ಅಕ್ಕಮಹಾದೇವಿ: ದಿಟ್ಟ ನಿಲುವು ಗಟ್ಟಿತನದ ಪ್ರತೀಕ

ಅಕ್ಕಮಹಾದೇವಿ: ದಿಟ್ಟ ನಿಲುವು ಗಟ್ಟಿತನದ ಪ್ರತೀಕ Akkamahadevi: A symbol of strength and boldness

ಹೂವಿನ ಹಡಗಲಿ 07: ಅಕ್ಕಮಹಾದೇವಿ ದಿಟ್ಟ ನೆಲವು ಗಟ್ಟಿತನದ ಪ್ರತೀಕವಾಗಿದ್ದಾಳೆ. ರಾಜಸತ್ತೆ ಮತ್ತು ಮತ ಸತ್ತೆಯನ್ನು ಏಕಕಾಲದಲ್ಲಿ ಪ್ರಶ್ನಿಸಿದ ಕನ್ನಡದ ಮೊದಲ ಕವಯಿತ್ರಿ ’ಅಕ್ಕ’ ಎಂದು ಉಪನ್ಯಾಸಕಿ ಡಾ. ಶೈಲಜಾ ಪವಾಡ ಶೆಟ್ಟರ ಅಭಿಪ್ರಾಯಪಟ್ಟರು.   

ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಪಟ್ಟಣದ ಮುಖಂಡರಾದ ಕೋಡಿಹಳ್ಳಿ ಮುದುಕಪ್ಪನವರ ವಿನಾಯಕ ಸಾಮಿಲ್ ನಲ್ಲಿ ಆಯೋಜಿಸಿದ ಕನ್ನಿಹಳ್ಳಿ ಗಂಗಮ್ಮ,ಪರಮೇಶ್ವರ​‍್ಪ ದತ್ತಿ, ಗಂಗಾವತಿ ಜನಾರ್ಧನ   ಶ್ರೇಷ್ಠಿ ಸ್ಮಾರಕ ದತ್ತಿ, ರೇಣುಕಾಚಾರ್ಯ ವಿದ್ಯಾ ಸಂಸ್ಥೆ ದತ್ತಿ, ಕನ್ನಿಹಳ್ಳಿ ಅಡವಿಬಸಪ್ಪ,ಬಸಮ್ಮ ಸ್ಮಾರಕ ದತ್ತಿ ಉಪನ್ಯಾಸ, ’ಕಾವ್ಯ ಪೂರ್ಣಿಮಾ’ ಬೆಳದಿಂಗಳ ಕವಿಗೋಷ್ಠಿ, ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿ ’ಅಕ್ಕಮಹಾದೇವಿ’ ವಿಷಯ ಕುರಿತು ಮಾತನಾಡಿ ಅಕ್ಕ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹೆಣ್ಣಿನ ಧ್ವನಿಯನ್ನು ಮೊದಲು ಎತ್ತಿದ ವಚನಕಾರ್ತಿಯಾಗಿದ್ದಾಳೆ,  ಆ ಮೂಲಕ ಬಂಡಾಯ ಹೋರಾಟದ ಆದ್ಯ ಪ್ರವರ್ತಕಿಯಾಗಿದ್ದಾಳೆ ಎಂದರು. ಪಟ್ಟಣದ ವಕೀಲರಾದ ಹಣ್ಣಿ ಕೈಲಾಸನಾಥ ಕಾರ್ಯಕ್ರಮ ಉದ್ಘಾಟಿಸಿ ಸಾಹಿತ್ಯ ಪರಿಷತ್ತಿನ ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಸಮುದಾಯದಲ್ಲಿ ಸ್ಪೂರ್ತಿ ಉಂಟುಮಾಡಲಿ ಎಂದರು. ಶಾಸಕರಾದ ಕೃಷ್ಣನಾಯಕ ಧಾರ್ಮಿಕ ಪೂಜಾ ಸಂದರ್ಭದಲ್ಲಿ ಸಾಹಿತ್ಯಿಕ,ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಅಭಿನಂದನೀಯ ಎಂದರು.  

ಮ.ನಿ.ಪ್ರ. ಅಭಿನವ ಚನ್ನಬಸವ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಕೋಡಿಹಳ್ಳಿ ಮುದುಕಪ್ಪ, ದತ್ತಿದಾನಿಗಳಾದ ಕನ್ನಿಹಳ್ಳಿ ಮುದುಕಪ್ಪ, ಜಿ.ಕಾರ್ತಿಕ ಹಾಗೂ ಕೆ.ಶಶಿಧರ ಇದ್ದರು. ’ಕಾವ್ಯ ಪೂರ್ಣಿಮಾ’ ಕವಿಗೋಷ್ಠಿಯಲ್ಲಿ ಕವಿಗಳಾದ ಸಿ.ಎನ್‌. ಸೋಮೇಶಪ್ಪ, ರೋಷನ್ ಜಮೀರ್, ಪ್ರವೀಣ ದೈವಜ್ಞಾಚಾರ್, ಕೆ.ಮಂಜುನಾಥ, ಸಹದೇವಪ್ಪ ನಿಗದಿ, ಎ.ಅಶೋಕ ಕವನ ವಾಚಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕಸಾಪ ಅಧ್ಯಕ್ಷ ಟಿ.ವೀರೇಂದ್ರ ಪಾಟೀಲ್ ವಹಿಸಿದ್ದರು. ಬಿ.ಯುವರಾಜಗೌಡ ಪ್ರಾರ್ಥಿಸಿದರು. ಸಹದೇವಪ್ಪ ನಿಗದಿ ಸ್ವಾಗತಿಸಿದರು. ಕೊಟ್ರೇಶ ಕೋಡಿಹಳ್ಳಿ ವಂದಿಸಿದರು. ಹಡಗಲಿ ಬಸವರಾಜ  ನಿರ್ವಹಿಸಿದರು. ನಂತರ ಮಲ್ಲಿಗೆ ಕಲಾ ಸಂಸ್ಥೆಯ ಅಧ್ಯಕ್ಷ ಬಿ.ಯುವರಾಜಗೌಡ ಹಾಗೂ ಸಂಗಡಿಗರು ನಡೆಸಿಕೊಟ್ಟ ಮಾಸಿಕ ಗಾನಸುದೆ ಸಂಗೀತ ಕಾರ್ಯಕ್ರಮವು ಸಭಿಕರ ಮನಸೂರೆಗೊಂಡಿತು.