ಗಾಂಧೀಜಿಯವರ ಮೌಲ್ಯ ಜೀವನದಲ್ಲಿ ಅಳವಡಿಸಿಕೊಳ್ಳಿ: ಕುನ್ನೂರ

ಲೋಕದರ್ಶನವರದಿ

ಶಿಗ್ಗಾವಿ03 : ಮಹಾತ್ಮಾ ಗಾಂಧೀಜಿಯವರ ಮೌಲ್ಯ ಹಾಗೂ ಸಿದ್ಧಾಂತಗಳಾದ ಸತ್ಯ, ಪ್ರೇಮ ಅಹಿಂಸೆ ಇಂದಿಗೂ ಸಹ ಪ್ರಸ್ತುತವಾಗಿದ್ದು, ಪ್ರತಿಯೊಬ್ಬರೂ ಈ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಗಾಂಧೀಜಿ ಲಾಲ್ ಬಹಾದ್ದೂರ್ ಶಾಸ್ತ್ರೀಯವರು ನಡೆದ ದಾರಿ ನಮಗಿಂದು ಹೆದ್ದಾರಿಯಾಗಿದೆ. ಅಂಥ ದಾರಿಯಲ್ಲಿ ನಡೆಯುವ ಮೂಲಕ ನಮ್ಮ ಬದುಕನ್ನು ಸಾರ್ಥಕಗೊಳ್ಳಿಸಿಕೊಳ್ಳಬೇಕಾಗಿದೆ ಎಂದು ಮಾಜಿ ಸಂಸದ ಮಂಜುನಾಥ ಕುನ್ನೂರ ಹೇಳಿದರು.

ಪಟ್ಟಣದ ಚನ್ನಪ್ಪ ಕುನ್ನೂರ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ನಡೆದ ಗಾಂಧೀ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಗಾಂಧೀಜಿಯವರು ಗ್ರಾಮ ಸ್ವರಾಜ್ಯದ ಕನಸು ಕಂಡವರು, ಅವರ ಕನಸನ್ನು ನನಸು ಮಾಡುವ ರೀತಿಯಲ್ಲಿ ಇಂದು ನಾವೆಲ್ಲರೂ ನಡೆಯಬೇಕಾದದ್ದು ಅತಿ ಅವಶ್ಯವಿದೆ ಎಂದು ಅಭಿಪ್ರಾಯಪಟ್ಟ ಅವರು ಗಾಂಧೀಜಿಯವರ 150 ನೇ ಜನ್ಮದಿನಾಚರಣೆಯ ಅಂಗವಾಗಿ ವರ್ಷದುದ್ದಕ್ಕೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಸಂಕಲ್ಪ ಮಾಡಿದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರ ಕಾರ್ಯ ಶ್ಲಾಘನೀಯವೆಂದರು. ಹೊಸರತ್ತಿಯ ಗಾಂಧೀ ಗ್ರಾಮೀಣ ಗುರುಕುಲ ಮಾದರಿಯಲ್ಲಿ ನಮ್ಮ ಸಂಸ್ಥೇಯಡಿಯಲ್ಲಿ ಗಾಂಧೀಜಿ ಹೆಸರಿನಲ್ಲಿ ಗುರುಕುಲ ಸ್ಥಾಪಿಸಿ ಉಚಿತ ಶಿಕ್ಷಣ ನೀಡುವ ಇಚ್ಛೆಯನ್ನು ವ್ಯಕ್ತಪಡಿಸಿದರು. ಮಂಗಳೂರಿನಲ್ಲಿ ಗಾಂಧೀಜಿಯವರಿಗಾಗಿ ಗುಡಿ ಸ್ಥಾಪಿಸಿರುವುದನ್ನು ಸ್ಮರಿಸಿದ ಮಂಜುನಾಥ ಕುನ್ನೂರ ಅವರು ಅಲ್ಲಿ ನಡೆಯುವ ತ್ರಿಕಾಲ ಪೂಜೆ ಗಾಂಧೀಜಿ ದೇವರಾಗಿದ್ದಾರೆ ಎಂಬುದರ ಪ್ರತೀಕ ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಆಂಗ್ಲ ಮಾದ್ಯಮ ಶಾಲೆಯ ಮುಖ್ಯೋಪಾಧ್ಯಾಯ ಶ್ರೀಕಾಂತ ಯಲಿಯವರ, ಗಾಂಧೀಜಿಯವರ ಜನನದಿಂದ ಭಾರತಕ್ಕೆ ವಿಶ್ವದಲ್ಲಿಯೇ ಮಾನ್ಯತೆ ಬಂದಿದೆ ಎಂದು ಹೇಳಿದರು. 

ಕಾಲೇಜಿನ ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನೇಕ ವಿದ್ಯಾಥರ್ಿಗಳು ಮಾತನಾಡಿದರು. 

ಮುಖ್ಯೋಪಾಧ್ಯಾಯರುಗಳಾದ ಜಿ. ಎಂ. ಅರಗೋಳ, ಸಿ. ಟಿ. ಪಾಟೀ.ಲ, ಎಂ. ಬಿ. ನೀರಲಗಿ, ಹೆಚ್. ಎಸ್. ಹಲಸೂರ, ವೀರಣ್ಣ ಬಡ್ಡಿ, ಫಕ್ಕೀರಜ್ಜ ಯಲಿಗಾರ, ಅಶೋಕ ಕಾಳೆ, ಶಿವಪುತ್ರಪ್ಪ ಜಕ್ಕಣ್ಣವರ ಹಾಗೂ ಶಶಿಧರ ಯಲಿಗಾರ ಮುಂತಾದವರು ಪಾಲ್ಗೊಂಡಿದ್ದರು. ಇದಕ್ಕೂ ಮೊದಲು ಸಂಗೀತ ಶಿಕ್ಷಕ ಬಸನಗೌಡ ಮಲ್ಲನಗೌಡ್ರ ರಘುಪತಿ ರಾಘವ ರಾಜಾರಾಮ ಪಾರ್ಥನೆ ಹಾಡಿದರು. ಕೆ. ಜಿ. ಮಲ್ಲೂರ   ಸ್ವಾಗತಿಸಿದರು. ರೇಣುಕಾ ಹಿರೇಗೌಡ್ರ ನಿರೂಪಿಸಿದರು. ಕೊನೆಯಲ್ಲಿ ಅನಿಲ ನಾಯ್ಕರ ವಂದಿಸಿದರು.