ಮಹಿಳಾ ಸ್ವಾಭಿಮಾನ ಮತ್ತು ಆತ್ಮಬಲದ ಸಂಕೇತ ಅಕ್ಕಮಹಾದೇವಿ: ಸುಮತಿ ಗದಗ

Akka Mahadevi is a symbol of women's self-respect and self-confidence: Sumati Gadag

ಕುಕನೂರು 13: ಮಹಿಳಾ ಸ್ವಾಭಿಮಾನ ಮತ್ತು ಆತ್ಮಬಲದ ಸಂಕೇತ ಅಕ್ಕಮಹಾದೇವಿ ಅವರ ಜೀವನದ ಯಶೋಗಾಥೆಯು ಅಬಲೆಯರಿಗೆ ಶಕ್ತಿಯ ಮೈಲಿಗಲ್ಲಾಗಿದೆ ಎಂದು ಅಕ್ಕನ ಬಳಗದ ಸದಸ್ಯರಾದ ಸುಮತಿ ಗದಗ ಮಾತನಾಡಿದರು. 

ಕುಕನೂರು ಪಟ್ಟಣದ ಅನ್ನದಾನೇಶ್ವರ ಶಾಖಾ ಮಠದಲ್ಲಿ  ಶನಿವಾರದಂದು ಅಕ್ಕಮಹಾದೇವಿ ಜಯಂತಿಯನ್ನು ಅಕ್ಕನ ಬಳಗದ ವತಿಯಿಂದ  ಪೂಜೆಯನ್ನು ಮತ್ತು ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು. 

ಕನ್ನಡ ಸಾಹಿತ್ಯದ ಮೊದಲ ಬಂಡಾಯ ಕವಯತ್ರಿ, ವಚನಗಾರ್ತಿ ಹಾಗೂ ಮಹಿಳೆಯರ ಪ್ರತಿನಿಧಿಯಾಗಿ, ಸಾಮಾಜಿಕ ಬದಲಾವಣೆಗೆ ಶ್ರಮಿಸಿದ ಅಕ್ಕಮಹಾದೇವಿಯ ಬದುಕೇ ಒಂದುಮಹಾಕಾವ್ಯವಾಗಿದೆ ಎಂದು ಹೇಳಿದರು.ಕಾರ್ಯಕ್ರಮದ ನಿರೂಪಣೆಯನ್ನು ಗಿರಿಜಾ ನೆರೆಗಲ್ಲಮಠ ನೆರವೇರಿಸಿದರು.ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯವನ್ನು ಡಾಕ್ಟರ್ ಮಹದೇವ ಮಹಾಸ್ವಾಮಿಗಳು, ವೀರಯ್ಯ ತೋಂಟದಾರ್ಯಮಠ,ಅಕ್ಕನ ಬಳಗದ ಅಧ್ಯಕ್ಷರಾದ ನಿರ್ಮಲ ಕಳ್ಳಿಮಠ, ಶಿವು ಬಾಯಿ, ರತ್ನಮ್ಮ ಗದಿಗ, ಉಮಾ ಸೊರಟೂರು, ಗಿರಿಜಾ ಕನಕಗಿರಿ, ಕುಸುಮ ಜೋಳದ, ಲಾವಣ್ಯ, ಕುಸುಮ ಸುಲಾಕೆ, ನೀಲಮ್ಮ, ಚೆನ್ನಮ್ಮ ವಾಲಿ, ಲಕ್ಷ್ಮಿ, ಅನ್ನಪೂರ್ಣ, ಜ್ಯೋತಿ ಗುತ್ತಿ, ಲತಾ ಗುತ್ತಿ, ಗೀತಾ, ಸ್ನೇಹ ಸಮ್ಮೇಳನ ಬಳಗದ ಸದಸ್ಯರು ಅನ್ನದಾನಿಶ್ವರ ನಗರದ ಮಹಿಳೆಯರು ಅನ್ನದಾನೇಶ್ವರ ಶಾಖ ಮಠದ ಆಡಳಿತ ಮಂಡಳಿಯವರು ಇತರರು ಇದ್ದರು.