ಅಲ್ಬೇನಿಯಾ ಭೂಕಂಪ : ಮೃತರ ಸಂಖ್ಯೆ 46 ಕ್ಕೆ ಏರಿಕೆ

Albania earthquake

ತಿರಾನಾ, ನ 28- ಅಲ್ಬೇನಿಯಾದಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದ ಪ್ರಬಲ ಭೂಕಂಪನದಲ್ಲಿ ಮೃತಪಟ್ಟವರ ಸಂಖ್ಯೆ 46 ಕ್ಕೆ ಏರಿಕೆಯಾಗಿದೆ ಎಂದು ಅಲ್ಲಿನ ರಕ್ಷಣಾ ಸಚಿವಾಲಯ ತಿಳಿಸಿದೆ. 

 ಡುರ್ರೆಸ್ ಮತ್ತು ಕ್ರುಜೆಯಲ್ಲಿ 22 ಜನರು ಭೂಕಂಪಕ್ಕೆ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.ಪರಿಹಾರ ಮತ್ತು ರಕ್ಷಣಾ ಕಾರ್ಯ ಸಮರೋಪಾದಿಯಲ್ಲಿ ಸಾಗಿದೆ.

 ಮಂಗಳವಾರ ಬೆಳಗ್ಗೆ ಅಲ್ಬೇನಿಯಾದಲ್ಲಿ 6.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿತ್ತು.