ಯಶ್ ರಾಜ್ ಅವರ ಆಕ್ಷನ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅಕ್ಷಯ್

  ಮುಂಬೈ, ಡಿ.29     ಬಾಲಿವುಡ್ ನ ಸ್ಟಾರ್ ನಟ ಅಕ್ಷಯ್ ಕುಮಾರ್ ಅವರು ಯಶ್ ರಾಜ್ ಅವರ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಲಿರುವ ಬಿಗ್ ಬಜೆಟ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.     ಅಕ್ಷಯ್ ಕುಮಾರ್ ಅವರು ಇತ್ತೀಚಿಗೆ ಯಶ್ ರಾಜ್ ಅವರ ಪ್ರೊಡಕ್ಷನ್ ನಲ್ಲಿ ಪೃಥ್ವಿರಾಜ್ ಚಿತ್ರದ ಶೂಟಿಂಗ್ ಆರಂಭಿಸಿದ್ದಾರೆ. ಅಕ್ಷಯ್ ಕುಮಾರ್, ಯಶ್ ರಾಜ್ ಅವರ ಇನ್ನೊಂದು ಚಿತ್ರಕ್ಕೆ ಸಹಿ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಈ ಚಿತ್ರ ಆಕ್ಷನ್ ಚಿತ್ರವಾಗಿದ್ದು, ಬಿಗ್ ಬಜೆಟ್ ನಲ್ಲಿ ಮೂಡಿ ಬರಲಿದೆ. ರಾಹುಲ್ ರವೈಲ್ ಅವರ ಪುತ್ರ ಶಿವ್ ರವೈಲ್ ಚಿತ್ರದ ನಿರ್ದೇಶನ ಮಾಡಲಿದ್ದಾರೆ. ಇದು ಶಿವ್ ಅವರ ಚೊಚ್ಚಲ ನಿರ್ದೇಶನವಾಗಿದೆ.     ಈ ಚಿತ್ರದ ಚಿತ್ರಿಕರಣ ಮುದಿನ ವರ್ಷದ ಮಧ್ಯದಲ್ಲಿ ಆರಂಭವಾಗುವ ಸಾಧ್ಯತೆ ಇದೆ. ಅಕ್ಷಯ್ ಅವರಿಗೆ ಈ ಚಿತ್ರದ ತಿರುಳು ಇಷ್ಟವಾಗಿದೆ. ಅಕ್ಷಯ್ ಅವರೇ ಈ ಚಿತ್ರವನ್ನು ಬೇಗನೆ ಆರಂಭಿಸಲು ಉತ್ಸುಕರಾಗಿದ್ದಾರೆ. 'ಧೂಮ್ 3', 'ಫ್ಯಾನ್' ಮತ್ತು 'ಬೆಫಿಕ್ರೆ' ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಶಿವ್ ರವೈಲ್ ಕೆಲಸ ಮಾಡಿದ್ದಾರೆ.