ಬೆಳಗಾವಿ: ಕೆಲವು ಕಾರ್ಖಾ ನೆಗಳು ಎಫ್ಆರ್ಪಿಗಿಂತ ಜಾಸ್ತಿ ಬೆಲೆ ಘೋಷಣೆ ಮಾಡಿ ನಂತರ ಕಡಿಮೆ ಕೊಡುವ ದೂರು ಬಂದಿವೆ. ಕಬ್ಬು ಕಳಿಸುವುದಕ್ಕೂ ಮುನ್ನ ರೈತ ಮುಖಂಡರು ಕಾಖರ್ಾನೆಗಳೊಂದಿಗೆ ದರ ಕುರಿತಾಗಿ ಲಿಖಿತ ಒಡಂಬಡಿಕೆ ಮಾಡಿಕೊಳ್ಳಬೇಕೆಂದು ಸಕ್ಕರೆ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಹೇಳಿದರು.
ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಗ್ರಿಮೆಂಟ್ ಮಾಡಿಕೊಂಡಿದ್ದರೆ ಕಾನೂನಿನ ಬಲ ಸಿಗುತ್ತದೆ. ಆಗ ಸರ್ಕಾ ರ ಮಧ್ಯೆ ಪ್ರವೇಶ ಮಾಡಿ ಘೋಷಣೆ ಮಾಡಿದ ದರ ಕೊಡಿಸಲು ಸಾಧ್ಯವಾಗುತ್ತದೆ. ಎಫ್ಆರ್ಪಿ ದರ ಕೊಡಿಸಲು ಸಕರ್ಾರ ಹೊಣೆಯಾಗಿರುತ್ತದೆ ಎಂದ ಅವರು, ಪ್ರಸಕ್ತ ಸಾಲಿನಲ್ಲಿ ನೆರೆಹಾವಳಿಯಿಂದ ರಾಜ್ಯದಲ್ಲಿ 66 ಲಕ್ಷ ಟನ್ ಕಬ್ಬು ಇಳುವರಿ ಕಡಿಮೆ ಆಗುವ ನಿರೀಕ್ಷೆ ಇದೆ. ಹಾಗಾಗಿ ಸಕ್ಕರೆ ಕಾರ್ಖಾ ನೆಗಳು ಎಫ್ಆರ್ಪಿಗಿಂತ ಹೆಚ್ಚಿನ ಬೆಲೆಗೆ ಕಬ್ಬು ಖರೀದಿಸಲು ಮುಂದಾಗಿದ್ದು, ಈ ವರ್ಷ ಎಫ್ಆರ್ಪಿ ಕೊಡಿಸುವ ಪ್ರಸ್ತಾಪ ಬರಲ್ಲ ಎಂದು ಸ್ಪಷ್ಟಪಡಿಸಿದರು.
ಶೇ.99.50ರಷ್ಟು ಬಿಲ್ ಪಾವತಿ
ರಾಜ್ಯದಲ್ಲಿ 69 ಸಕ್ಕರೆ ಕಾರ್ಖಾ ನೆಗಳ ಪೈಕಿ 61 ಕಾರ್ಖಾ ನೆಗಳು ಪ್ರಸಕ್ತ ಸಾಲಿನಲ್ಲಿ ಕಬ್ಬು ಅರೆಯಲು ಪ್ರಾರಂಭಿಸಿವೆ. 2018-19ನೇ ಸಾಲಿನಲ್ಲಿ ಎಫ್ಆರ್ಪಿ ಪ್ರಕಾರ ರಾಜ್ಯದ ಕಾರ್ಖಾ ನೆಗಳು 11,948 ಕೋಟಿ ರೂ. ಕಬ್ಬಿನ ಬಿಲ್ ಪಾವತಿಸಬೇಕಿತ್ತು. ಈ ಪೈಕಿ 12055 ಕೋಟಿ ರೂ. ಪಾವತಿಸಿವೆ. 8 ಕಾರ್ಖಾ ನೆಗಳು 37.69 ಲಕ್ಷ ಬಾಕಿ ಉಳಿಸಿಕೊಂಡಿದ್ದು, ಎಫ್ಆರ್ಪಿ ಪ್ರಕಾರ ಶೇ.99.5 ಎಲ್ಲ ಕಾರ್ಖಾ ನೆಗಳು ರೈತರ ಬಿಲ್ ಪಾವತಿಸಿವೆ ಎಂದು ಹೇಳಿದರು.
