ಹಿಂದೂಗಳು ಎಲ್ಲರೂ ಒಗ್ಗಟ್ಟಾಗಬೇಕಿದೆ : ಈಶ್ವರಸಾ ಮೆಹರವಾಡೆ
All Hindus need to unite: Ishwarasa Meharwade
ಗದಗ 19 : ಪ್ರತಿಯೊಬ್ವ ಹಿಂದೂಗಳು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಆಚರಿಸುವ ಮೂಲಕ ನಾವೇಲ್ಲರೂ ಒಂದಾಗಬೇಕು ಎಂದು ಹಿರಿಯ ಉದ್ಯಮಿ ಈಶ್ವರಸಾ ಮೆಹರವಾಡೆ ಅವರು ಹೇಳಿದರು. ಅವರು ಗದಗ-ಬೆಟಗೇರಿ ಅವಳಿ ನಗರದ 31 ನೇ ವಾರ್ಡಿನ ಜೋಡ ಮಾರುತಿ ದೇವಸ್ಥಾನದ ಎದುರಿಗೆ ಇರುವ ಕಿಲ್ಲಾ ಓಣಿಯ ಎಸ್‌ಎಸ್‌ಕೆ ಸಮಾಜ ಬಾಂಧವರು ಹಮ್ಮಿಕೊಂಡ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಲ್ಲಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಅಖಂಡ ಹಿಂದೂ ಸಮಾಜ ನಿರ್ಮಾಣಕ್ಕಾಗಿ ಛತ್ರಪತಿ ಶಿವಾಜಿ ಮಹಾರಾಜರು ಸಾಕಷ್ಟು ಹೋರಾಟ ಮಾಡಿದ್ದಾರೆ. ಅವರ ಕನಸನ್ನು ನಾವೇಲ್ಲರೂ ನನಸು ಮಾಡಬೇಕಿದೆ. ನಾವೇಲ್ಲ ಹಿಂದೂಗಳು ಒಗ್ಗಟ್ಟಾಗದಿದ್ದರೆ ಮುಂದಿನ ದಿನಗಳಲ್ಲಿ ನಮ್ಮೆಲ್ಲರಿಗೂ ಕಷ್ಟದ ದಿನಗಳು ಬರಲಿವೆ ಎಂದು ಹೇಳಿದ ಅವರು ಎಸ್.ಎಸ್.ಕೆ ಸಮಾಜ ಬಾಂಧವರಿಂದ ಶಿವಾಜಿ ಜಯಂತಿ ನಿಮಿತ್ಯ ಶಾಲಾ ಮಕ್ಕಳಿಗೆ ಕುಡಿಯುವ ನೀರಿನ ಸ್ಟೀಲ್ ಬಾಟಲ್‌ಗಳನ್ನು ನೀಡಿರುವುದು ಶ್ಲಾಘನೀಯವಾಗಿದೆ. ಜೊತೆಗೆ ಮಕ್ಕಳಿಗೆ ಶಿವಾಜಿ ಮಹಾರಾಜ ಜೀವನದ ಕಥೆಗಳನ್ನು ಹೇಳಿ ಅವರನ್ನು ರಾಷ್ಟ್ರಭಕ್ತರನ್ನಾಗಿ ಮಾಡಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಸುಧೀರ ಕಾಟಿಗರ ಅವರು ಮಾತನಾಡಿ, ನಾವೇಲ್ಲರೂ ಒಂದಾಗಿ ಹಿಂದುತ್ವವನ್ನು ರಕ್ಷಣೆ ಮಾಡಬೇಕಿದೆ. ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಿಸಿದರೆ ಮಾತ್ರ ಸಾಲದು ಇಂದಿನ ದಿನಗಳಲ್ಲಿ ಹಿಂದೂಗಳ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ತಡೆಗಟ್ಟಲೂ ನಾವೇಲ್ಲರೂ ಒಗ್ಗಟ್ಟಾಗಿ ಹೋರಾಡಬೇಕಿದೆ ಎಂದು ಹೇಳಿದರು. ಇದಕ್ಕೂ ಮುನ್ನ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಜೋಡ ಮಾರುತಿ ದೇವಸ್ಥಾನದ ಅರ್ಚಕ ರಂಗಪ್ಪ ಪೂಜಾರಿ ಅವರು ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ವಿಠ್ಠಲ ಬಾಂಡಗೆ, ಪರಶುರಾಮ ಬದಿ, ಪದ್ಮಾನಂದ ಬೇವಿನಕಟ್ಟಿ, ರಾಮಚಂದ್ರ ಶಿದ್ಲಿಂಗ, ಪರಶುರಾಮ ಮಿಸ್ಕಿನ್, ಶಿವಾನಂದ ಪೂಜಾರಿ, ನೇಮಚಂದ ಪವಾರ, ಸಂದೀಪ ಕಬಾಡಿ, ಸುನೀಲ ಬಸವಾ, ಲಕ್ಷ್ಮಣ ದೇವಖತ್, ಮನ್ನು ದಲಬಂಜನ, ಪ್ರಕಾಶ ಕಾಟಿಗರ, ರಾಹುಲ್ ಚವ್ಹಾಣ, ರಾಜು ಮಗಜಿ, ನಾರಾಯಣ ಟಿಕಣದಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ನಂತರ ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶ್ರೀಕಾಂತ ಬಾಕಳೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ರವಿ ಚವ್ಹಾಣ ವಂದಿಸಿದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 