ಅಡವಿಸೋಮಾಪೂರ : ಸ್ವಸ್ಥ ನಾರಿ ಸಶಕ್ತ ಪರಿವಾರ ಅಭಿಯಾನಕ್ಕೆ ಚಾಲನೆ

ಅಡವಿಸೋಮಾಪೂರ : ಸ್ವಸ್ಥ  ನಾರಿ ಸಶಕ್ತ ಪರಿವಾರ ಅಭಿಯಾನಕ್ಕೆ ಚಾಲನೆ    Adavi Somapura: Launch of the Healthy Women, Empowered Families Campaign

ಗದಗ 20 : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಇದೇ ದಿನಾಂಕ ಸಪ್ಟೆಂಬರ್ 17 ರಿಂದ ಅಕ್ಟೋಬರ್ ಎರಡರವರೆಗೆ ಹಮ್ಮಿಕೊಂಡಿರುವ ಸ್ವಸ್ಥ ನಾರಿ ಸಶಕ್ತ ಪರಿವಾರ ಅಭಿಯಾನವು ಮಹಿಳಾ ಸಂಕುಲಕ್ಕೆ ವರದಾನ ಆಗಿದ್ದು ಸಾರ್ವಜನಿಕರು ಮಹಿಳೆಯರು ಇದರ ಸದುಪಯೋಗವನ್ನ ಪಡೆಯಲು ಮುಂದಾಗ ಬೇಕೆಂದು ಅಡವಿಸೋಮಾಪುರ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಲಿ ಉಪಾಧ್ಯಕ್ಷರು ಆದ ಶಾಮಸುಂದರ ಡಂಬಳ ಹೇಳಿದರು.  

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅನೇಕ ಇಲಾಖೆಗಳ ಸಹಯೋಗದೊಂದಿಗೆ ಗದಗ ತಾಲೂಕ ಮಟ್ಟದ ಸ್ವಸ್ಥನಾರಿ ಸಶಕ್ತ ಪರಿವಾರ ಅಭಿಯಾನವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.  

ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಆರ್ ಸಿ ಎಚ್ ಅಧಿಕಾರಿಗಳಾದ ಡಾ. ಮೀನಾಕ್ಷಿ ಕೆ ಅವರು ಮಾತನಾಡಿ ಮಹಿಳೆಯರಿಗೆ ರಕ್ತದ ಒತ್ತಡ ಮಧುಮೇಹಾ, ಕ್ಯಾನ್ಸರ್  ಕ್ಷಯರೋಗ ಕಾಯಿಲೆಗಳ ತಪಾಸನೆ ಮತ್ತು ಎ ಎನ್ ಸಿ ತಪಾಸನೆ ಹಾಗೆ ಮಕ್ಕಳಿಗೆ ಲಸಿಕಾ ಸೌಲಭ್ಯಗಳು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಳ್ಳಬೇಕೆಂದರು. 

ಇನ್ನೋರ್ವ ಅತಿಥಿಗಳಾಗಿದ್ದ ತಾಲೂಕ ಆರೋಗ್ಯ ಅಧಿಕಾರಿಗಳಾದ  ಡಾ.      ಪ್ರೀತ್ ಖೋನಾ  ಅವರು ಮಾತನಾಡಿ ಈ ಅಭಿಯಾನದ ಜೊತೆಗೆ ಎಂಟನೆಯ ರಾಷ್ಟ್ರೀಯ ಪೋಷಣ ಮಾಸವನ್ನು ಕೂಡ ಆಚರಿಸಲಾಗುತ್ತಿದ್ದು ಬೊಜ್ಜು ತಡೆಗಟ್ಟಲು ಸಕ್ಕರೆ ಮತ್ತು ಖಾದ್ಯ  ಸೇವನೆಯನ್ನು ಕಡಿಮೆ ಮಾಡಲು ಈ ಅಭಿಯಾನದಲ್ಲಿ ಒತ್ತು ನೀಡಲಾಗುವುದು ಎಂದರು.  

ಗದಗ್ ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಡಾ. ರಾಜೇಂದ್ರ ಎಸ್ ಗಡಾದವರು ಕಾರ್ಯಕ್ರಮ ಕುರಿತು ಪ್ರಾಸ್ತಾವಿಕ ಮಾತುಗಳನ್ನು ಹೇಳಿ ಮಹಿಳೆಯರಿಗೆ ವಿಶೇಷವಾಗಿ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಈ ಅಭಿಯಾನವು ಕಾಮಧೇನು ವಾಗಿದ್ದು ತಪಾಸನ ಶಿಬಿರದಲ್ಲಿ ಪಾಲ್ಗೊಳ್ಳುವ ತಜ್ಞ ವೈದ್ಯರ ಸದುಪಯೋಗವನ್ನ ಮಹಿಳೆಯರು ಪಡೆಯುವ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದರು.  

ವೇದಿಕೆಯ ಮೇಲೆ ಗ್ರಾಮ ಪಂಚಾಯತಿ ಸದಸ್ಯರಾದ ಬಸಮ್ಮ ಪುರದ್, ಸೋಮಪ್ಪ ಅಣ್ಣಿಗೇರಿ, ರಮೇಶ್ ಹಂಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಪ್ರೇಮಾ ಹಟ್ಟಿ, ಬೆಟಿಗೇರಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಪ್ರಕಾಶ್ ಕಬ್ಬರಗಿ, ಲಕ್ಕುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ ವರ್ಷ ಬ್ಯಾಲಿಹಾಳ್,  ಆಯುಷ್ ವೈದ್ಯಾಧಿಕಾರಿಗಳಾದ ಡಾ. ಅಶೋಕ್ ಮತ್ತಿಗಟ್ಟಿ ,ಸಿ ಎಚ್ ಸಿ ಆಸ್ಪತ್ರೆಯ ಡಾ. ನೂರಾನಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಗದಗ ಜಿಲ್ಲಾ ಕಾರ್ಯಾಧ್ಯಕ್ಷರಾದ ಸಿದ್ದಪ್ಪ ಎನ್ ಗದಗ್ ಟಿ ಬಿ  ಮುಂತಾದವರು ಪಾಲ್ಗೊಂಡಿದ್ದರು.   

ಇದೇ ಸಂದರ್ಭದಲ್ಲಿ ಬೆಳವಣಿಕಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸುರಕ್ಷತಾ ಅಧಿಕಾರಿ ಶ್ರೀಮತಿ ಬಸಮ್ಮ ಗುರಿಕಾರ್ ಅವರಿಗೆ ಶ್ರದ್ಧಾಂಜಲಿ ಅರ​‍್ಿಸಲಾಯಿತು. ನಂತರ ನಡೆದ ಆರೋಗ್ಯ ತಪಾಸಣಾ ಶಿಬಿರಗಳಲ್ಲಿ ಸುತ್ತು ಮುತ್ತಲು ಗ್ರಾಮದಿಂದ ಬಂದಂತ ನೂರಾರು ಜನರು ಪಾಲ್ಗೊಳ್ಳುವ ಮೂಲಕ ತಜ್ಞ ವೈದ್ಯರಿಂದ ಸಲಹೆ ಹಾಗೂ ಚಿಕಿತ್ಸೆಯನ್ನು ಪಡೆದರು.