’ನಾವೆಲ್ಲರೂ ಪ್ರಜೆಗಳು’: ಮಮತಾ ಬ್ಯಾನರ್ಜಿ

ಕೋಲ್ಕತಾ, ಜ 25, ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ಮತ ಚಲಾಯಿಸುವವ ಎಲ್ಲರಿಗೂ ಅಭಿನಂದನೆ ಸಲ್ಲಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ‘ನಾವೆಲ್ಲರೂ ಪ್ರಜೆಗಳು‘ ಎಂದಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ’ಇಂದು ವಿಶ್ವ ಮತದಾರರ ದಿನ.ನಮ್ಮದು ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ. ಪ್ರಜಾಪ್ರಭುತ್ವದಲ್ಲಿ ಮತದಾರರೇ ಪ್ರಭುಗಳು’ ಎಂದಿದ್ದಾರೆ. ‘ಮತ ಚಲಾಯಿಸುವವರಿಗೆ ನನ್ನ ಸಲ್ಯೂಟ್. ನಾವೆಲ್ಲರೂ ಪ್ರಜೆಗಳು‘ ಎಂದಿದ್ದಾರೆ. ಚುನಾವಣಾ ಪ್ರಕ್ರಿಯೆಯಲ್ಲಿ ಹೆಚ್ಚಿನ ಜನರು ಪಾಲ್ಗೊಳ್ಳುವಂತೆ ಪ್ರೊತ್ಸಾಹಿಸುವ ಸಲುವಾಗಿ ಕೇಂದ್ರ ಸರ್ಕಾಋ ಪ್ರತಿ ಜ. 25ರಂದು ರಾಷ್ಟ್ರೀಯ ಮತದಾರರ ದಿನ ಆಚರಿಸುತ್ತಿದೆ. ಚುನಾವಣಾ ಆಯೋಗದ ಆರಂಭದ ಸಂಕೇತವಾಗಿ ಇದನ್ನು 2011ರ ಜ.26ರಿಂದ ಆಚರಿಸಲಾಗುತ್ತಿದೆ.