ಅಡವಿಲಿಂಗ ಮಹಾರಾಜರು ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಭೇಟಿ
Adavilinga Maharaja ta bishitá e Tèmpel di Yellamma Devi
ಉಗರಗೋಳ, 08 : ಸಮೀಪದ ಯಲ್ಲಮ್ಮನಗುಡ್ಡಕ್ಕೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ವೀರಗೋಟದ ಅಡವಿಲಿಂಗ ಮಹಾರಾಜರು ಶುಕ್ರವಾರ ಭೇಟಿ ನೀಡಿ, ಯಲ್ಲಮ್ಮ ದೇವಿ ದರ್ಶನಾಶೀರ್ವಾದ ಪಡೆದುಕೊಂಡರು. ದೇವಸ್ಥಾನದ ವತಿಯಿಂದ ಶ್ರೀಗಳನ್ನು ಸತ್ಕರಿಸಲಾಯಿತು. ಅಡವಿಲಿಂಗ ಮಹಾರಾಜರು, ಭಕ್ತರು ಬೇಡಿದ್ದನ್ನೆಲ್ಲ ಈಡೇರಿಸುವ ಧಾರ್ಮಿಕ ಕ್ಷೇತ್ರ ಇದಾಗಿದೆ. ಕಾಮಧೇನು ಕಲ್ಪವೃಕ್ಷ ಇಲ್ಲಿದೆ ಎಂದರು.
ಜಂಬಗಿಯ ಪ್ರಭುದೇವರ ಬೆಟ್ಟದ ಶಿವಯೋಗೀಶ್ವರ ಶ್ರೀಗಳು, ಯಲ್ಲಮ್ಮ ದೇವಸ್ಥಾನದಲ್ಲಿ ನಾಗದೇವತೆ ವಾಸವಿದ್ದಾಳೆ. ಭಕ್ತರು ಇಲ್ಲಿಗೆ ಬಂದು ಪೂಜಿಸಿದರೆ ಸರೋ್ದಷ ದೂರವಾಗುತ್ತದೆ ಎಂದು ಹೇಳಿದರು. ಚಿಕ್ಕುಂಬಿಯ ಅಭಿನವನಾಗಲಿಂಗ ಶ್ರೀಗಳು, ಮಾತೋಶ್ರೀ ಅಮ್ಮನವರು, ಆರ್ ಎಚ್ ಸವದತ್ತಿ, ಯಾದಗಿರಿ ಶ್ರೀನಿವಾಸರಡ್ಡಿ, ನಾಗರಾಜ ಬಡೆಪ್ಪನವರ, ಜಂಬಗಿ ಗುರನಗೌಡ ಕೆಂಭಾವಿ, ಶಿದ್ಧನಗೌಡ ಪಾಟೀಲ, ವ್ಹಿ ಆರ್ ನೀಲಗುಂದ, ಮಲ್ಲನಗೌಡ ಪಾಟೀಲ, ಪರಸನಗೌಡ ರೇಣ್ಕೀಗೌಡ್ರ, ಬಸನಗೌಡ ಪರಷರುಷಿ ಹಾಗೂ ಇತರರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 