ಸಾರ್ವಜನಿಕರ ಸಹಕಾರ ಸಿಕ್ಕರೆ ಎಲ್ಲ ಸಮಸ್ಯೆ ನಿವಾರಣೆ: ಡಿ.ಸಿ. ದಿವ್ಯಾಪ್ರಭು

ಸಾರ್ವಜನಿಕರ ಸಹಕಾರ ಸಿಕ್ಕರೆ ಎಲ್ಲ ಸಮಸ್ಯೆ ನಿವಾರಣೆ: ಡಿ.ಸಿ. ದಿವ್ಯಾಪ್ರಭು All problems can be solved if we get public cooperation: D.C. Divya Prabhu

ಸಾರ್ವಜನಿಕರ ಸಹಕಾರ ಸಿಕ್ಕರೆ ಎಲ್ಲ ಸಮಸ್ಯೆ ನಿವಾರಣೆ: ಡಿ.ಸಿ. ದಿವ್ಯಾಪ್ರಭು 

ಧಾರವಾಡ, 11 ; ಸಾರ್ವಜನಿಕರ ಸಹಕಾರ ಸಿಕ್ಕರೆ ಎಲ್ಲ ಸಮಸ್ಯೆ ಬಗೆಹರಿಸಲು ಸಾಧ್ಯವೆಂದು  ಧಾರವಾಡ ಜಿಲ್ಲಾಧಿಕಾರಿಗಳಾದ ದಿವ್ಯಾಪ್ರಭು ಅವರು ಹೇಳಿದರು.  

ಹುಬ್ಬಳ್ಳಿ ಧಾರವಾಡ ನಾಗರಿಕ ಪರಿಸರ ಸಮಿತಿ ವತಿಯಿಂದ ನಾಗರಿಕ ಸನ್ಮಾನ ಸ್ವೀಕರಿಸಿ ಮಾತನ್ನಾಡುತ್ತಾ.  

ನಮ್ಮ ಹಬ್ಬಗಳು ಸಂಸ್ಕೃತಿ ಸಂಪ್ರದಾಯಗಳ ಮೂಲಕ ನಾಗರಿಕತೆಯ ಮೌಲ್ಯಗಳನ್ನು ಹೆಚ್ಚಿಸುತ್ತವೆ. ನಾವು ಅವುಗಳ ಆಚರಣೆ ಮಾಡುವಾಗ ಪರಿಸರಕ್ಕೆ ಹಾನಿ ಆಗದಂತೆ ಕಾಳಜಿ ವಹಿಸಬೇಕು. ಸಾರ್ವಜನಿಕರ ಸಹಕಾರ ಇದ್ದುದರಿಂದಲೇ ಈ ಬಾರಿ ಹೆಚ್ಚಿನ ಸಂಖ್ಯೆಯಲಿಮಣ್ಣಿನ ಗಣಪತಿಗಳಿಂದಲೇ ಹಬ್ಬವನ್ನು ಆಚರಿಸಲಿಕ್ಕೆ ಕಾರಣವಾಯಿತು. ಈ ಸನ್ಮಾನ ಸಾರ್ವಜನಿಕರಿಗೆ ಸಲ್ಲಬೇಕಾದ ಸನ್ಮಾನ ಎಂದರು.  

ಈ ವರ್ಷ ಧಾರವಾಡ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಪ್ರಾಮಾಣಿಕ ಪ್ರಯತ್ನದಿಂದ ಪಿಒಪಿ ಗಣಪತಿಗಳು ಕಡಿಮೆಯಾಗಿದೆ ಎಂದು ಧಾರವಾಡ ಜಿಲ್ಲಾ ನಾಗರಿಕರ ಪರವಾಗಿ ಜಿಲ್ಲಾಧಿಕಾರಿಗಳನ್ನು ಸನ್ಮಾನಿಸಿ ಪರಿಸರ ಸಮಿತಿಯ ಅಧ್ಯಕ್ಷ ಶಂಕರ ಕುಂಬಿ ಅಭಿನಂದಿಸಿದರು.   

ಕಾರ್ಯಕ್ರಮದಲ್ಲಿ  ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪಂಡಿತ ಎಂ. ವೆಂಕಟೇಶಕುಮಾರ, ಕಾರ್ಯದರ್ಶಿ ವಿಲಾಸ ಕುಲಕರ್ಣಿ. ಸಹಕಾರ್ಯದರ್ಶಿ ಕೆ. ಎಚ್‌. ನಾಯಕ, ಕೋಶಾಧ್ಯಕ್ಷ ಆಯ್‌.ಎಲ್‌.ಪಾಟೀಲ, ಸ್ವಪ್ನ ಕಲಬಶೆಟ್ಟರ್‌. ಡಾ ಮಲ್ಲಿಕಾರ್ಜುನ್ ತರ್ಲಘಟ್ಟ. ಡಾ ಜಗದೀಶ್ ಗುಡಗುರ್ ಮುಂತಾದವರು ಉಪಸ್ಥಿತರಿದ್ದರು.