ಕಝಕಿಸ್ತಾನ ವಿಮಾನ ಪತನಕ್ಕೆ ಪ್ರತಿಕೂಲ ಹವಾಮಾನ ಕಾರಣ: ಆಂತರಿಕ ಸಚಿವಾಲಯ

ಅಲ್ಮಾಟಿ, ಡಿಸೆಂಬರ್ 28 (ಸ್ಪುಟ್ನಿಕ್) ಕಝಕಿಸ್ತಾನ ನಗರದ ಅಲ್ಮಾಟಿ ಬಳಿ ನಿನ್ನೆ ಸಂಭವಿಸಿದ ವಿಮಾನ ಅಪಘಾತದ ಬಗ್ಗೆ ತನಿಖೆ ನಡೆಸುತ್ತಿರುವ ಅಧಿಕಾರಿಗಳು, ದುರಂತಕ್ಕೆ ಪ್ರತಿಕೂಲ ಹವಾಮಾನ ಕಾರಣವಾಗಿರಬಹುದು ಎಂದು ಪರಿಗಣಿಸಿದ್ದಾರೆ ಎಂದು ಕಝಕಿಸ್ತಾನ ಆಂತರಿಕ ಸಚಿವಾಲಯದ ಪತ್ರಿಕಾ ಹೇಳಿಕೆ ಶನಿವಾರ ತಿಳಿಸಿದೆ.ಸುಮಾರು 100 ಪ್ರಯಾಣಿಕರೊಂದಿಗೆ ಅಲ್ಮಾಟಿಯಿಂದ ಕಝಕಿಸ್ತಾನ ರಾಜಧಾನಿ ನೂರ್-ಸುಲ್ತಾನ್ ಕಡೆಗೆ ತೆರಳುತ್ತಿದ್ದ ಬೆಕ್ ಏರ್ ಎರ್‌ ಏರ್‌ಲೈನ್ಸ್‌ನ ಫೋಕರ್ 100 ವಿಮಾನವು ಟೇಕಾಫ್ ಆದ ಕೂಡಲೇ ಅಪಘಾತಕ್ಕೀಡಾಗಿದೆ. ಎರಡು ಅಂತಸ್ತಿನ ಕಟ್ಟಡದ ಮೇಲೆ ಪತನಗೊಂಡಿದೆ. ಅಪಘಾತದಲ್ಲಿ 12 ಜನರು ಸಾವನ್ನಪ್ಪಿದ್ದಾರೆ ಎಂದು ಕಝಕಿಸ್ತಾನ ಆಂತರಿಕ ಸಚಿವಾಲಯ ತಿಳಿಸಿದೆ. ತಾಂತ್ರಿಕ ಸಮಸ್ಯೆ ಅಥವಾ ಪೈಲಟ್‌ನ ತಪ್ಪಿನಿಂದಾಗಿ ಈ ಅಪಘಾತ ಸಂಭವಿಸಿದೆ ಎಂದು ಉಪ ಪ್ರಧಾನ ಮಂತ್ರಿ ರೋಮನ್ ಸ್ಕಲ್ಯಾರ್ ಹೇಳಿದ್ದಾರೆ.ತನಿಖಾ ತಂಡವು ವಿಮಾನದ ತಾಂತ್ರಿಕ ಅಸಮರ್ಪಕತೆ, ಪ್ರತಿಕೂಲ ಹವಾಮಾನ ಮತ್ತು ಹವಾಮಾನ ಪರಿಸ್ಥಿತಿಗಳು ಮತ್ತು ಸಂಭವನೀಯ ಪೈಲಟ್ ದೋಷಗಳು ಸೇರಿದಂತೆ ಇನ್ನಿತರ ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.