಡಿ, ಕಿತ್ತೂರು ಚೆನ್ನಮ್ಮ ಉತ್ಸವಕ್ಕೆ ಸಚಿವರು ಕೆಲವು ಸಚಿವರು, ಶಾಸಕರು, ಕಲಾವಿದರು ಆಗಮಿಸಲಿದ್ದಾರೆ. ಇದಕ್ಕಾಗಿ ಎಲ್ಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು. 

   ಈ ಸಂದರ್ಭದಲ್ಲಿ ಎಸ್.ಪಿ ಭೀಮಾಶಂಕರ ಗುಳೇದ, ವಾರ್ತಾ ಅಧಿಕಾರಿ ಗುರುನಾಥ ಕಡಬೂರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.