ಮಂಗಳೂರು, ಜನವರಿ 23,ಮಂಗಳೂರು ವಿಮಾನ ನಿಲ್ದಾಣ ಬಾಂಬ್ ಪ್ರಕರಣದ ಆರೋಪಿ ಆದಿತ್ಯ ರಾವ್ ನನ್ನು ಇಂದು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗುವುದು.ಆದಿತ್ಯ ರಾವ್ ಅವರ ವಿರುದ್ಧ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಸ್ಫೋಟಕ ಇಟ್ಟಿದ್ದಟ್ಟ ಗುರುತರ ಆರೋಪ ಹೊರಿಸಲಾಗಿದೆ. ಬುಧವಾರ ಬೆಳಿಗ್ಗೆ ಅವರು ಬೆಂಗಳೂರು ಪೊಲೀಸರ ಮುಂದೆ ಶರಣಾದರು, ನಂತರ ಅವರನ್ನು ತಂಡವು ಮಂಗಳೂರಿಗೆ ಕರೆತರಲಾಗಿದೆ. ಮಂಗಳೂರು ಪೊಲೀಸ್ ಆಯುಕ್ತ ಪಿ ಎಸ್ ಹರ್ಷ ಸುದ್ದಿಗಾರರ ಜೊತೆ ಮಾತನಾಡಿ,' ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಸಾಧನ ಇರಿಸಿದ್ದ ಆರೋಪಿಯನ್ನು ತನಿಖಾ ತಂಡ ಬಂಧಿಸಿದೆ. ಅವರನ್ನು ಮೊದಲ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಹೇಳಿದರು. ಎಲ್ಲಾ ಸಾಕ್ಯ, ಆಯಾಮಗಳಿಂದಲೂ ನಾವು ಆರೋಪಿ ತನಿಖೆ ಮಾಡುತ್ತೇವೆ ಬೆಂಗಳೂರು ನ್ಯಾಯಾಲಯವು ನಮಗೆ ಕಾಲವಕಾಶ ನೀಡಿದೆ ಮತ್ತು ನಾವು ಅವರನ್ನು ಆರನೇ ಜೆಎಂಎಫ್‌ಸಿ ಮುಂದೆ ಹಾಜರುಪಡಿಸುತ್ತೇವೆ. ಯಾವುದೇ ಹೊಸ ಸಾಕ್ಷಿ, ಪುರಾವೆ ದೊರಕಿದರೆ ನಂತರ ತಿಳಿಸುವುದಾಗಿಯೂ ಹೇಳಿದರು. ಕೆಲವು ಕಾನೂನು ಅನುಸರಿಸಬೇಕಾದ ಕಾರಣ ಅವರನ್ನು ಪ್ರಶ್ನಿಸುವ ಅವಕಾಶ ಸದ್ಯಕ್ಕೆ ಇಲ್ಲ ಎಂದು ಹೇಳಿದರು.