ಉತ್ತರ ಪ್ರದೇಶದಲ್ಲಿ 3457 ಕೋಟಿ, ಮಹಾರಾಷ್ಟ್ರದಲ್ಲಿ 589 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದ್ದರೆ, ರಾಜ್ಯದಲಿ 37.69 ಲಕ್ಷ ರೂ. ಮಾತ್ರ ಬಾಕಿ ಇದೆ. ಬೀದರ ಮತ್ತು ಕಲಬುರ್ಗಿ ಜಿಲ್ಲೆಯಲ್ಲಿ ಎರಡು ಕಾರ್ಖಾ ನೆಗಳು ತಾಂತ್ರಿಕ ಕಾರಣದಿಂದ ಬಾಕಿ ಉಳಿಸಿಕೊಂಡಿವೆ. ಜಿಲ್ಲೆಯಲ್ಲಿ ಮಲಪ್ರಭಾ ಶುಗರ್ಸ್ ಮಾತ್ರ ಬಾಕಿ ಉಳಿಸಿಕೊಂಡಿದೆ. ಕಬ್ಬು ಅರೆಯುವ ಹಂಗಾಮು ಪ್ರಾರಂಭಿಸುವುದಕ್ಕೂ ಮುಂಚೆ ರೈತರ ಸಂಪೂರ್ಣ ಬಾಕಿ ಕೊಡಿಸಲು ಕ್ರಮ ಕೈಗೊಳ್ಳುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ನಿರ್ದೇ ಶನ ನೀಡಿದ್ದೇನೆ ಎಂದು ಹೇಳಿದ ಅವರು, ಒಂದು ವೇಳೆ ಇದಕ್ಕೂ ಮೀರಿ ಯಾವುದೇ ಕಾಖರ್ಾನೆ ರೈತರಿಗೆ ಎಫ್ಆರ್ಪಿಗಿಂತ ಕಡಿಮೆ ದರ ನೀಡಿ ಬಾಕಿ ಉಳಿಸಿಕೊಂಡಿದ್ದರೆ, ಅದನ್ನು ನನ್ನ ಗಮನಕ್ಕೆ ತಂದರೆ ಖಂಡಿತವಾಗಿಯೂ ಅವರಿಗೆ ನ್ಯಾಯ ಒದಗಿಸಿಕೊಡುತ್ತೇನೆ ಎಂದು ಹೇಳಿದರು.
