ಅಡವಿಸೋಮಾಪೂರ ಡೆಂಗ್ಯೂ ದಿನಾಚರಣೆ ಈಡಿಸ್ ಸೊಳ್ಳೆಗಳ ಉತ್ಪತ್ತಿ ನಿಯಂತ್ರಿಸಿ,ಡೆಂಗ್ಯೂ ಚಿಕುಂಗುನ್ಯ ರೋಗ ತಡೆಗಟ್ಟಿರಿ
Adavisomapur Dengue Day Celebration Control the breeding of Aedes mosquitoes and prevent dengue, chi
ಅಡವಿಸೋಮಾಪೂರ ಡೆಂಗ್ಯೂ ದಿನಾಚರಣೆ ಈಡಿಸ್ ಸೊಳ್ಳೆಗಳ ಉತ್ಪತ್ತಿ ನಿಯಂತ್ರಿಸಿ,ಡೆಂಗ್ಯೂ ಚಿಕುಂಗುನ್ಯ ರೋಗ ತಡೆಗಟ್ಟಿರಿ;
ಗದಗ : ಈಡಿಸ್ ಇಜಿಪ್ಟೈ ಸೊಳ್ಳೆಗಳು ಕಚ್ಚುವುದರಿಂದ ಒಬ್ಬರಿಂದ ಮತ್ತೊಬ್ಬರಿಗೆ ಡೆಂಗ್ಯೂ ಚಿಕುಂಗುನ್ಯ ರೋಗವು ಹರಡುತ್ತದೆ ಆದ್ದರಿಂದ ನೀರಿನ ಪರಿಕರಗಳಲ್ಲಿ ಉತ್ಪತ್ತಿಯಾಗುತ್ತಿರುವ ಲಾರಾ್ವ ನಾಶಪಡಿಸುವುದರಿಂದ ಸೊಳ್ಳೆಗಳನ್ನು ನಿಯಂತ್ರಿಸಿ ರೋಗಗಳು ಹರಡದಂತೆ ತಡೆಗಟ್ಟಬಹುದು. ಶಾಲಾ ಮಕ್ಕಳು ಸಮುದಾಯದೊಂದಿಗೆ ಸೇರಿ ನಾಶಪಡಿಸಿ ಡೆಂಘೀ ಜ್ವರ ಬಾರದಂತೆ ತಡೆಗಟ್ಟೋಣ ಎಂದು ಅಡವಿಸೋಮಾಪೂರ ಆರೋಗ್ಯ ನೀರೀಕ್ಷಣಾಧಿಕಾರಿಗಳಾದ ಸಿದ್ದಪ್ಪ ಎನ್ ಲಿಂಗದಾಳ ಹೇಳಿದರು
ಅವರು ಪ್ರಾಥಮಿಕ ಆರೋಗ್ಯ ಕೇಂದ್ರ ಲಕ್ಕುಂಡಿಯ ಅಡವಿಸೋಮಾಪೂರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಏರಿ್ಡಸಿದ್ದ ಡೆಂಗ್ಯೂ ದಿನಾಚರಣೆ ಮತ್ತು ಪರಿಸರ ಸ್ವಚ್ಛತೆ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು
ಯಾವುದೇ ಜ್ವರವಿರಲಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಮುಖ್ಯವಾಗಿದ್ದು ಬೇರೆ ಬೇರೆ ಊರಿಗಳಿಗೆ ಹೊಗಿಬಂದಂತವರು ರಕ್ತ ಪರಿಕ್ಷೆ ಮಾಡಿಸಿಕೊಳ್ಳಿರಿ, ಡೆಂಗ್ಯೂ ಚಿಕುಂಗುನ್ಯ ಮತ್ತು ಮಲೇರಿಯಾ ರೊಗಗಳನ್ನು ನಿಯಂತ್ರಣ ಮಾಡಲು ಸೊಳ್ಳೆಗಳ ಕಡಿತದಿಂದ ಪಾರಾಗಲು ಸೊಳ್ಳೆ ಪರದೆ. ಒಡಮಸ್ ಲೇಪನ. ಮತ್ತು ಸಂಜೆ ಮನೆಯಲ್ಲಿ ಬೇವಿನಸೊಪ್ಪಿನ ಧೂಮಿಕರಣ ಮಾಡುವುದು, ಗಟಾರದಲ್ಲಿ ಕಸಕಡ್ಡಿ ಹಾಕದೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು, ನೀರಿನ ಪರಿಕರಗಳಲ್ಲಿ ಲಾರಾ್ವ ಆಗದಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ ಎಂದು ಹೇಳಿದರು
ಹಿರಿಯ ಆರೋಗ್ಯ ನೀರೀಕ್ಷಣಾಧಿಕಾರಿ ವಾಯ್ ಎನ್ ಕಡೇಮನಿ ಮಾತನಾಡಿ ಸುದ್ದ ನೀರು ಆಹಾರ ಸೇವನೆ ಮಾಡಬೇಕು ಮತ್ತು ಪರಿಸರ ಸ್ವಚ್ಛತೆಗೆ ಹೆಚ್ಚು ಗಮನ ನೀಡಬೇಕು. ನೀರಿನ ಪರಿಕರಗಳನ್ನು ಮುಚ್ಚಿಟ್ಟು ಸೊಳ್ಳೆಗಳನ್ನು ಮರಿ ಲಾರಾ್ವ ಆಗದಂತೆ ನೋಡಿಕೊಳ್ಳಬೇಕು, ಜೈವೀಕ ವಿಧಾನ ಗಂಬೂಸಿಯಾ ಮೀನುಗಳನ್ನು ಬೆಳಸಿ ಲಾರಾ್ವ ನಾಶ ಪಡಿಸಬೇಕೆಂದರು ಅತೀಸಾರ, ವಾಕರಿಕೆ, ವಾಂತಿ, ನಿರ್ಜಲೀಕರಣ ಮತ್ತು ಸ್ನಾಯು ಸೆಳೆತದಂತಹ ಸಮಸ್ಯೆಗಳು ಇದ್ದರೆ ವೈದ್ಯರ ಬಳಿ ಚಿಕಿತ್ಸೆಯನ್ನು ಪಡೆಯಿರಿ ಕುದಿಸಿ, ಆರಿಸಿದ ನೀರನ್ನು ಸೇವಿಸಿರಿ ತಾಜಾ ಹಣ್ಣುಗಳು, ತರಕಾರಿಗಳನ್ನು ಮತ್ತು ಆಹಾರ ಪದಾರ್ಥಗಳನ್ನೇ ಉಪಯೋಗಿಸಬೇಕೆಂದು ತಿಳಿಸಿದರು,
ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಮುಖ್ಯೋಪಾದ್ಯಾಯರಾದ ಚಿದಾನಂದ ಪತ್ತಾರ ಮಾತನಾಡಿ ಊಟ ತಯಾರಿಸುವ ಮತ್ತು ಊಟ ಮಾಡುವ ಮುನ್ನ ಕೈಗಳನ್ನು ಸಾಬೂನು ಮತ್ತು ನೀರಿನಿಂದ ಸ್ವಚ್ಛಗೊಳಿಸುವುದು. ಶೌಚಾಲಯವನ್ನು ಉಪಯೋಗಿಸುವ ಮುಂಚೆ ಮತ್ತು ನಂತರ ಕೈಗಳನ್ನು ಸಾಬೂನಿನಿಂದ ಸ್ವಚ್ಛಗೊಳಿಸುವುದು. ಸಾರ್ವಜನಿಕ ಸ್ಥಳಗಳಲ್ಲಿ ಸಿದ್ಧಪಡಿಸಿದ ಆಹಾರ ಪದಾರ್ಥಗಳ ಮೇಲೆ ಕ್ರಿಮಿ ಕೀಟಗಳು ಕುಳಿತುಕೊಳ್ಳುವಂತೆ ಸದಾ ಮುಚ್ಚಳದಿಂದ ಮುಚ್ಚಿಡುವಂತೆ ನಿಮ್ಮ ಮನೆಯ ಸುದ್ದ ನೀರಿನ ಪರಿಕರಗಳಲ್ಲಿ ಉತ್ಪತ್ತಿಯಾಗುವಂತಹ ಸೊಳ್ಳೆಮರಿ ಲಾರ್ವಾ ನಾಶಪಡಿಸವುದು ಮುಖ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನೀರೀಕ್ಷಣಾಧಿಕಾರಿಗಳಾದ ಎಸ್.ಬಿ.ಗಡಾದ ಮುತ್ತಪ್ಪ ಹಟ್ಟಿಮನಿ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು ಸವಿತಾ ಪವಾರ ಆಶಾ ಕಾರ್ಯಕರ್ತೆಯರು ಮಾಲಾ ಮೇವುಂಡಿ ಉಮಾದೇವಿ ಖಾನಾಪೂರ ಮಂಜುಳಾ ಆರಿ ಲಲಿತಾ ಅಂಗಡಿ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 