ನವದೆಹಲಿ 12: ನಟಿ ರಶ್ಮಿಕಾ ಮಂದಣ್ಣ ಕಾಲಿಗೆ ಗಾಯ ಮಾಡಿಕೊಂಡಿದ್ದು, ಶೀಘ್ರದಲ್ಲೇ ಚೇತರಿಸಿಕೊಂಡು ನಟನೆಗೆ ಹಿಂದಿರುಗುವುದಾಗಿ ಹೇಳಿದ್ದಾರೆ.
ಗಾಯದ ಕಾರಣದಿಂದ ಚಿತ್ರೀಕರಣದಲ್ಲಿ ವಿಳಂಬಕ್ಕಾಗಿ ತಮ್ಮ ಮುಂಬರುವ ಚಿತ್ರಗಳ ನಿರ್ದೇಶಕರ ಬಳಿ ಕ್ಷಮೆ ಕೇಳಿದ್ದಾರೆ. ಪ್ಲಾಸ್ಟರ್ ಹಾಕಿರುವ ಕಾಲಿನ ಚಿತ್ರದ ಜೊತೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ರಶ್ಮಿಕಾ, ಜಿಮ್‌ನಲ್ಲಿ ವರ್ಕೌಟ್ ವೇಳೆ ಗಾಯಗೊಂಡಿದ್ದಾಗಿ ಬರೆದುಕೊಂಡಿದ್ದಾರೆ.
ಮುಂದಿನ ಕೆಲವು ವಾರಗಳು ಅಥವಾ ತಿಂಗಳುಗಳಲ್ಲಿ ಹಿಂದಿರುಗುವ ವಿಶ್ವಾಸದಲ್ಲಿದ್ದೇನೆ. ಆದರೆ, ಅದು ದೇವರಿಗೆ ಮಾತ್ರ ಗೊತ್ತು. ಥಮ, ಸಿಕಂದರ್ ಮತ್ತು ಕುಬೇರ ಚಿತ್ರಗಳ ಚಿತ್ರೀಕರಣಕ್ಕೆ ಶೀಘ್ರ ಹಿಂದಿರುಗುವ ವಿಶ್ವಾಸದಲ್ಲಿದ್ದೇನೆ. ನನ್ನಿಂದಾಗಿ ಚಿತ್ರೀಕರಣ ವಿಳಂಬಕ್ಕಾಗಿ ನಿರ್ದೇಶಕರಿಗೆ ಕ್ಷಮೆ ಕೇಳುತ್ತೇನೆ’ಎಂದು ಬರೆದುಕೊಂಡಿದ್ದಾರೆ.