ಜಿಟಿಟಿಸಿಯ ವೃತ್ತಿಪರ ತರಬೇತಿಗೆ ಪ್ರವೇಶಾತಿ ಪ್ರಾರಂಭ

ಜಿಟಿಟಿಸಿಯ ವೃತ್ತಿಪರ ತರಬೇತಿಗೆ ಪ್ರವೇಶಾತಿ ಪ್ರಾರಂಭ Admissions for GTTC vocational training begin

ಲೋಕದರ್ಶನ ವರದಿ 

ಗದಗ 06: ನರಗುಂದ ಅಳಗವಾಡಿ ರಸ್ತೆಯಲ್ಲಿರುವ ಜಿಟಿಟಿಸಿ ಕೇಂದ್ರವು ಆಸಕ್ತ ಯುವಕರಿಂದ ಟೂಲರೂಮ್ ಮಶಿನಿಸ್ಟ್‌, ವೆಹಿಕಲ್ ಅಸೆಂಬ್ಲಿ ಫಿಟ್ಟರ್ ಮತ್ತು ಅಟೊಮೊಬೈಲ್ ವೆಲ್ಡರ್ ವೃತ್ತಿ ತರಬೇತಿಗಳಿಗೆ ಎಸ್‌.ಎಸ್‌.ಎಲ್,ಸಿ ಅಥವಾ ಪಿಯುಸಿಯಲ್ಲಿ  ಉತ್ತೀರ್ಣರಾದ ಮತ್ತು ಅನುತ್ತೀರ್ಣರಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 

ಒಂದು ವರ್ಷ ಅವಧಿಯ ಟೂಲರೂಮ್ ಮಶಿನಿಸ್ಟ್‌ ತರಬೇತಿಯಲ್ಲಿ ಟರ್ನರ್, ಮಿಲ್ಲರ್, ಗ್ರೈಂಡರ್, ಸಿ.ಎನ್‌.ಸಿ ಪ್ರಾಯೋಗಿಕ ತರಬೇತಿಯನ್ನು ನೀಡಲಾಗುವುದು. ವೆಹಿಕಲ್ ಅಸೆಂಬ್ಲಿ ಫಿಟ್ಟರ್ ಮತ್ತು ಅಟೊಮೊಬೈಲ್ ವೆಲ್ಡರ್ ವೃತ್ತಿಪರ ತರಬೇತಿಯಲ್ಲಿ ಫಿಟ್ಟರ್, ಕಾರು ಬಿಡಿಭಾಗಗಳ ಜೋಡಣೆ ಮತ್ತು ವೆಲ್ಡಿಂಗ್ ಪ್ರಾಯೋಗಿಕ ತರಬೇತಿಯನ್ನು ನೀಡಲಾಗುವುದು.  ಜೊತೆಗೆ ಅಟೊಕ್ಯಾಡ್, ಕನ್ನಡ ಮತ್ತು ಇಂಗ್ಲಿಷ್ ಭಾಷಾ ಕೌಶಲ್ಯಗಳನ್ನು ಹಾಗೂ ಉದ್ಯೋಗ ಕೌಶಲ್ಯಗಳನ್ನು ಕಲಿಸಲಾಗುತ್ತದೆ. ಒಂದು ವರ್ಷದ ತರಬೇತಿಯ ನಂತರ ಪ್ರತಿಷ್ಠಿತ ಟೂಲಿಂಗ್ ಮತ್ತು ವಿಮಾನ ತಯಾರಿಕೆ ಕೈಗಾರಿಕೆಗಳಲ್ಲಿ ಉದ್ಯೋಗ ದೊರಕಿಸಿ ಕೊಡಲಾಗುವುದು.  

ಜಿಟಿಟಿಸಿ ಸಂಸ್ಥೆಯು ಅತ್ಯಾಧುನಿಕ ಯಂತ್ರೋಪಕರಣಗಳನ್ನು ಅಳವಡಿಸಿಕೊಂಡು ಸ್ಥಳೀಯ ಕೈಗಾರಿಕೆಗಳಿಗೆ ತಾಂತ್ರಿಕ ಸೇವೆಯನ್ನು ಒದಗಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಆನ್‌-ದ-ಜಾಬ್ ತರಬೇತಿ ನೀಡುತ್ತದೆ. ಕಳೆದ ವರ್ಷ ತರಬೇತಿ ಪಡೆದ ಎಲ್ಲ ವಿದ್ಯಾರ್ಥಿಗಳು ಪ್ರತಿಷ್ಠಿತ ಕೈಗಾರಿಕೆಗಳಲ್ಲಿ ನೇಮಕಾತಿ ಹೊಂದಿರುತ್ತಾರೆ. ಆಸಕ್ತ ವಿದ್ಯಾರ್ಥಿಗಳು ಜಿಟಿಟಿಸಿ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು, ಅರ್ಜಿ ಸಲಿಸಲು ಕೊನೆಯ ಮೇ 15 ತರಬೇತಿಗಳು ಜೂನ್ 01ರಿಂದ ಪ್ರಾರಂಭವಾಗುತ್ತವೆ. ಹೆಚ್ಚಿನ ಮಾಹಿತಿಗಾಗಿ ಜಿಟಿಟಿಸಿ, ಅರ್ಬನಗ್ರಾಮ, ಅಳಗವಾಡಿ ರಸ್ತೆ, ನರಗುಂದ, ದೂರವಾಣಿ ಸಂಖ್ಯೆ: 8088536896 ಸಂಪರ್ಕಿಸಲು ಜಿಟಿಟಿಸಿ, ನರಗುಂದ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.