ಕೊಲಂಬಿಯಾದಲ್ಲಿ ವಿಮಾನ ದುರಂತ: ನಾಲ್ವರು ಸಾವು

ಬೊಗೋಟಾ, ಫೆ 13,  ಕೊಲಂಬಿಯಾ ರಾಜಧಾನಿ ಬೊಗೋಟಾದ ಉತ್ತರ ಭಾಗದಲ್ಲಿ ಅವಳಿ ಎಂಜಿನ್ ವಿಮಾನ ಅಪಘಾತಕ್ಕೀಡಾಗಿ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ ತಿಳಿಸಿದೆ. ಬುಧವಾರ ವಿಮಾನ ಹೊರಟ ಕೆಲವೇ ನಿಮಿಷಗಳಲ್ಲಿ ಅಪಘಾತ ಸಂಭವಿಸಿದೆ ಎಂದು ಸಂಸ್ಥೆ ತಿಳಿಸಿದೆ. ಅಪಘಾತದ ಕಾರಣ ಕಂಡುಹಿಡಿಯಲು ತನಿಖಾ ತಂಡವನ್ನು ಘಟನಾ ಸ್ಥಳಕ್ಕೆ ಕಳುಹಿಸಲಾಗಿದೆ.

ಕೊಲಂಬಿಯಾದ ಪೊಪಯಾನ್ ನಲ್ಲಿ ಕಳೆದ ವರ್ಷದ ಸೆಪ್ಟೆಂಬರ್ ನಲ್ಲಿ ಸಣ್ಣ ವಿಮಾನವೊಂದು ಅಪಘಾತಕ್ಕೀಡಾಗಿ ಏಳು ಮಂದಿ ಮೃತಪಟ್ಟಿದ್ದರು. ಈ ವಿಮಾನವೂ ಸಹ ಪೊಪಯಾನ್ ವಿಮಾನ ನಿಲ್ದಾಣದಿಂದ ಹೊರಟ ಕೆಲವೇ ನಿಮಿಷಗಳಲ್ಲಿ ದುರಂತಕ್ಕೀಡಾಗಿತ್ತು. ಕಳೆದ ವರ್ಷದ ಮಾರ್ಚ್ ನಲ್ಲಿ ಇದೇ ಕೊಲಂಬಿಯಾದ ವಿಲ್ಲಾವಿಸೆನ್ಸಿಯೊದಲ್ಲಿ 30 ಆಸನದ ಡೊಗ್ಲಾಸ್-ಡಿಸಿ 3 ವಿಮಾನ ದುರಂತಕ್ಕೀಡಾಗಿ 12 ಮಂದಿ ಮೃತಪಟ್ಟಿದ್ದರು.