ಕುರುಬರ ಸ್ಥಾನ ಖಾಲಿಯಾದ ಎ ಗುಂಪಿಗೆ ಪಂಚಮಸಾಲಿ ಸಮುದಾಯ ಸೇರಿಸಿ

Add Panchamasali community to Group A where the post of shepherds is vacant

ಕುರುಬರ ಸ್ಥಾನ ಖಾಲಿಯಾದ ಎ ಗುಂಪಿಗೆ ಪಂಚಮಸಾಲಿ ಸಮುದಾಯ ಸೇರಿಸಿ  

ಯಮಕನಮರಡಿ 14: ಸುಮಾರು ದಿನಗಳಿಂದ ಪಂಚಮಸಾಲಿ ಸಮುದಾಯವನ್ನು 2ಎ ಕೆಟಗೇರಿಗೆ ಸೇರಿಸುವುದಾಗಿ ಕೂಡಲಸಂಗಮದ ಜಗದ್ಗುರು ಬಸವಶ್ರೀ ಮೃತ್ಯುಂಜಯ ಸ್ವಾಮಿಗಳು ಇವರು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದರು. ಆದರೆ ಸಿದ್ದರಾಮಯ್ಯನವರ ಸರ್ಕಾರ ಪಂಚಮಸಾಲಿ ಸಮುದಾಯದ ಬೇಡಿಕೆಗಳನ್ನು ಪರಿಗಣಿಸದೆ ಇರುವುದನ್ನು ಗಮನಿಸಿ ಪೂಜ್ಯರು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡರು. ಆದರೂ ಸರ್ಕಾರ ಇವರ ಬೇಡಿಕೆಯನ್ನು ಗಮನಿಸದೆ ಪಂಚಮಸಾಲಿ ಸಮುದಾಯದ ಮೇಲೆ ಲಾಠಿ ಪ್ರಹಾರ ಮಾಡಿದ್ದು ಇಡೀ ಸಮುದಾಯಕ್ಕೆ ನೋವನ್ನುಂಟುಮಾಡಿದೆ. ಈಗಾಗಲೇ ಸರ್ಕಾರವು ಕುರುಬರ ಸಮುದಾಯವನ್ನು ಎಸ್ಟಿ ಮೀಸಲಾತಿಗೆ ಸೇರಿಸಲಾಗಿದೆ. ಅಂದರೆ ಈಗ ಹಿಂದೂಳಿದ 2ಎ ಗುಂಪಿನಲ್ಲಿ ಕುರುಬರ ಸ್ಥಾನವು ಖಾಲಿ ಇದೆ. ಅದನ್ನೆ ರೈತಾಪಿ ವರ್ಗವೇ ಮುಖ್ಯವಾಗಿರುವ ಪಂಚಮಸಾಲಿ ಸಮುದಾಯಕ್ಕೆ ನೀಡಬೇಕೆಂದು ಹೋರಾಟ ಮಾಡುತ್ತಿದ್ದಾರೆ. ಇಡೀ ರಾಜ್ಯಕ್ಕೆ ಅನ್ನ ನೀಡುತ್ತಿರುವ ಪಂಚಮಸಾಲಿ ರೈತರನ್ನು ಹಿಂದುಳಿದ ಎ ಗುಂಪಿಗೆ ಸೇರಿಸಿದರೆ ಸಿ ಎಂ ಸಚಿವ ಸಂಪುಟ ಸದಸ್ಯರಿಗೆ ಗೌರವ ಬರುತ್ತದೆ. ಕೇವಲ ಶಿಪಾರಸ್ಸ ಮಾಡಿ ಕಳಸುವುದು ಮಾತ್ರ ರಾಜ್ಯಸರ್ಕಾರದ ಕೆಲಸ ಅಂತಿಮ ನಿರ್ಧಾರ ಕೈಗೊಳ್ಳುವುದು ಕೇಂದ್ರ ಸರ್ಕಾರ. ಈ ಹಿನ್ನಲೆಯಲ್ಲಿ ಪಂಚಮಸಾಲಿ ಸಮುದಾಯವನ್ನು ಹಿಂದುಳಿದ 2ಎ ಗುಂಪಿಗೆ ಸೇರಿಸಲು ಮುಖ್ಯಮಂತ್ರಿ ಹಾಗೂ ಅವರ ಸಚಿವ ಸಂಪುಟದ ಸದಸ್ಯರು ನಿರ್ಧಾರ ಕೈಕೊಳ್ಳಬೇಕು ಎಂದು ಮಾಜಿ ಸಚಿವ ಶಶಿಕಾಂತ ನಾಯಿಕ ಆಗ್ರಹಿಸಿದ್ದಾರೆ.