ಅಧಿಕ ಮಾಸದ ಬಾಗಿನ : ಆಸಕ್ತ ದಂಪತಿಗಳಿಗೆ ಪ್ರಸಾದ
Adhika month: Prasad for interested couples
ಲೋಕದರ್ಶನ ವರದಿ
ಕೊಪ್ಪಳ 02: ಇಲ್ಲಿನ ಗವಿಶ್ರೀ ನಗರದಲ್ಲಿರುವ ಪ್ರಖ್ಯಾತ ಶ್ರೀ ಸಹಸ್ರಾಂಜನೇಯ ದೇವಸ್ಥಾನದ ವತಿಯಿಂದ ಅಧಿಕ ಮಾಸದ ಪ್ರಯುಕ್ತ ಬಾಗಿನ ಕೊಡುವ ಪದ್ಧತಿಯಂತೆ 33 ದಂಪತಿಗಳಿಗೆ ಶ್ರೀ ಸಹಸ್ರಾಂಜನೇಯ ಗುರುವಿನ ಪ್ರೇರಣೆಯಿಂದ ಈ ಅಧಿಕ ಮಾಸದ ಕೊನೆಯ ಶನಿವಾರ ಜೂನ್ 13 ರಂದು ಬೆಳಿಗ್ಗೆ 9 ಗಂಟೆಗೆ ಜರುಗುವ ವಿಶೇಷ ಪೂಜೆಯಲ್ಲಿ ಬಾಗಿನ ಕೊಡಲಾಗುವದು ಎಂದು ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ.
ತಮ್ಮ ಮನೆಯಲ್ಲಿ ಶ್ರೀ ಆಂಜನೇಯ ಪ್ರತಿಮೆಯನ್ನು ಪೂಜಿಸಲು ಇಚ್ಚಿಸುವಂಥ 33 ದಂಪತಿಗಳಿಗೆ ಆಮಂತ್ರಣ ಬಾಗಿನ ಕೊಡುವ ಪದ್ಧತಿಯಂತೆ ಈ ಬಾರಿ ಅಜ್ಜನ ಸನ್ನಿಧಿಯಿಂದ ಪ್ರತಿಮೆಯನ್ನು ಪೂಜಿಸಲು ಅವರಿಗೆ ಆಶೀರ್ವಾದ ರೂಪದಲ್ಲಿ ಉಡುಗೊರೆಯಾಗಿ ಕೊಟ್ಟು ಹಾರೈಸಲಾಗುವದು. ಸದರಿ ಆಸಕ್ತ ದಂಪತಿಗಳು ಈ ಕೆಳಕಂಡ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಇಲ್ಲವೇ ಖುದ್ದಾಗಿ ಭೇಟಿಯಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು, ಕಡ್ಡಾಯವಾಗಿ ಅಂದು ಅವರು ಆಗಮಿಸಬೇಕು ಹಾಗೂ ಹನುಮನ ವಿಗ್ರಹ ಪೂಜೆ ಮಾಡುವ ಕುಟುಂಬಗಳು ಮಾತ್ರ ಹೆಸರು ನೊಂದಾಯಿಸಿಕೊಳ್ಳಬೇಕು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 