ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲಾಗಿಲ್ಲ : ನಮ್ಮ ಸರ್ಕಾರದ ಬಂದಾಗ, ನನ್ನ ಅವಧಿ ಮುಗಿದಿತ್ತು - ಸಂಕನೂರು ಅಳಲು

Press meet at karwar

ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲಾಗಿಲ್ಲ :
ನಮ್ಮ ಸರ್ಕಾರದ ಬಂದಾಗ,  ನನ್ನ   ಅವಧಿ ಮುಗಿದಿತ್ತು - ಸಂಕನೂರು ಅಳಲು

 .

ಕಾರವಾರ : ಶಿಕ್ಷಕರ ಎಲ್ಲಾ  ಸಮಸ್ಯೆಗಳನ್ನು ಬಗೆಹರಿಸಲಾಗಿಲ್ಲ. ಎನ್‌ಪಿಎಸ್ ರದ್ಧತಿ ಹಾಗೂ ಮೊದಲಿನ ಹಾಗೆ ಪಿಂಚಣಿ ಸೌಲಭ್ಯ ನೀಡಿ ಎನ್ನುವುದು  ಶಿಕ್ಷಕರ ಪ್ರಮುಖ ಬೇಡಿಕೆಯಾಗಿತ್ತು. ಇದರ ಪರ ಹೋರಾಟ ಮುಂದುವರಿಸುವೆ. ನಿವೃತ್ತಿ  ನಂತರ ಮೊದಲಿನ ಹಾಗೆ ಪಿಂಚಣಿ ಕೊಡುವ ಬೇಡಿಕೆಯನ್ನು ಈಡೇರಿಸಲಾಗಲಿಲ್ಲ. ಆದರೆ ಸದನದಲ್ಲಿ ಪ್ರಶ್ನೆ ಕೇಳಿದ್ದೇನೆ ಎಂದು ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ.ಸಂಕನೂರು ಹೇಳಿದರು.
ಕಾರವಾರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ಮಾಡಿದ ಅವರು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ನನಗೆ ಒಂದು ಅಧಿವೇಶನದಲ್ಲಿ ಮಾತ್ರ ಭಾಗವಹಿಸಲು ಅವಕಾಶ ಸಿಕ್ಕಿತ್ತು. ನಂತರ ನನ್ನ ಅಧಿಕಾರದ ಅವಧಿ ಮುಗಿದಿತ್ತು. ಪದವೀಧರ ಕ್ಷೇತ್ರದ ಪ್ರತಿನಿಧಿಯಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ. ಹಾಗೂ ಅದಕ್ಕೆ ಸದನದಲ್ಲಿ ಕೇಳಿದ ಪ್ರಶ್ನೆ, ಉತ್ತರಗಳ ಪುಸ್ತಕ ಸಹ ತಂದಿರುವೆ ಎಂದರು.
ಈಗ ಮತ್ತೆ ಚುನಾವಣೆಗೆ ನಿಂತಿದ್ದು, ಪದವೀಧರರಾಗಿರುವ ಶಿಕ್ಷಕರು ಸಾಕಷ್ಟು ಪ್ರಮಾಣದಲ್ಲಿ ಮತದಾರರಾಗಿದ್ದಾರೆ. ಅವರ ಬೆಂಬಲದ ಜೊತೆ ನಿರುದ್ಯೋಗಿ ಪದವೀಧರರ ಬೆಂಬಲ ಸಿಗಲಿದೆ ಎಂಬ ಆಶಾಭಾವನೆ ಇದೆ ಎಂದರು. ಸ್ವಯಂ ಉದ್ಯೋಗಕ್ಕೆ ಕೇಂದ್ರ ಸರ್ಕಾರದ ಯೋಜನೆಗಳಿವೆ. ಅಲ್ಲದೇ ಗುತ್ತಿಗೆ ಆಧಾರದ ಉಪನ್ಯಾಸಕರಿಗೆ ಹಾಗೂ ಅನುದಾನ ರಹಿತ ಶಾಲಾ ಕಾಲೇಜುಗಳಿಗೆ ಅನುದಾನ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹಾಕಿದ್ದೇನೆ. ಅನುದಾನ ಸಹಿತ ಶಾಲಾ ಕಾಲೇಜುಗಳಲ್ಲಿ ನಿಧನ  ಹೊಂದಿದ ಹಾಗೂ ನಿವೃತ್ತಿಯಾದ ಹುದ್ದೆಗಳನ್ನು ತುಂಬಲು ಸರ್ಕಾರದಿಂದ ಅನುಮತಿ ಕೊಡಿಸಿದ್ದೇನೆ. ಸರ್ಕಾರದ ವಿವಿಧ ಇಲಾಖೆಗಳಲ್ಲಿ ೧.೯೦ ಲಕ್ಷ ಹುದ್ದೆ ಖಾಲಿ ಇವೆ. ಅವುಗಳನ್ನು ಭರ್ತಿ ಮಾಡಿದರೆ ಗುತ್ತಿಗೆ, ಹೊರ ಗುತ್ತಿಗೆ ಪದ್ಧತಿ ನಿಲ್ಲಲಿದೆ ಎಂದರು. ಸರ್ಕಾರದಲ್ಲಿ ಆರ್ಥಿಕ ಸಂಕಷ್ಟದ ಕಾರಣ ಅನೇಕ ಸಮಸ್ಯೆಗಳು ಹಾಗೆ ಇವೆ. ಮತ್ತೆ ನಾನು ಆಯ್ಕೆಯಾದರೆ ಎನ್ ಪಿ ಎಸ್ ರದ್ಧತಿ ಸೇರಿದಂತೆ , ನಿರುದ್ಯೋಗಿ ಪದವೀಧರರಿಗೆ ಸ್ಪಂದಿಸುವೆ ಎಂದು ಸಂಕನೂರು ಹೇಳಿದರು.
ಬಿಜೆಪಿಗಾಗಿ ಕೆಲಸ ಮಾಡಿರುವೆ :
ಚುನಾವಣೆ ಬಂದಾಗ ಬಿಜೆಪಿ ನಾಯಕರು ಬೇಕು.ಗೆದ್ದ ನಂತರ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸಲ್ಲ ಎಂಬ ಆರೋಪವಿದೆಯಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಂಕನೂರು ಗದಗ ಜಿಲ್ಲೆಯ ಜವಾಬ್ದಾರಿಯನ್ನು ಪಕ್ಷ ವಹಿಸಿತ್ತು. ಅಲ್ಲಿ ತಳ ಮಟ್ಟದಲ್ಲಿ ಕೆಲಸ ಮಾಡಿ ೪ ಜನ ಬಿಜೆಪಿ ಶಾಸಕರನ್ನು ಆರಿಸಿ ತರಲಾಯಿತು. ಜಿಲ್ಲೆಯ ಹೊರಗೆ ಒಂದು ವಿಧಾನಸಭಾ ಕ್ಷೇತ್ರದ ಚುನಾವಣಾ ಜವಾಬ್ದಾರಿ ಪಕ್ಷ ನೀಡಿತ್ತು. ಅದನ್ನು ಸಹ ಮಾಡಿರುವೆ ಎಂದು ಸಂಕನೂರು ಪಕ್ಷದ ಕೆಲಸ ಮಾಡಿದ ಬಗ್ಗೆ ಸಮರ್ಥಿಸಿಕೊಂಡರು.  ಪತ್ರಿಕಾಗೋಷ್ಠಿಯಲ್ಲಿ ಅವರ ಜೊತೆ ಶಾಸಕಿ ರೂಪಾಲಿ ಇದ್ದರು.
.........