ಮಳೆಯ ತಾಂಡವದಿಂದ ರಾತ್ರಿಇಡೀ ಜಾಗರಣೆ!


ಧಾರವಾಡ 19: ನಗರದ ಅಶೋಕ ಗಾರ್ಡನ ಪಕ್ಕದಲ್ಲಿರುವ ಮನೆಗಳಾದ ವಾರ್ಡ ನಂ.2ರಲ್ಲಿ ಬರುವ ಮನೆಗಳಿಗೆ ಮಳೆ ಬಂದರೆ ರಾತ್ರಿಯಿಡಿ ಜಾಗರಣೆಯ ಕೆಲಸ. ಆದರೆ ಸಾಗರದಂತೆ ಬರುವ ನೀರು ಕ.ವಿ.ವಿ ಧಾರವಾಡ ಗಣೇಶ ನಗರದ ಮೂಲಕ ನೇರವಾಗಿ ಬಸವನಗರ ಮನೆಗಳಿಗೆ ನುಗ್ಗುತ್ತದೆ. ಸಣ್ಣಮಕ್ಕಳು, ವಯಸ್ಸಾದ ಚಿಕ್ಕ ಚಿಕ್ಕ ಮಕ್ಕಳು ಎಲ್ಲರೂ ರಾತ್ರಿಇಡೀ ಮಳೆ ಬಂದರೆ ಜಾಗರಣೆ ಮಾಡುತ್ತಿದ್ದಾರೆ. ಆದರೆ ಮಹಾನಗರ ಪಾಲಿಕೆಯವರು ಇತ್ತ ಸ್ವಲ್ಪವಾದರೂ ಗಮನಹರಿಸಿ ಸೂಕ್ತ ಪರಿಹಾರ ಕೈಗೊಳ್ಳಬೇಕೆಂದು ಅಲ್ಲಿನ ನಿವಾಸಿಗಳಾದ ಶಿವಾನಂದ ಭಜಂತ್ರಿ, ಪ್ರೇಮಾ, ಪ್ರಿಯಾಂಕ, ರಾಮಚಂದ್ರ ಜಮದಾಳೆ, ಭಾರತಿ, ಪ್ರಶಾಂತ, ಮಾದೇವ, ಬಸ್ಸು ದಾಟನಾಳ, ಸಾವಿತ್ರಿ ದಾಟನಾಳ, ನಿರ್ಮಲಾ ಎತ್ತಿನಮನಿ, ಪಾಲಿಕೆಯವರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ. 

02