ಕೈ’ಗೆ ಶಕ್ತಿ ತುಂಬಿದ ಅಹಿಂದ: ಸಚಿವ ಸತೀಶ್ ಜಾರಕಿಹೊಳಿ*
Ahinda has filled the hands with strength: Minister Satish Jarkiholi*
ಅಹಿಂದ’ ಬೆಳ್ಳಿ ಹಬ್ಬ ಹಾಗೂ ರಾಜ್ಯಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮ
ಹುಬ್ಬಳ್ಳಿ 26: ಅಹಿಂದ ಸಂಘಟನೆಯು ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯ ಲಾಭ ತಂದುಕೊಟ್ಟಿದ್ದು, ಮುಂದೆಯೂ ಶೋಷಿತ ವರ್ಗಗಳ ಹಿತರಕ್ಷಣೆ ಮಾಡುವ ಮೂಲಕ ಪಕ್ಷವನ್ನು ಬಲಪಡಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.ಇಲ್ಲಿನ ಗೋಕುಲ್ ರಸ್ತೆಯ ಖಾಸಗಿ ಹೋಟೆಲ್ ನಲ್ಲಿ ಅಹಿಂದ ಕರ್ನಾಟಕ ಹೋರಾಟ 25 ವರ್ಷ ಪೂರೈಸಿದ ಹಿನ್ನೆಲೆ ಆಯೋಜಿಸಿದ್ದ ಅಹಿಂದ 25 ಹೋರಾಟ ಸಾಧನೆ, ಸಂಕಲ್ಪ ಕುರಿತಾಗಿ ರಾಜ್ಯಮಟ್ಟದ ವಿಚಾರ ಸಂಕಿರಣ’ ವನ್ನು ಉದ್ಘಾಟಿಸಿ ಅವರು ಮಾತನಾಡಿ, ಅಹಿಂದ ಸಂಘಟನೆ ಗೆ ಹೊಸ ಕಾಯಕಲ್ಪ ನೀಡಬೇಕೆಂದು ಇಂದು ಹುಬ್ಬಳ್ಳಿಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ.
ಕಳೆದ ಇಪ್ಪತ್ತು ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ಐತಿಹಾಸಿಕ ಸಮಾವೇಶ ಮಾಡಲಾಗಿತ್ತು. ಆ ಸಮಾವೇಶದಿಂದ ಅನೇಕ ರಾಜಕೀಯ ಬದಲಾವಣೆಗಳಿಗೆ ನಾಂದಿ ಹಾಡಿದೆ. ಅಹಿಂದ ಎಂಬುದು ಒಂದು ಸಾಮಾಜಿಕ ಚಳವಳಿ ಅಷ್ಟೆ ಹೊರತು ಇದು ಕೇವಲ ರಾಜಕೀಯ ಶಕ್ತಿ ಪ್ರದರ್ಶನವಲ್ಲ ಎಂದು ಹೇಳಿದರು.ನಮ್ಮ ಹೋರಾಟದ ಸ್ವರೂಪ ಬದಲಾವಣೆಯಾಗಲಿ: ಈ ಕಾರ್ಯಕ್ರಮದಿಂದ ನಾವು ಮುಖ್ಯಮಂತ್ರಿ ಆಗಬೇಕೆಂಬ ಉದ್ದೇಶ ನಮಗಿಲ್ಲ, ಈ ಹೋರಾಟದಿಂದ ನಮ್ಮ ನೂನ್ಯತೆಗಳನ್ನು ಸರಿಪಡಿಸಬೇಕಾಗಿದೆ. ಇಂದು ನಮ್ಮ ಸರ್ಕಾರವಿದ್ದರೂ ನಾವು ಇಂದು ಅಹಿಂದ ವರ್ಗಕ್ಕೆ ಏನು ಮಾಡಿಲ್ಲವೆಂದು ಅನೇಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅದೇ ಕಾರಣದಿಂದ ಈ ಸಭೆ ಕರೆದಿದ್ದು, ಈ ಎಲ್ಲಾ ಸಮಸ್ಯೆಯನ್ನು ಸರಿಪಡಿಸಬೇಕಾಗಿದೆ. ಮುಂದಿನ ದಿನಗಳಲ್ಲಿ ಸಾಮಾಜಿಕ ನ್ಯಾಯದ ಬಗ್ಗೆ ಕೇಂದ್ರ, ರಾಜ್ಯ ಸರ್ಕಾರಗಳು ನಮ್ಮನ್ನು ಹೇಗೆ ಆಳುತ್ತಿವೆ ಎಂಬುವುದರ ಬಗ್ಗೆ ಚರ್ಚಿಸಬೇಕಿದೆ. ಈ ಎಲ್ಲಾ ಕಾರಣಗಳಿಂದ ನಮ್ಮ ಹೋರಾಟದ ಸ್ವರೂಪದ ಬದಲಾವಣೆ ಮಾಡಬೇಕಿದೆ ಎಂದರು.ಶೇ.80 ರಷ್ಟು ಜನಸಂಖ್ಯೆ ಅಹಿಂದಲ್ಲಿದೆ: ಸರ್ಕಾರದಿಂದ ಸಿಗುವ ಸೌಲಭ್ಯಗಳು ಅಹಿಂದ ನಿರಂತರವಾಗಿ ಸಮಾಜದಲ್ಲಿ ಚಾಲ್ತಿಯಲ್ಲಿ ಇರಬೇಕು. ಇದಕ್ಕೆ ಒಬ್ಬರು ರಾಜ್ಯಾಧ್ಯಕ್ಷರು, ಜಿಲ್ಲಾಧ್ಯಕ್ಷರು ಇರಬೇಕು. ಅಂದಾಗ ಮಾತ್ರ ನಾವು ಬದಲಾವಣೆ ತರಲು ಸಾಧ್ಯ.
ನ್ನೂ ಹತ್ತು, ಹದಿನೈದು ವರ್ಷ ನಾವು ರಾಜಕೀಯ, ಸಾಮಾಜೀಕವಾಗಿ ಕೆಲಸ ಮಾಡಲು ಸಾಧ್ಯವಿದೆ ಎಂದ ಅವರು, ಮನುವಾದಿಗಳ ಮನಸ್ಥಿತಿ ವಿರುದ್ದ ಬುದ್ದ, ಬಸವ, ಪೆರಿಯಾರ್ ಹೋರಾಟ ಮಾಡಿದರೂ ಇಂದಿನ ವ್ಯವಸ್ಥೆಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ, ನಿಮ್ಮನ್ನು ಗಟ್ಟಿಯಾಗಿ ಕಟ್ಟಲು ನಾವು ಇನ್ನೂ ಮುಂದು ವಿಭಿನ್ನ ಪ್ರಯತ್ನ ಗಳನ್ನು ತರುತ್ತೇವೆ. ಎಲ್ಲಾ ಜಿಲ್ಲೆಗಳಲ್ಲಿ ಈ ರೀತಿ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಮಾಡುತ್ತೇವೆ. ಶೇ.80 ರಷ್ಟು ಜನಸಂಖ್ಯೆ ಅಹಿಂದದಲ್ಲೇ ಇದ್ದಾರೆ ಎಂದರು.
ಇಲ್ಲಿಂದಲೇ ಸಮಾನತೆ ಆರಂಭವಾಗಲಿ: ರಾಜ್ಯದಲ್ಲಿ ಅಹಿಂದ ನಾಯಕತ್ವ ಮತ್ತು ಸಂಘಟನೆ ಇಲ್ಲದೆ ಮುನ್ನಡೆಯುವುದು ಕಷ್ಟಕರವಾಗಿದೆ. ಶೋಷಿತ ಸಮುದಾಯಗಳ ಏಕತೆ, ಸಾಮಾಜಿಕ ನ್ಯಾಯ, ಶೈಕ್ಷಣಿಕ ಪ್ರಗತಿ ಮತ್ತು ಉದ್ಯೋಗಾವಕಾಶಗಳು ಅಹಿಂದ ರಾಜಕೀಯದ ಪ್ರಮುಖ ಆಧಾರಸ್ತಂಭಗಳಾಗಬೇಕು. ಮುಂದಿನ ದಿನಗಳಲ್ಲಿ ರಾಜಕೀಯ ಹೊರತು ಪಡಿಸಿ ನಾವು ಹಲವು ವಿದ್ವಾಂಸರು ಕರೆಸಿ ನಿಮಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 