ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ

ಡಮಾಸ್ಕಸ್, ಫೆ.28 :   ಸಿರಿಯಾದ ವಾಯುವ್ಯ ಪ್ರಾಂತ್ಯದ ಇಡ್ಲಿಬ್‌ನಲ್ಲಿ ಬಂಡುಕೋರರ ವಶದಲ್ಲಿರುವ ಪ್ರದೇಶಗಳ ಮೇಲೆ ವೈಮಾನಿಕ ದಾಳಿ ನಡೆದಿದ್ದು, 34 ಟರ್ಕಿ ಸೈನಿಕರು ಸಾವನ್ನಪ್ಪಿರುವುದಾಗಿ ಯುದ್ಧ ಮಾನಿಟರ್ ವರದಿ ಮಾಡಿದೆ.

ರಷ್ಯಾ ಮತ್ತು ಸಿರಿಯನ್ ವೈಮಾನಿಕ ದಾಳಿಗಳು ಇಡ್ಲಿಬ್ ಗ್ರಾಮಾಂತರ ಪ್ರದೇಶದಲ್ಲಿರುವ ಬಾರಾ ಮತ್ತು ಬಿಲಿಯನ್ ಪಟ್ಟಣಗಳ ನಡುವಿನ ಪ್ರದೇಶವನ್ನು ಗುರಿಯಾಗಿಸಿಕೊಂಡು ನಡೆದಿದ್ದು ಹೆಚ್ಚಿನ ಸಾವುನೋವುಗಳ ವರದಿಗಳ ನಡುವೆಯೂ 34 ಟರ್ಕಿಶ್ ಸೈನಿಕರನ್ನು ದಾಳಿಯಲ್ಲಿ  ಕೊಂದಿವೆ ಎಂದು ಸಿರಿಯನ್ ಮಾನವ ಹಕ್ಕುಗಳ ವೀಕ್ಷಣಾಲಯ ತಿಳಿಸಿದೆ.

ಇಡ್ಲಿಬ್‌ನಲ್ಲಿನ ಬಂಡುಕೋರರಿಗೆ ಮೊಬೈಲ್ ವಿಮಾನ ವಿರೋಧಿ ಲಾಂಚರ್‌ಗಳನ್ನು ಟರ್ಕಿ ಒದಗಿಸುತ್ತಿದೆ ಎಂದು ರಷ್ಯಾ ಆರೋಪಿಸಿದ್ದರಿಂದ ಗುರುವಾರ ಉದ್ವಿಗ್ನತೆ ಹೆಚ್ಚಾಗಿತ್ತು.

ಸಿರಿಯಾ ಸೇನೆಯು ಮಧ್ಯ ಸಿರಿಯಾದ ಹಮಾ ಪ್ರಾಂತ್ಯದ ವಾಯುವ್ಯ ಗ್ರಾಮಾಂತರ ಮತ್ತು ಇಡ್ಲಿಬ್‌ನ ದಕ್ಷಿಣ ಗ್ರಾಮಾಂತರ ಪ್ರದೇಶದಲ್ಲಿ ದಾಳಿ ನಡೆಸುತ್ತಿದ್ದು, ಜಿಸ್ರ್ ಅಲ್-ಶುಘೌರ್‌ನಿಂದ 17 ಕಿ.ಮೀ ದೂರದಲ್ಲಿದೆ ಎಂದು ಯುಕೆ ಮೂಲದ ವಾಚ್‌ಡಾಗ್ ಗುಂಪು ಹೇಳಿದೆ.

ಪೂರ್ವ ಇಡ್ಲಿಬ್ ಗ್ರಾಮಾಂತರದಲ್ಲಿರುವ ಸಾರಾಕೆಬ್ ನಗರದ ಸುತ್ತಲೂ ಯುದ್ಧಗಳು ಮುಂದುವರೆದಿವೆ ಎಂದು ವೀಕ್ಷಣಾಲಯ ತಿಳಿಸಿದ್ದು, ಟರ್ಕಿ ಬೆಂಬಲಿತ ಬಂಡುಕೋರರು ಸಾರಾಕೆಬ್‌ನನ್ನು ವಶಪಡಿಸಿಕೊಂಡಿರುವುದಾಗಿಯೂ ಅದು ಹೇಳಿದೆ.