ಪಿಎಂ ಕೇರ್ಸ್ ನಿಧಿಗೆ ಅಕ್ಷಯ್ ಕುಮಾರ್ ೨೫ ಕೋಟಿ ದೇಣಿಗೆ ಶತ್ರುಘ್ನ ಸಿನ್ಹಾ ಆಕ್ಷೇಪ
ಮುಂಬೈ, ಏ ೧6, ಕೊರೊನಾ ವೈರಸ್ ಸೋಂಕಿನ ವಿರುದ್ಧ ಹೋರಾಡುತ್ತಿರುವ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿ ಬಾಲಿವುಡ್ ನಟ ಅಕ್ಷಯ್ ಕುಮಾರ್, ಪ್ರಧಾನಿ ನರೇಂದ್ರ ಮೋದಿ ಅವರ ’ಪಿಎಂ- ಕೇರ್ಸ್’ ನಿಧಿಗೆ ೨೫ ಕೋಟಿರೂ ಭಾರಿ ಮೊತ್ತ ನೀಡಿರುವುದು ದೊಡ್ಡ ತಪ್ಪು ಎಂದು ಬಾಲಿವುಡ್ ಹಿರಿಯ ನಟ, ಕಾಂಗ್ರೆಸ್ ಮುಖಂಡ ಶತ್ರುಘ್ನ ಸಿನ್ಹಾ ಅಸಮಧಾನ ವ್ಯಕ್ತಪಡಿಸಿದ್ದಾರೆ. ಇಷ್ಟು ದೊಡ್ಡ ಮೊತ್ತ ದೇಣಿಗೆ ನೀಡುವುದೆಂದರೆ ಇತರರನ್ನು ಹೀಯಾಳಿಸಿದಂತೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.ಕೊರೊನಾ ವಿರುದ್ಧದ ಹೋರಾಟದ ಭಾಗವಾಗಿ, ಅಕ್ಷಯ್ ಕುಮಾರ್ ಪಿ ಎಂ ಕೇರ್ಸ್ ನಿಧಿಗೆ ೨೫ ಕೋಟಿ ರೂ ದೊಡ್ಡ ದೇಣಿಗೆ ನೀಡುವ ಜತೆಗೆ, ಮುಂಬೈ ಮಹಾನಗರ ಪಾಲಿಕೆಗೆ ೩ ಕೋಟಿ ದೇಣಿಗೆ ಪ್ರಕಟಿಸಿ ಸ್ಚಚ್ಚತಾ ಕಾರ್ಮಿಕರಿಗೆ ಅಗತ್ಯವಾಗಿರುವ ವ್ಯಕ್ತಿಗತ ರಕ್ಷಣಾ ಪರಿಕರಗಳು, ತ್ವರಿತ ಟೆಸ್ಟಿಂಗ್ ಕಿಟ್ ಗಳ ಪೂರೈಕೆಗೆ ಈ ಹಣ ನೀಡುವುದಾಗಿ ಪ್ರಕಟಿಸಿದ್ದಾರೆ. ಆದರೆ, ಶತ್ರುಘ್ನ ಸಿನ್ಹಾ ಇಷ್ಟು ದೊಡ್ಡ ಪ್ರಮಾಣದ ದೇಣಿಗೆ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ದೇಣಿಗೆ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ, ಆದರೆ ಅದನ್ನು ಏಕೆ ಬಹಿರಂಗವಾಗಿ ಹೇಳಿಕೊಳ್ಳಬೇಕು..? ಎಂದು ಸಿನ್ಹಾ ಪ್ರಶ್ನಿಸಿದ್ದಾರೆ. ಭಾರಿ ಪ್ರಮಾಣದ ದೇಣಿಗೆ ನೀಡುವ ಮೂಲಕ ಇತರರನ್ನು ಹೀಯಾಳಿಸದಂತಾಗುತ್ತದೆ ಏಕೆಂದರೆ..ಉಳಿದವರು ಅಕ್ಷಯ್ ನೀಡಿದ ದೇಣಿಗೆಗೆ ಹೋಲಿಸಿಕೊಂಡು.. ತಾವು ನೀಡುತ್ತಿರುವುದು ಅತ್ಯಂತ ಚಿಕ್ಕಮೊತ್ತ ಎಂದು ದೇಣಿಗೆ ನೀಡುವುದನ್ನೇ ನಿಲ್ಲಿಸಿಬಿಡುತ್ತಾರೆ. ವಿಶ್ವದ ಇತರೆಡೆ, ಸೆಲೆಬ್ರಿಟಿಗಳು ಇಷ್ಟು ದೊಡ್ಡ ಪ್ರಮಾಣದ ದೇಣಿಗೆ ನೀಡಿ ದೊಡ್ಡದಾಗಿ ಹೇಳಿಕೊಂಡಿಲ್ಲ ಎಂದು ಸಿನ್ಹಾ ವ್ಯಂಗ್ಯವಾಡಿದ್ದಾರೆ.
ಒಂದು ವೇಳೆ ಯಾರಾದರೂ ೨೫ ಕೋಟಿ ದೇಣಿಗೆಯನ್ನು ನೀಡಿದ್ದರೂ, ನಾವು ನೀಡುವ ದೇಣಿಯಿಂದ ಏನಾದರೂ ಉಪಯೋಗವಾಲಿದೆಯೇ ಎಂದು ಆಲೋಚಿಸಿದರೆ, ಇಂತಹ ಸಂಕಷ್ಟದ ಸಮಯದಲ್ಲಿ ಎಲ್ಲರೂ ತಮಗೆ ತೋಚಿದಷ್ಟು ಸಹಾಯ ಮಾಡುತ್ತಾರೆ. ಆದರೆ, ದೇಣಿಗೆ ನೀಡುವುದನ್ನು ಸ್ಪರ್ಧೆಯಂತೆ ಪರಿವರ್ತಿಸಿ, ಸಣ್ಣ ಪುಟ್ಟ ದೇಣಿಗೆ ನೀಡುವವರ ಮನಸ್ಸು ನೋಯಿಸಬೇಡಿ ಎಂದು ಸಿನ್ಹಾ ಮನವಿ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ದೇಶಾದ್ಯಂತ ವಿಧಿಸಿರುವ ಲಾಕ್‌ಡೌನ್ ಬಗ್ಗೆ ಪ್ರತಿಕ್ರಿಯಿಸಿದ ಸಿನ್ಹಾ, ಪ್ರಧಾನ ಮಂತ್ರಿಗಳ ನಿರ್ಧಾರ ಶ್ಲಾಘನೀಯ, ಆದರೆ ವಿಳಂಬವಾಗಿದೆ ಎಂದು ಹೇಳಿದ್ದಾರೆ. ಲಾಕ್ ಡೌನ್ ನಂತರ ಚಿತ್ರರಂಗದಲ್ಲಿ ದುಡಿಯುವ ಕಾರ್ಮಿಕರು ಹಾಗೂ ಕಿರಿಯ ಕಲಾವಿದರು ತುಂಬಾ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಎಲ್ಲರೂ ಇಂತಹ ಬಡವರಿಗೆ ಸಹಾಯ ಮಾಡಬೇಕು ಮನವಿ ಮಾಡಿದ್ದಾರೆ. ಶತ್ರುಘ್ನ ಸಿನ್ಹಾ ಅವರ ಹೇಳಿಕೆಗೆ ಅಕ್ಷಯ್ ಕುಮಾರ್ ಅವರ ಪ್ರತಿಕ್ರಿಯೆ ಲಭಿಸಿಲ್ಲ.
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು 