ಕೈರೊ,
ಏ 19,ಕೋವಿಡ್ -19 ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮೇನಲ್ಲಿ
ನಡೆಯಬೇಕಿದ್ದ ಆಫ್ರಿಕನ್ ಚಾಂಪಿಯನ್ಸ್ ಲೀಗ್ ಮತ್ತು ಆಫ್ರಿಕನ್ ಕಾನ್ ಫೆಡರೇಷನ್ ಕಪ್
ಫೈನಲ್ಸ್ ಗಳನ್ನು ಮುಂದೂಡಲಾಗಿದೆ ಎಂದು ಅಧಿಕಾರಿಗಳು ಘೋಷಿಸಿದ್ದಾರೆ.''2019/20ರ
ಕಾನ್ ಫೆಡರೇಷನ್ ಕಪ್ ಫೈನಲ್ ಮತ್ತು ಚಾಂಪಿಯನ್ಸ್ ಲೀಗ್ ಫೈನಲ್ ಗಳನ್ನು ಮುಂದಿನ
ಆದೇಶದವರೆಗೂ ತಡೆಹಿಡಿಯಲಾಗಿದೆ, '' ಎಂದು ಆಫ್ರಿಕನ್ ಫುಟ್ಬಾಲ್ ಕಾನ್ ಫೆಡರೇಷನ್
ಶನಿವಾರ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ ಎಂದು ಕ್ಸಿನ್ಹುವಾ ವರದಿ
ಮಾಡಿದೆ. ಜತೆಗೆ ಬೇರೆ ಬೇರೆ ಷೇರುದಾರರೊಂದಿಗೆ ಸಮಾಲೋಚಿಸಿ ಸೂಕ್ತ ಸಮಯದಲ್ಲಿ ಹೊಸ ವೇಳಾಪಟ್ಟಿಯ ಬಗ್ಗೆ ತಿಳಿಸಲಾಗುವುದು ಎಂದು ಸಿಎಎಫ್ ಹೇಳಿಕೆಯಲ್ಲಿ ತಿಳಿಸಲಾಗಿದೆ. ಮೇ
29ರಂದು ನಿಗದಿಯಾಗಿದ್ದ ಚಾಂಪಿಯನ್ಸ್ ಳೀಗ್ ಫೈನಲ್ ಗೆ ದೌಲಾದ ಕ್ಯಾಮರೂನಿಯನ್ ಬಂದರು
ನಗರವನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಇತ್ತೀಚೆಗಷ್ಟೇ 50 ಸಾವಿರ ಆಸನ ಸಾಮರ್ಥ್ಯದ
ಜಪೊಮಾ ಕ್ರೀಡಾಂಗಣವನ್ನು ಇಲ್ಲಿ ನಿರ್ಮಿಸಲಾಗಿದೆ.