ಅಕ್ರಮ ಸಾರಾಯಿ ಸಾಗಾಟ ; ಇಬ್ಬರ ‌ಬಂಧನ‌

ಅಕ್ರಮ ಸಾರಾಯಿ
ಅಕ್ರಮ ಸಾರಾಯಿ ಸಾಗಾಟ ; ಇಬ್ಬರ ‌ಬಂಧನ‌

ಕಾರವಾರ.ಜ.29:  ಅಕ್ರಮವಾಗಿ ಕಾರಿನಲ್ಲಿ ಸಾಗಿಸುತ್ತಿದ್ದ ಗೋವಾ ಸಾರಾಯಿ ಹಾಗೂ ಇಬ್ಬರು ಆರೋಪಿಯನ್ನು ವಶಕ್ಕೆ ಪಡೆದ ಘಟನೆ ಮಾಜಾಳಿ ಚೆಕ್ ಪೋಸ್ಟ್ ಬಳಿ  ಶುಕ್ರವಾರ ಬೆಳಿಗ್ಗೆ ನಡೆದಿದೆ.

ಹುಬ್ಬಳಿ ಮೂಲದ ಆರೋಪಿಗಳಾದ ಸಂದೀಪ ಹಾಗೂ ನಾರಾಯಣ ಇವರು ಗೋವಾದಿಂದ ತಮ್ಮ ಕಾರಿನಲ್ಲಿ ಸುಮಾರು 85800.00ರೂ. ಮೌಲ್ಯದ ಸಾರಾಯಿಯನ್ನು ಯಾವುದೇ ಪರವಾನಿಗೆ ಇಲ್ಲದೇ , ಲಾಭಕ್ಕಾಗಿ ಅಕ್ರಮವಾಗಿ ಸಾಗಿಸುವ ವೇಳೆ ಚೆಕ್ ಪೋಸ್ಟ್ ಬಳಿ ಪೊಲೀಸ್ ಸಿಬ್ಬಂದಿಗೆ ಸಿಕ್ಕಿಬಿದ್ದಿದ್ದಾರೆ.
ತಪಾಸಣೆ ನಡೆಸುವ ವೇಳೆ ವಾಹನ ನಿಲ್ಲಿಸದೇ ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆದು ಪರಾಗಿಯಾಗಲು ಯತ್ನಿಸಿದರು. ಈ ಮಾಹಿತಿ ತಕ್ಷಣ ಚಿತ್ತಾಕುಲಾ ಪೊಲೀಸ್ ಠಾಣೆಗೆ ಮಾಹಿತಿ ರವಾನೆಯಾಯಿತು. 
 ಚಿತ್ತಾಕುಲ ಠಾಣೆಯ ಪಿಎಸೈ ಪ್ರವೀಣಕುಮಾರ ಹಾಗೂ ಕ್ರೈಂ ಪಿಎಸೈ ಮಾಹಾತೇಶ ತಕ್ಷಣ , ಅಕ್ರಮ ಮದ್ಯ ಇದ್ದ ,  ವಾಹನವನ್ನು ಹಿಡಿದು ವಶಕ್ಕೆ ಪಡೆದರು. ಇಬ್ಬರನ್ನು ಬಂಧಿಸಿದರು.
ಬಳಿಕ ಈ ಬಗ್ಗೆ ಚಿತ್ತಾಕುಲ ಠಾಣೆಯಲ್ಲಿ ದೂರು ದಾಖಲಾಗಿದೆ. ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.