ಕೊಪ್ಪಳದಲ್ಲಿಂದು ಕಾರ್ಮಿಕ ಜಂಟಿ ಸಮಿತಿಯಿಂದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ

ಕೊಪ್ಪಳದಲ್ಲಿಂದು ಕಾರ್ಮಿಕ ಜಂಟಿ ಸಮಿತಿಯಿಂದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ  All India General Strike by Labor Joint Committee at Koppal

ಕೊಪ್ಪಳ 08 :ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು)ನೇತೃತ್ವದಲ್ಲಿ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಜುಲೈ 9 ರಂದು ಬುಧವಾರ ನಡೆಯುವ ಅಖಿಲ ಭಾರತ ಸಾರ್ವತ್ರಿಕಾ ಮುಷ್ಕರ ಯಶಸ್ವಿಗೊಳಿಸಲು ಕರೆ ನೀಡಿದೆ.   

ಸಭೆಯಲ್ಲಿ ಚರ್ಚಿಸಿದ ಮುಖಂಡರು ದೈತ್ಯಏಕಸ್ವಾಮ್ಯ ಬಂಡವಾಳಶಾಹಿಗಳ ಅಣತಿಯ ಮೇರೆಗೆ ಬಿಜೆಪಿ ನೇತೃತ್ವದಕೇಂದ್ರ ಸರ್ಕಾರವು ದುಡಿಯುವಜನರಜೀವನ ಮತ್ತುಜೀವನೋಪಾಯದ ಮೇಲೆ ನಿರಂತರ ಫ್ಯಾಸಿಸ್ಟ್‌ ದಾಳಿಗಳನ್ನು ಎಸಗುತ್ತಿರುವ ಸಮಯದಲ್ಲಿ ಈ ಸಾರ್ವತ್ರಿಕ ಮುಷ್ಕರಕ್ಕೆಕರೆ ನೀಡಲಾಗಿದೆ. ಕಾರ​‍್ೊರೇಟ್ಗಳ ಹಿತಾಸಕ್ತಿಗಾಗಿತನ್ನ ’ವ್ಯಾಪಾರ ಮಾಡಲು ಸುಲಭತೆ' ನೀತಿಗೆಅನುಗುಣವಾಗಿಒಟ್ಟಾರೆಯಾಗಿದುಡಿಯುವಜನರ ಮೇಲೆ ವಾಸ್ತವವಾಗಿ ಗುಲಾಮಗಿರಿಯ ಷರತ್ತುಗಳನ್ನು ಹೇರುವ ಸಮಗ್ರ ನೀಲನಕ್ಷೆಗೆಅನುಗುಣವಾಗಿ ಸರ್ಕಾರ ಮುಂದಡಿಯಿಡುತ್ತಿದೆ.ಅವಿರತತ್ಯಾಗ ಬಲಿದಾನಗಳಿಂದ ಗಳಿಸಿದ 29 ಕಾರ್ಮಿಕ ಕಾನೂನುಗಳನ್ನು ಹರಣಗೊಳಿಸಿ ಕಾರ್ಮಿಕ-ವಿರೋಧಿ 4 ಕಾರ್ಮಿಕ ಸಂಹಿತೆ (ಲೇಬರ್‌ಕೋಡ್)ಗಳನ್ನು ಜಾರಿಗೊಳಿಸಲು ಸರ್ಕಾರವುಅತ್ಯಂತ ಸಕ್ರಿಯವಾಗಿದೆ. ಕಾರ್ಮಿಕ ಸಂಹಿತೆಗಳು ಕಾರ್ಮಿಕರ ಬಹುತೇಕಜಾಲ್ತಿಯಲ್ಲಿರುವ ಹಕ್ಕುಗಳನ್ನು ಕಸಿದುಕೊಳ್ಳುತ್ತವೆ. ಆಸ್ತಿತ್ವದಲ್ಲಿರುವ ಉದ್ಯೋಗಗಳನ್ನು ಕಡಿತಗೊಳಿಸಿ, ಖಾಯಂ ಉದ್ಯೋಗಳನ್ನು ಶಾಶ್ವತವಾಗಿ ರದ್ದುಗೊಳಿಸಲಾಗುತ್ತದೆ. ಗುತ್ತಿಗೆ, ಹೊರಗುತ್ತಿಗೆ, ಹೊಸದಾಗಿ ಜಾರಿಗೊಳಿಸಲಾಗುವ ’ನಿಗದಿತಅವಧಿಉದ್ಯೋಗ’  ಇತ್ಯಾದಿಗಳು ಆಳುವ ಬಂಡವಾಳಶಾಹಿ ವರ್ಗ ಮತ್ತುಅದರಅಧೀನ ಸರಕಾರಗಳು ತಮ್ಮಇಚ್ಛೆಯಂತೆಕಾರ್ಮಿಕರನ್ನು ನೇಮಿಸಿಕೊಳ್ಳಲು ಮತ್ತು ವಜಾ ಮಾಡಲುಕೈಗೊಂಡ ಕರಾಳ ವಿನ್ಯಾಸವಾಗಿದೆ. 

