ಬಾರಾಮತಿಯಲ್ಲಿ ಅಜಿತ್ ಪವಾರ್ ಗೆಲುವು..

ಮುಂಬೈ, ಅ 24:       ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಬಿಜೆಪಿ ಅಬ್ಬರದ ನಡುವೆಯೂ ಎನ್ ಸಿ ಪಿ ನಾಯಕ ಶರದ್ ಪವಾರ್ ಪಶ್ಚಿಮ ಮಹಾರಾಷ್ಟ್ರದಲ್ಲಿ ತಮ್ಮ ಮತ ಬ್ಯಾಂಕ್ ಅನ್ನು, ರಾಜಕೀಯ ನೆಲೆಯನ್ನು ಗಟ್ಟಿಯಾಗಿಯೇ ಉಳಿಸಿಕೊಂಡಿರುವುದು ಫಲಿತಾಂಶಗಳಿಂದ ಗೊತ್ತಾಗಿದೆ. 

ಬಾರಾಮತಿಯಲ್ಲಿ ಶರದ್ ಪವಾರ್ ಅವರ ಸೋದರಳಿಯ ಅಜಿತ್ ಪವಾರ್ ವಿಜಯ ಸಾಧಿಸಿದ್ದಾರೆ. ಈ ನಡುವೆ ಮತ್ತೊಂದು ಬೆಳವಣಿಗೆಯಲ್ಲಿ ಅವರ ವಿರುದ್ಧ ಸ್ಪರ್ಧೆ ಮಾಡಿದ್ದ ಬಿ ಎಸ್ ಪಿ ಯ ಅಶೋಕ್ ಮಾನೆ ಅವರು ಅಜಿತ್ ಪವಾರ್ ಅವರ ಪರವಾಗಿ, ಅಜಿತ್ ಪರವಾಗಿ ಬೆಂಬಲ ನೀಡಿದರೂ ಪ್ರಚಾರಕ್ಕೆ ಹೋಗದೇ ಕಣದಿಂದ ಹಿಂದೆ ಸರಿದಿದ್ದಾರೆ ಎಂದು ಆರೋಪಿಸಿ ಬಿ ಎಸ್ ಪಿ ಯ ಕೆಲವು ಕಾರ್ಯಕರ್ತರು ಅಭ್ಯರ್ಥಿ ಅಶೋಕ್ ಮಾನೆ ಮೇಲೆ ಹಲ್ಲೆ ನಡೆಸಿದ್ದಾರೆ. 

ಈ ಸಂಬಂಧ ಅಶೋಕ್ ಮಾನೆ ಅವರು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ತಮಗೆ ಪಕ್ಷದ ಯಾವುದೇ ಕಾರ್ಯಕರ್ತರು ಪ್ರಚಾರ ಸಮಯದಲ್ಲಿ ಸಹಕಾರ ನೀಡದೇ ತಾತ್ಸರ ಮಾಡಿದ್ದಾರೆ. ಇದರಿಂದ ಮನನೊಂದು, ಬೇಸರಗೊಂಡು ತಾವು ಕಣದಿಂದ ಮತ್ತು ಪ್ರಚಾರದಿಂದ ಹಿಂದೆ ಸರಿದು ಎನ್ ಸಿ ಪಿ ಅಭ್ಯರ್ಥಿ ಅಜಿತ್ ಪವಾರ್ ಅವರಿಗೆ ಬೆಂಬಲ ನೀಡಿರುವುದಾಗಿ ಅಶೋಕ್ ಮಾನೆ ಆಪ್ತರ ಬಳಿ ಹೇಳಿಕೊಂಡಿದ್ದರು ಎನ್ನಲಾಗಿದೆ.