ಶುಗರ್ ಡಿಟೆಕ್ಟಿವ್ ಮಷೀನ್ ಅಳವಡಿಕೆ
ಕಾರ್ಖಾ ನೆಗಳಿಗೆ ತಾಂತ್ರಿಕ ಮಾರ್ಗದರ್ಶನ ನೀಡುವುದಕ್ಕಾಗಿ 2018-19ನೇ ಸಾಲಿನಲ್ಲಿ ನಿಜಲಿಂಗಪ್ಪ ಸಕ್ಕರೆ ಸಂಸ್ಥೆಗೆ 2 ಕೋಟಿ ಆರ್ಥಿ ಕ ನೆರವು ನೀಡಿದ್ದೇವೆ. ಮಂಡಳಿಯಲ್ಲಿ ಚರ್ಚೆ ಯಂತೆ ಹಾಲಿನ ಫ್ಯಾಟ್ ಅಳೆಯುವಂತೆ ಕಬ್ಬಿನ ಸಕ್ಕರೆ ಅಂಶ ಅಳೆಯಲು ಆಸ್ಟ್ರೇಲಿಯಾದಲ್ಲಿ ಆಟೋಮೆಟಿಕ್ ಶುಗರ್ ಡಿಟೆಕ್ಟಿವ್ ಮಷೀನ್ ಆವಿಷ್ಕಾರ ಮಾಡಿದ್ದು, ಇದಕ್ಕೆ 1 ಕೋಟಿ ರೂ. ವೆಚ್ಚ ತಗುಲುವ ಅಂದಾಜಿದೆ. ಇದನ್ನು ರಾಜ್ಯದ ಎಲ್ಲ ಸಕ್ಕರೆ ಕಾಖರ್ಾನೆಗಳು ಅಳವಡಿಸಿಕೊಳ್ಳುವಂತೆ ಸೂಚನೆ ನೀಡಿದ್ದೇನೆ. ಈ ಮಷೀನ್ ಅಳವಡಿಸಿಕೊಂಡರೆ ಪ್ರತಿಯೊಬ್ಬ ರೈತನ ಸಕ್ಕರೆ ಅಂಶ ದಾಖಲೆಗೊಂಡು, ಸಕ್ಕರೆ ಅಂಶದ ಪ್ರಮಾಣಕ್ಕೆ ತಕ್ಕಂತೆ ಕಬ್ಬಿಗೆ ಬೆಲೆ ದೊರೆಯಲು ಸಾಧ್ಯವಾಗಲಿದೆ ಎಂದು ಹೇಳಿದರು.
ಹೆಕ್ಟೇರ್ ಕಬ್ಬಿಗೆ 28 ಸಾವಿರ ರೂ. ಪರಿಹಾರ.
ಕಬ್ಬು ಬೆಳೆಯನ್ನು ಫಸಲ್ ಬಿಮಾ ವ್ಯಾಪ್ತಿಗೆ ಸೇರಿಸಬೇಕೆಂಬ ಬೇಡಿಕೆ ಇದ್ದು, ಈ ಬಗ್ಗೆ ರಾಜ್ಯ ಸಕರ್ಾರ ಚರ್ಚೆ ನಡೆಸಿ ಕೇಂದ್ರ ಸರ್ಕಾ ರಕ್ಕೆ ಪ್ರಸ್ತಾವನೆ ಸಲ್ಲಸಲಿದೆ. ನೆರೆಯಿಂದ ಹಾನಿಗೊಳಗಾದ ಕಬ್ಬಿಗೆ ಕೇಂದ್ರ ಸರ್ಕಾ ರ ಪ್ರತಿ ಹೆಕ್ಟೇರ್ಗೆ 18 ಸಾವಿರ ರೂ. ಪರಿಹಾರ ಘೋಷಣೆ ಮಾಡಿದೆ. ಇದಕ್ಕೆ ರಾಜ್ಯ ಸರ್ಕಾ ರ 10 ಸಾವಿರ ರೂ. ಸೇರಿಸಿ ಪ್ರತಿ ಹೆಕ್ಟೇರ್ಗೆ 28 ಸಾವಿರ ರೂಪಾಯಿ ಪರಿಹಾರ ನೀಡಲು ತೀರ್ಮಾ ನಿಸಿದ್ದು, ರೈತರ ಖಾತೆಗಳಿಗೆ ನೇರವಾಗಿ ಪರಿಹಾರ ಹಣ ಜಮೆಯಾಗಲಿದೆ ಎಂದು ತಿಳಿಸಿದ ಅವರು, ಆಧಾರ್, ಖಾತೆ ನಂಬರ್ ಟ್ಯಾಲಿ ಆಗದ ರೈತರಿಗೆ ಪರಿಹಾರ ನೀಡುವಲ್ಲಿ ವಿಳಂಬವಾಗಿದೆ. ಅದನ್ನು ಸರಿಪಡಿಸಿ ಎಲ್ಲ ರೈತರಿಗೆ ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿದರು.