ಬೆಂಗಳೂರು, ಮೇ 7,ಕೋವಿಡ್ 19 ಲಾಕ್‌ಡೌನ್ ಅನ್ನು ಸರಾಗಗೊಳಿಸುವಾಗ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಬೆಂಗಳೂರಿನ ರೆಸಿಡೆಂಟ್ ವೆಲ್ಫೇರ್ ಅಸೋಸಿಯೇಶನ್ (ಆರ್‌ಡಬ್ಲ್ಯುಎ) ಸದಸ್ಯರಿಂದ ನಮ್ಮ ಬೆಂಗಳೂರು ಫೌಂಡೇಶನ್ ಸಂಗ್ರಹಿಸಿದ್ದು, ಅವುಗಳನ್ನು ಫೌಂಡೇಶನ್‌ನ ಮುಖ್ಯಸ್ಥ ಸಂಸದ ರಾಜೀವ್ ಚಂದ್ರಶೇಖರ್ ಸರ್ಕಾರಕ್ಕೆ ನೀಡಿದ್ದಾರೆ.ಈ ಬಗ್ಗೆ ಮುಖ್ಯಮಂತ್ರಿಗೆ ಪತ್ರ ಬರೆದಿರುವ ರಾಜೀವ್ ಚಂದ್ರಶೇಖರ್, ಕೋವಿಡ್ 19 ಲಾಕ್‌ಡೌನ್ ಅವಧಿಯಲ್ಲಿ ಈಗ ಎದುರಿಸುತ್ತಿರುವ ಸವಾಲುಗಳು ಮತ್ತು ಪೋಸ್ಟ್ ಲಾಕ್‌ಡೌನ್ ಅವಧಿಯ ಸಲಹೆಗಳನ್ನು ಚರ್ಚಿಸಲು ಏಪ್ರಿಲ್ 30, 2020 ರಂದು ನನ್ನೊಂದಿಗೆ 140 ಕ್ಕೂ ಹೆಚ್ಚು ಆರ್‌ಡಬ್ಲ್ಯೂಎಗಳು ಮತ್ತು ಬೆಂಗಳೂರಿನ ಎನ್‌ಜಿಒಗಳಿಗಾಗಿ ವೀಡಿಯೊ ಕಾನ್ಫರೆನ್ಸ್ ಅನ್ನು ನಮ್ಮ ಬೆಂಗಳೂರು ಪ್ರತಿಷ್ಠಾನವು ಆಯೋಜಿಸಿತ್ತು. ನಾವು ಬಹಳ ಫಲಪ್ರದವಾದ ಚರ್ಚೆಯನ್ನು ನಡೆಸಿದ್ದು, ಈ ಸವಾಲುಗಳನ್ನು ಎದುರಿಸಲು ಆರ್‌ಡಬ್ಲ್ಯೂಎ ಸದಸ್ಯರು ಅಮೂಲ್ಯವಾದ ಸಲಹೆಗಳನ್ನು ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸರ್ಕಾರಕ್ಕೆ ನೀಡಿರುವ ಸಲಹೆಗಳು;
ಬಹು ಮುಖ್ಯವಾಗಿ, ಲಾಕ್‌ಡೌನ್ ಅವಧಿ ನಂತರದಲ್ಲಿ ಆರ್‌ಡಬ್ಲ್ಯುಎ ಸದಸ್ಯರು ತಮ್ಮನ್ನು ತೊಡಗಿಸಿಕೊಳ್ಳುವಂತೆ ಮತ್ತು ತಮ್ಮ ನೆರೆಹೊರೆಯಲ್ಲಿ ಸಾಮಾಜಿಕ ಅಂತರ ಮತ್ತು ಇತರ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಯೋಜಿಸಲು ಮತ್ತು ಮೇಲ್ವಿಚಾರಣೆ ಮಾಡಲು ಬಿಬಿಎಂಪಿಯು ಅವರನ್ನು ಸೇರಿಸಿಕೊಳ್ಳುವಂತೆ ವಿನಂತಿಸಿದರು. ಆರ್‌ಡಬ್ಲ್ಯೂಎಗಳನ್ನು ವಾರ್ಡ್ ಅಭಿವೃದ್ಧಿ ಮೇಲುಸ್ತುವಾರಿ ಸಮಿತಿಗಳಲ್ಲಿ ಸೇರಿಸಿಕೊಳ್ಳಬಹುದು.
ಬಿಬಿಎಂಪಿಯು ಪ್ರಸ್ತುತ ವಾರ್ಡ್ ವಿಪತ್ತು ನಿರ್ವಹಣಾ ಕೋಶಗಳನ್ನು (ಡಬ್ಲ್ಯುಡಿಎಂಸಿ) ಸ್ಥಾಪಿಸಿದೆ. ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಮತ್ತು ವಿಶೇಷವಾಗಿ ಹೆಣಗಾಡುತ್ತಿರುವ ಬಡವರಿಗೆ ಉತ್ತಮವಾಗಿ ಸೇವೆ ಸಲ್ಲಿಸಲು, ಅವರು ಎಲ್ಲಾ ದುರ್ಬಲ ವರ್ಗದ ವಲಸೆ ಕಾರ್ಮಿಕರು, ನಿರಾಶ್ರಿತರು, ಅಸಂಘಟಿತ ವಲಯದ ಕಾರ್ಮಿಕರು ಮತ್ತು ದೈನಂದಿನ ಕೂಲಿ ಕಾರ್ಮಿಕರ ಬಗ್ಗೆ ವಿಶ್ವಾಸಾರ್ಹ ಡೇಟಾಬೇಸ್ ಅನ್ನು ಕಂಪೈಲ್ ಮಾಡಬೇಕು. ಈ ಡೇಟಾಬೇಸ್ ಅನ್ನು ಸಾರ್ವಜನಿಕ ವಲಯದಲ್ಲಿ ಪ್ರಕಟಿಸಬೇಕು. ವಾರ್ಡ್‌ಗಳ ಆರ್‌ಡಬ್ಲ್ಯೂಎಗಳು / ನಾಗರಿಕ ಗುಂಪುಗಳು ಡೇಟಾಬೇಸ್ ರಚಿಸಲು ವಾರ್ಡ್ ಅಭಿವೃದ್ಧಿ ಮೇಲುಸ್ತುವಾರಿ ಸಮಿತಿಗಳೊಂದಿಗೆ ಸಮನ್ವಯ ಸಾಧಿಸಿ ಬಡವರಿಗೆ, ದುರ್ಬಲ ವರ್ಗದವರಿಗೆ ದಿನಸಿ ಕಿಟ್‌ಗಳು, ಆಹಾರ, ಮತ್ತು ಸಾಮಾಜಿಕ ಭದ್ರತೆ ಇತ್ಯಾದಿಗಳನ್ನು ಪೂರೈಸುವಲ್ಲಿ ಪಾರದರ್ಶಕ, ಜವಾಬ್ದಾರಿಯುತ ಕಾರ್ಯವನ್ನು ಖಚಿತಪಡಿಸಿಕೊಳ್ಳುತ್ತವೆ.
ಆರ್‌ಡಬ್ಲ್ಯುಎ ಸದಸ್ಯರನ್ನೊಂದಿರುವ ಹೊಂದಿರುವ ವಾರ್ಡ್ ಅಭಿವೃದ್ಧಿ ಮೇಲುಸ್ತುವಾರಿ ಸಮಿತಿಯು ಅಗತ್ಯ ಸೇವೆಗಳು, ಆರೋಗ್ಯ ಸೇವೆಗಳ ಕಾರ್ಯಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಬೇಕು ಮತ್ತು ಜನರಲ್ಲಿ, ವಿಶೇಷವಾಗಿ ಬಡವರಲ್ಲಿ ಜಾಗೃತಿ ಮೂಡಿಸಬೇಕು.
