ಲಾಸ್ ಏಂಜಲೀಸ್, ಆ 7 (ಕ್ಸಿನ್ಹುವಾ) ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಕುಜ ಗ್ರಹಕ್ಕೆ ಮಾನವ ಸಹಿತ ಬಾಹ್ಯಾಕಾಶ ಯಾನಕ್ಕೆ ಸಿದ್ಧತೆ ನಡೆಸಿದ್ದು ತರಂಗಾಂತರಗಳು ಮಾನವನ ಮೆದುಳಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ವಿಜ್ಞಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಕುಜ ಗ್ರಹಕ್ಕೆ ಯಾನ ಕೈಗೊಳ್ಳಲಿರುವ ಐವರು ಗಗನಯಾತ್ರಿಗಳ ಪೈಕಿ ಕನಿಷ್ಠ ಒಬ್ಬರು ಭಯಭೀತ ನಡವಳಿಕೆ ತೋರುವ ಸಾಧ್ಯತೆ ಇದ್ದು 2.8 ರಲ್ಲಿ ಓರ್ವರು ಸ್ಮರಣ ಶಕ್ತಿ ಕಳೆದುಕೊಳ್ಳುವ ಅಪಾಯವಿದೆ ಎಂದು ಅಧ್ಯಯನವೊಂದು ತಿಳಿಸಿದೆ.
ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರು ಇಲಿಗಳನ್ನು ಆರು ತಿಂಗಳವರೆಗೆ ಕಡಿಮೆ ಪ್ರಮಾಣದ ತರಂಗಾಂತರದಲ್ಲಿರಿಸಿ ಅವುಗಳ ನಡವಳಿಕೆಯ ಅಧ್ಯಯನ ನಡೆಸಿ ಈ ವರದಿ ನೀಡಿದ್ದಾರೆ.
ಕಡಿಮೆ ಪ್ರಮಾಣದ ವಿಕಿರಣಕ್ಕೆ ಒಡ್ಡಿದ ಸಂದರ್ಭದಲ್ಲಿನ ಕಲಿಕಾ ತೊಂದರೆ, ವಾತಾವರಣಕ್ಕೆ ಹೊಂದಿಕೊಳ್ಳುವ ಸಮಸ್ಯೆ ಮತ್ತು ಸ್ಮರಣ ಶಕ್ತಿ ಕುಂಠಿತವಾಗುವುದು ಈ ಅಧ್ಯಯನದಿಂದ ತಿಳಿದುಬಂದಿದೆ.
ಈ ವಿಕರಣಗಳಿಗೆ ಒಡ್ಡಲಾದ ಇಲಿಗಳು ಸಾಮಾಜಿಕ ಸಂವಹನಕ್ಕೆ ಪ್ರತಿರೋಧ ವ್ಯಕ್ತಪಡಿಸುವುದು ಮತ್ತು ಬೆಳಕಿನ ಪ್ರದೇಶಗಳಿಂದ ಆದಷ್ಟು ಬೇಗ ದೂರ ಹೋಗುವುದು ಕಂಡು ಬಂದಿತ್ತು. ಬೆಳಕಿನ ಪ್ರದೇಶಕ್ಕೆ ಬರುತ್ತಿದ್ದಂತೆ ಅವುಗಳಲ್ಲಿನ ಒತ್ತಡದ ಪ್ರಮಾಣ ಹೆಚ್ಚುತ್ತಿತ್ತು ಎಂದು ಅಧ್ಯಯನ ತಿಳಿಸಿದಸೆ.
ಇಲಿಗಳ ಮೇಲಿನ ಉಂಟಾಗುವ ಪರಿಣಾಮವೇ ಮಾನವನ ಮೇಲೆ ಉಂಟಾಗುತ್ತದೆ ಎಂಬುದು ಸವಾಲಾಗಿಯೇ ಉಳಿದಿದ್ದರೂ ಪ್ರಸ್ತುತ ಮಾರ್ಸ್ ಮಿಷನ್ ನ ಗಗನಯಾತ್ರಿಗಳಿಗೆ ಉಂಟಾಗಬಹುದಾದ ಸಂಭಾವ್ಯ ಅಪಾಯ ತಡೆಯಲು ಸೂಕ್ತ ಪರಿಹಾರ ಕಂಡು ಹಿಡಿಯಬೇಕಿದೆ.
ಬಾಹ್ಯಾಕಾಶ ತರಂಗಾಂತರದಿಂದ ರಕ್ಷಣೆಗೆ ಪ್ರಸ್ತುತ ಯಾವುದೇ ದಾರಿ ಇಲ್ಲದಿರುವುದರಿಂದ ವಿಕಿರಣ ಜೀವಶಾಸ್ತ್ರಜ್ಞರು ಗಗನಯಾತ್ರಿಗಳ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಭಾರತದ ವಾತಾವರಣ ಮತ್ತು ಆಯಸ್ಕಾಂತೀಯ ಕ್ಷೇತ್ರ ಅಂತರಿಕ್ಷದ ವಿಕರಣಗಳ ವ್ಯತಿರಿಕ್ತ ಪರಿಣಾಮದಿಂದ ರಕ್ಷಾ ಕವಚ ಒದಗಿಸಿದೆ. ಕುಜ ಗ್ರಹಕ್ಕೆ ಯಾನ ಕೈಗೊಳ್ಳುವಾಗ ಈ ರಕ್ಷಾ ಕವಚದಿಂದ ಹೊರ ಬರಬೇಕಾಗುವುದರಿಂದ ಶಕ್ತಿಕಣಗಳು ಮಾನವನ ದೇಹದೊಂದಿಗೆ ಸುಲಭವಾಗಿ ಸಂಪರ್ಕಿಸಿ ಭೌತಿಕ ಬದಲಾವಣೆ ತರಬಲ್ಲದು ಎಂದು ಅಧ್ಯಯನ ತಿಳಿಸಿದೆ.