ಸಾಂಬ್ರಾಕ್ಕೆ ಬಂದಿಳಿಯಿತು ಏರ್ಬಸ್


ಬೆಳಗಾವಿ : ಇಲ್ಲಿನ ಸಾಂಬ್ರಾ ವಿಮಾನ ನಿಲ್ಧಾಣದ ಅಭಿವೃದ್ದಿ ಸೇರಿದಂತೆ ರನ್ವೇ ಅಗಲೀಕರಣ ಮಾಡಿದ ನಂತರ ಮೊದಲ ಬಾರಿಗೆ 140 ಪ್ರಯಾಣಿಕರನ್ನು ಹೊತ್ತು ಸಾಗುವ ಸಾಮಥ್ರ್ಯದ ಏರ್ಬಸ್ (ವಿಮಾನ)ವು ಶುಕ್ರವಾರ ಬೆಳಿಗ್ಗೆ ಸಾಂಬ್ರಾ ವಿಮಾನ ನಿಲ್ಧಾನದಲ್ಲಿ ಭೂಸ್ಪರ್ಷ ಮಾಡಿತು. 

ಶುಕ್ರವಾರ ದಿನದ ಬೆಳಿಗ್ಗೆ ಬೆಂಗಳೂರಿನಿಂದ ಬೆಳಗಾವಿಗೆ ಆಗಮಿಸಿದ ಏರ್ಬಸ್ನ್ನು ಚಿಕ್ಕೋಡಿ ಸಂಸದ ಪ್ರಕಾಶ ಹುಕ್ಕೇರಿ ಅವರು ಸ್ವಾಗತಿಸುವ ಮೂಲಕ ವಿಮಾನವನ್ನು ಬರಮಾಡಿಕೊಂಡರು. 140 ಸೀಟುಗಳುಳ್ಳ ಸಾಮಥ್ರ್ಯದ ಏರ್ಬಸ್ನಲ್ಲಿ 110 ಜನ ಪ್ರಯಾಣಿಕರಿದ್ದರು. ಈ ವಿಮಾನವು ಒಂದು ವಾರದ ಏಳು ದಿನವೂ ಬೆಳಗಾವಿಯಿಂದ ಬೆಂಗಳೂರಿಗೆ ಹಾಗೂ ಬೆಂಗಳೂರಿನಿಂದ ಬೆಳಗಾವಿಗೆ ಏರ್ಬಸ್ ಹಾರಾಟ ನಡೆಸಲಿದೆ. ಇಂದರಿಂದ ಬೆಳಗಾವಿಯ ವ್ಯಾಪ್ತಿಯ ಪ್ರಯಾಣಿಕರು ಹುಬ್ಬಳ್ಳಿಗೆ ಹೋಗಿ ವಿಮಾನ ಹತ್ತಿ ಸಾಗುವದು ತಪ್ಪಿದಂತಾಗಿದೆ.

ಶುಕ್ರವಾರ ಬೆಳಿಗ್ಗೆ 8 ಘಂಟೆಗೆ ಮೊದಲ ಬಾರಿಗೆ ಏರ್ಬಸ್ ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಭೂಸ್ಪರ್ಷ ಮಾಡುತ್ತಿದ್ದಂತೆಯೇ ಸಂಸದ ಪ್ರಕಾಶ ಹುಕ್ಕೇರಿ ಸೇರಿದಂತೆ ಏರ್ ಇಂಡಿಯಾ ಅಧಿಕಾರಿಗಳು ಕೇಕ್ ಕತ್ತರಿಸುವ ಮೂಲಕ ನೂತನ ವಿಮಾನ ಸೇವೆಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ವಿಮಾನ ನಿಲ್ದಾಣ ವ್ಯವಸ್ಥಾಪಕ ರಾಜೇಶ ಮೌರ್ಯ, ನಗರ ಪೋಲೀಸ್ ಆಯುಕ್ತ ಡಿ.ಸಿ ರಾಜಪ್ಪ, ಡಿಸಿಪಿ ಸೀಮಾ ಲಾಟ್ಕರ್ ಸೇರಿದಂತೆ ಚೇಂಬರ್ ಆಫ್ ಕಾಮರ್ಸ ಅಧ್ಯಕ್ಷ ಉಮೇಶ ಶಮರ್ಾ, ಬಸವರಾಜ ಜವಳಿ, ಅಧಿಕಾರಿಗಳು ಹಾಗೂ ಮುಖಂಡರು 

ಉಪಸ್ಥಿತರಿದ್ದರು.