ಬಡವರಿಗೆ ಸಾಮಾಜಿಕ ಭದ್ರತೆ ಖಾತರಿಪಡಿಸಬೇಕು. ಜನ್ ಧನ್ ಯೋಜನೆ ಖಾತೆಗಳಿಗೆ ಠೇವಣಿ ಇಡುವುದರೊಂದಿಗೆ ತಕ್ಷಣದ ಆರ್ಥಿಕ ಪರಿಹಾರವನ್ನು ಒದಗಿಸಬೇಕು. ಸಾರ್ವತ್ರಿಕ ಮೂಲ ಆದಾಯವನ್ನು ಒದಗಿಸಬೇಕು. ಬಾಡಿಗೆ ವಸತಿ ಭತ್ಯೆ ಖಚಿತಪಡಿಸಿಕೊಳ್ಳಬೇಕು ಅಥವಾ ಸರ್ಕಾರಿ ಶಾಲೆಗಳಲ್ಲಿ ಬಡವರಿಗೆ ಅವಕಾಶ ಕಲ್ಪಿಸಬೇಕು. ಲಾಕ್‌ಡೌನ್ ನಂತರ ಒಂದು ತಿಂಗಳ ಕಾಲ ಕುಟುಂಬಕ್ಕೆ ಆಹಾರವನ್ನು ನೀಡುವ ದಿನಸಿ ಕಿಟ್‌ಗಳನ್ನು ಒದಗಿಸಬೇಕು. ಎಲ್ಲಾ 198 ವಾರ್ಡ್‌ಗಳಲ್ಲಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮುಕ್ತವಾಗಿಡಬೇಕು. ಎಲ್ಲರಿಗೂ, ವಿಶೇಷವಾಗಿ ಬಡವರು, ವಲಸಿಗರು / ಕಟ್ಟಡ ಕಾರ್ಮಿಕರು ಗರ್ಭಿಣಿ ಸೇರಿದಂತೆ ನಿಯಮಿತ ಚಿಕಿತ್ಸೆ ಮತ್ತು ಔಷಧಿ ಒದಗಿಸಬೇಕು. ಬಡವರಿಗೆ ಸೂಕ್ಷ್ಮತೆಯಿಂದ ಚಿಕಿತ್ಸೆ ನೀಡಬೇಕು.
ಕಾನೂನು ಉಲ್ಲಂಘಿಸುವವರನ್ನು ಗುರುತಿಸಲು ವೀಡಿಯೊ ಕ್ಯಾಮೆರಾಗಳನ್ನು ಸ್ಥಾಪಿಸಿ. ಪಾನ್, ಗುಟ್ಕಾ ಮತ್ತು ಅಂತಹ ಉತ್ಪನ್ನಗಳನ್ನು ನಿಷೇಧಿಸಬೇಕು. ಜನರು ರಸ್ತೆಗಳಲ್ಲಿ ಉಗುಳುತ್ತಾರೆ. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ಭಾರಿ ದಂಡ ವಿಧಿಸಬೇಕು. ಜನರನ್ನು ಮೇಲ್ವಿಚಾರಣೆ ಮಾಡಲು ಮತ್ತು ಸಹಾಯ ಮಾಡಲು ಸರ್ಕಾರ / ಬಿಬಿಎಂಪಿ ಕಾರ್ಯಪ್ರವೃತ್ತವಾಗಬೇಕು.
ಬೀದಿ ವ್ಯಾಪಾರಿಗಳಿಗೆ ಮಾಸ್ಕ್ ಮತ್ತು ಗ್ಲೌಸ್ ಅನ್ನು ಧರಿಸುವುದು ಕಡ್ಡಾಯಮಾಡಬೇಕು. ಅವರಿಗೆ ನಿರ್ಧಿಷ್ಟ ಸ್ಥಳಗಳನ್ನು ಗೊತ್ತುಪಡಿಸಿ ತಳ್ಳುವ ಗಾಡಿಗಳ ನಡುವೆ 10 ಮೀಟರ್ ದೂರವನ್ನು ಕಾಪಾಡಿಕೊಳ್ಳಬೇಕು. ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಖರೀದಿ ಸಮಯ. ಖರೀದಿಸಲು ವಯಸ್ಕರು ಮಾತ್ರ. ಆರ್‌ಡಬ್ಲ್ಯೂಎ ಸದಸ್ಯರನ್ನು ಹೊಂದಿರುವ ವಾರ್ಡ್ ಅಭಿವೃದ್ಧಿ ಮೇಲುಸ್ತುವಾರಿ ಸಮಿತಿಯು ಮೇಲ್ವಿಚಾರಣೆ ಮಾಡಬೇಕು. ನಎಲ್ಲಾ ಸಾರ್ವಜನಿಕ ಸ್ಥಳಗಳನ್ನು ನಿಯಮಿತವಾಗಿ ಸೋಂಕುರಹಿತಗೊಳಿಸಬೇಕು.
ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು (ಪಿಡಿಎಸ್) ಎಲ್ಲರಿಗೂ ಮುಕ್ತಗೊಳಿಸಬೇಕು. ಪಿಡಿಎಸ್ ಮಳಿಗೆಗಳ ಜೊತೆಗೆ, ಆಹಾರ ಪದಾರ್ಥಗಳನ್ನು ವಿತರಿಸಲು ಅಂಗನವಾಡಿ, ಇಂದಿರಾ ಕ್ಯಾಂಟೀನ್ ಬಳಸಿ. ಈ ಹಂತಗಳಲ್ಲಿ ತರಕಾರಿಗಳು, ಅಡುಗೆ ಎಣ್ಣೆ ಮತ್ತು ಇತರ ಅಗತ್ಯ ವಸ್ತುಗಳನ್ನು ಲಭ್ಯವಾಗುವಂತೆ ಮಾಡಬೇಕು.
ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಸರ್ಕಾರಿ ಸೌಲಭ್ಯಗಳು, ನಿಯಮಗಳು ಮತ್ತು ನಿಬಂಧನೆಗಳು ಮತ್ತು ಜನರಿಗೆ, ವಿಶೇಷವಾಗಿ ಬಡವರಿಗೆ ಇತರ ಪರಿಕಲ್ಪನೆಗಳ ಬಗ್ಗೆ ನಿರಂತರ ಜಾಗೃತಿ ಮೂಡಿಸಬೇಕು. ಈ ಬಗ್ಗೆ ಟಿವಿ ಮಾಧ್ಯಮವು ಮೀಸಲಾದ ಸಮಯ ಸ್ಲಾಟ್‌ಗಳನ್ನು ಹೊಂದಿರಬೇಕು.
ಕಾರ್ಪೊರೇಟ್ ಕಾರ್ಮಿಕರು ಲಾಕ್‌ಡೌನ್ ನಂತರ 6 ತಿಂಗಳು 3 ಶಿಫ್ಟ್‌ಗಳಲ್ಲಿ ಕೆಲಸ ಮಾಡಲು ಮಾರ್ಗಸೂಚಿಗಳು ಅಗತ್ಯವಿದೆ. ಮನೆಯಿಂದ ಕೆಲಸ, ಕಚೇರಿಯಲ್ಲಿ ಕೆಲಸ ಮತ್ತು ಸಾರಿಗೆಗಾಗಿ- ಅಂತರ ಜಿಲ್ಲೆ, ವಿಶೇಷವಾಗಿ ದೈನಂದಿನ ಪ್ರಯಾಣದ ಉದ್ಯೋಗಿಗಳಿಗೆ ಅಗತ್ಯವಿದೆ.ಪೋಸ್ಟ್ ಲಾಕ್‌ಡೌನ್ ಹಂತದಲ್ಲಿ ಸಂಚಾರ ದಟ್ಟಣೆಯನ್ನು ಮುಖ್ಯ ರಸ್ತೆಗಳಿಗೆ ಮಾತ್ರ ಸೀಮಿತಗೊಳಿಸಿ. ಟ್ರಾಫಿಕ್ ದಟ್ಟಣೆ ಮತ್ತು ಸೋಂಕು ಹರಡುವ ಸಾಧ್ಯತೆಯನ್ನು ತಡೆಗಟ್ಟಲು ಪ್ರಯಾಣಿಕರು ಶಾರ್ಟ್ ಕಟ್ ಬಳಸುವುದನ್ನು ತಡೆಯಲು ಆಂತರಿಕ ರಸ್ತೆಗಳಿಗೆ ಬ್ಯಾರಿಕೇಡ್ ಅಳವಡಿಸಬೇಕು.ಆರೋಗ್ಯ ತಪಾಸಣೆ ಮಾಡಲು ಬಸ್ ನಿಲ್ದಾಣಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಸಂಚಾರಿ ಔಷಧಾಲಯಗಳನ್ನು ಒದಗಿಸಬೇಕು.ನಮ್ಮ ನಗರದ ಸುರಕ್ಷತೆ ಮತ್ತು ಯೋಗಕ್ಷೇಮವು ನಾಗರಿಕರ ಭಾಗವಹಿಸುವಿಕೆ ಮತ್ತು ಬೆಂಬಲದ ಮೇಲೆ ಹೆಚ್ಚು ಅವಲಂಬಿತವಾಗಿದ್ದು, ಈ ಮೇಲಿನ ಹಲವು ಸಲಹೆಗಳನ್ನು ನೀಡಿದ್ದಾರೆ. ಆರ್‌ಡಬ್ಲ್ಯೂಎ ಮತ್ತು ಎನ್‌ಜಿಒಗಳಿಂದ ಈ ಪ್ರಮುಖ ಸಲಹೆಗಳನ್ನು ಪರಿಗಣಿಸಲು ನಾನು ನಿಮ್ಮಲ್ಲಿ ಈ ಮೂಲಕ ಮನವಿಯನ್ನು ಮಾಡುತ್ತಿದ್ದೇನೆ ಎಂದು ಚಂದ್ರಶೇಖರ್ ಪತ್ರದಲ್ಲಿ ತಿಳಿಸಿದ್ದಾರೆ.