ಕಾರ್ಮಿಕರು ಕೆಲಸ ಮಾಡುವ ಅವಧಿ. ಕನಿಷ್ಠ ವೇತನ, ಸಾಮಾಜಿಕ ಭದ್ರತೆಇತ್ಯಾದಿ ಸೇರಿದಂತೆ ವ್ಯಾಖ್ಯಾನಿಸಲಾದ ಕೆಲಸದ ಪರಿಸ್ಥಿತಿಗಳಿಗೆ ಸಂಬಂಧಿಸಿದ ಎಲ್ಲಾ ಮೂಲಭೂತ ಹಕ್ಕುಗಳಿಗೆ ಹಾಗೂ ಯೂನಿಯನ್ ಮಾಡುವ ಹಕ್ಕು, ಮನ್ನಣೆ, ಸಾಮೂಹಿಕ ಚೌಕಾಸಿ, ಅಂದೋಲನಗಳು ಮತ್ತು ’ಮುಷ್ಕರದ ಹಕ್ಕು’ ಸೇರಿದಂತೆಯಾವುದೇರೀತಿಯ ಸಾಮೂಹಿಕ ಪ್ರತಿಭಟನೆಯ ಹಕ್ಕುಗಳನ್ನು ಪ್ರತಿಪಾದಿಸಲು ಇದುಗಂಭೀರ ಸವಾಲಾಗಿದೆ. ಕೆಲವು ವರ್ಷಗಳಿಂದ ಕಾರ್ಮಿಕ ಸಂಹಿತೆಗಳ ಅನುಷ್ಠಾನಕ್ಕೆ ಕಾರ್ಮಿಕ ಸಂಘಟನೆಗಳಿಂದ ಪ್ರಬಲ ಪ್ರತಿರೋಧಇದ್ದುದರ ಪರಿಣಾಮವಾಗಿಇಲ್ಲಿಯವರೆಗೆ ಜಾರಿಗೊಳಿಸಲಾಗಿಲ್ಲ. ಹೀಗಾಗಿ, ಕಾರ್ಮಿಕ ಸಂಹಿತೆಗಳನ್ನು ಸೋಲಿಸಲು ಮತ್ತು ರದ್ದುಗೊಳಿಸಲು ಈ ಕಡು ಕಾರ್ಮಿಕ-ವಿರೋಧಿ ಸಂಹಿತೆಗಳ ವಿರುದ್ಧ ಪ್ರಬಲವಾದ ಹೋರಾಟವನ್ನು ಸಂಘಟಿಸುವಉದ್ದೇಶದಿಂದ ಈ ಸಾರ್ವತ್ರಿಕ ಮುಷ್ಕರಕ್ಕೆಕರೆ ನೀಡಲಾಗಿದೆ.ಭಾರತೀಯರೈಲ್ವೆ, ರಸ್ತೆ ಸಾರಿಗೆ, ವಾಯುಮಾರ್ಗ, ಕಲ್ಲಿದ್ದಲು ಮತ್ತುಕಲ್ಲಿದ್ದಲು-ರಹಿತ ಗಣಿಗಳು, ಬಂದರು ಮತ್ತು ಹಡಗುಕಟ್ಟೆ, ರಕ್ಷಣೆ, ವಿದ್ಯುತ್, ಉಕ್ಕು, ಪೆಟ್ರೋಲಿಯಂ, ಅಂಚೆ, ಟೆಲಿಕಾಂ, ಬ್ಯಾಂಕ್ಗಳು ಮತ್ತು ವಿಮಾ ಕ್ಷೇತ್ರಗಳಂತಹ ಸಾರ್ವಜನಿಕ ಕ್ಷೇತ್ರಗಳ ಹಣವನ್ನು ವಿನಿಯೋಗಿಸಿ ಕಟ್ಟಿ ಬೆಳೆಸಿದ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿಯವರಿಗೆಧಾರೆಯೆರೆಯುವದುರುದ್ದೇಶದಿಂದ ’ರಾಷ್ಟ್ರೀಯ ನಗದೀಕರಣ ಪೈಪ್ ಲೈನ್‌’ ನಾಮಾಂಕಿತದೊಂದಿಗೆಕೇಂದ್ರ ಬಿಜೆಪಿ ಸರ್ಕಾರಖಾಸಗೀಕರಣ ಮಾಡಹೊರಟಿದೆ.ಜಾಗತೀಕರಣದ ಸಮಗ್ರ ನೀತಿಯಒಂದು ಭಾಗವಾಗಿಖಾಸಗೀಕರಣದ ಚಾಲನೆಯನ್ನು ಕಳೆದ ಶತಮಾನದ 90ರ ದಶಕದಆರಂಭದಲ್ಲಿ ಆಗಿನ ಕಾಂಗ್ರೆಸ್ ಸರ್ಕಾರವು ಪ್ರಾರಂಭಿಸಿತು ಎಂಬುದನ್ನು ಮರೆಯಬಾರದು. ನಂತರದಲ್ಲಿ, ಕೇಂದ್ರ ಮತ್ತು ರಾಜ್ಯಗಳಲ್ಲಿ ಎಲ್ಲಾರಾಜಕೀಯ ಬಣ್ಣಗಳ ಸರ್ಕಾರಗಳು ಕಾರ್ಮಿಕವಿರೋಧಿ, ಜನವಿರೋಧಿ ನೀತಿಯನ್ನು ಅನುಸರಿಸಿದವು.ಪ್ರಸ್ತುತ ಬಿಜೆಪಿ ನೇತೃತ್ವದಕೇಂದ್ರ ಸರ್ಕಾರವುಅತ್ಯಂತ ವೇಗವಾಗಿ ಅನುಷ್ಠಾನಗೊಳಿಸುತ್ತಿದೆ.ಆದ್ದರಿಂದ, ಖಾಸಗೀಕರಣದ ನೀತಿಯು ಮೂಲಭೂತವಾಗಿ ನಮ್ಮನ್ನು ಆಳುತ್ತಿರುವ ಬಂಡವಾಳಶಾಹಿ ವರ್ಗದ ನೀತಿಯಾಗಿದೆ.ಈ ನೀತಿಯನ್ನು ಜಾರಿಗೊಳಿಸಲು ಎಲ್ಲಾ ಬಂಡವಾಳಶಾಹಿ ಸರ್ಕಾರಗಳು ಸನ್ನದ್ಧವಾಗಿವೆ.ಓಕಖ ವಿರುದ್ಧದೇಶವ್ಯಾಪಿ ಪ್ರತಿಭಟನಾ ಚಳುವಳಿಗಳ ನಂತರ ಹೊಸ ಪಿಂಚಣಿ ವ್ಯವಸ್ಥೆಗೆ (ಓಕಖ) ಪರ್ಯಾಯಆಯ್ಕೆಯಾಗಿಏಕೀಕೃತ ಪಿಂಚಣಿಯೋಜನೆ (ಗಕಖ) ಅನ್ನು ಜಾರಿಗೊಳಿಸುವ ಹುನ್ನಾರ.ಇದುಘೋರಅನ್ಯಾಯವಾಗಿದ್ದು, ನಿವೃತ್ತ ನೌಕರರುತಮ್ಮ ಉಳಿವಿಗಾಗಿ ಅವರ ಸಾಮಾಜಿಕ ಭದ್ರತೆಯ ಪ್ರಮುಖ ಸವಲತ್ತಾಗಿರುವ ಪಿಂಚಣಿ ಪರಿಕಲ್ಪನೆಯನ್ನೇ ಸಮಾಧಿ ಮಾಡಿದಂತಾಗುತ್ತದೆ.ಆದ್ದರಿಂದಎಲ್ಲಾ ಸಂಬಂಧಿತ ಉದ್ಯೋಗಿಗಳಿಗೆ ದೇಣಿಗೆರಹಿತ ಬೆಲೆ ಸೂಚ್ಯಂಕಕ್ಕೆ ಲಿಂಕ್ ಮಾಡಲಾದ ಹಳೆಯ ಪಿಂಚಣಿಯೋಜನೆ (ಓಕಖ) ಖಾತ್ರಿಪಡಿಸಿ ಹಾಗೂ ವೇತನ ಆಯೋಗಗಳು ಮತ್ತು ವಿವಿಧ ವೇತನ ಮಂಡಳಿಗಳ ನಿಯತಕಾಲಿಕ ವೇತನ/ವೇತನ ಪರಿಷ್ಕರಣೆಗಳ ಸಂಪೂರ್ಣ ಸವಲತ್ತುಗಳನ್ನು ಖಚಿತಪಡಿಸಬೇಕು.ಈ ಹಿನ್ನಲೆಯಲ್ಲಿಕಾರ್ಮಿಕ ವಿರೋಧಿ ಬಂಡವಾಳಶಾಹಿ ನೀತಿಗಳನ್ನು ಸೋಲಿಸಲು ಪ್ರಬಲ ಜಂಟಿಕಾರ್ಮಿಕ ಹೋರಾಟದತುರ್ತುಅವಶ್ಯಕತೆಯಿದೆಎಂದು ಸಭೆ ಗಮನಕ್ಕೆ ತಂದು. ಈ ನಿಟ್ಟಿನಲ್ಲಿ ಸಾರ್ವತ್ರಿಕ ಮುಷ್ಕರವನ್ನು ಯಶಸ್ವಿಗೊಳಿಸಲು ಕಾರ್ಮಿಕ ಸಂಘಟನೆಗಳ ಸಮನ್ವಯ ಸಮಿತಿ ಮುಖಂಡರು ಮನವಿ ಮಾಡಿದರು.ಜುಲೈ 9. 2025ರಂದು ಬುಧವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ನಗರದಕಾವ್ಯಾನಂದ (ಈಶ್ವರ)ಪಾರ್ಕ್‌ ಬಳಿ ಸೇರಿ ಬೃಹತ್ ಮೆರವಣಿಗೆಯು ಅಶೋಕ ವೃತ್ತತಲುಪಿ ಮಾನವ ಸರಪಳಿ ರಚಿಸಿ ಮುಷ್ಕರ ನಡೆಸಲಾಗುವುದುಎಂದು ತಿಳಿಸಿದರು.

ಪೂರ್ವ ಭಾವಿ ಸಭೆಯಲ್ಲಿ ಜೆಸಿಟಿಯು ಸಮಿತಿ  ಮುಖಾಂಡರಾದ ಬಸವರಾಜ್ ಶೀಲವಂತರ್, ಖಾಸಿಮ್ ಸರ್ದಾರ, ಶರಣು ಗಡ್ಡಿ,ಕೆ.ಬಿ.ಗೋನಾಳ್,ಎಸ್‌.ಎ.ಗಫಾರ್, ತುಕಾರಾಂ ಪಾಟ್ರೋಟಿ, ಹನುಮೇಶ್ ಕಲಮಂಗಿ, ಮಹದೇವಪ್ಪ, ಗಾಳೆಪ್ಪ ಮುಂಗೋಲಿ, ಮಖಬೂಲ್‌ರಾಯಚೂರು, ಕೇಶವ್‌ಕಟ್ಟಿಮನಿ ಮುಂತಾದವರು ಉಪಸ್ಥಿತರಿದ್ದರು.