ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ..!
ಕಾಗವಾಡ 16: ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಅಭಿವೃದ್ಧಿಯ ಜೊತೆಗೆ ಈ ಭಾಗದ ರೈತರ ಬಹುದಿನಗಳ ಕನಸಿನ ಖಿಳೇಗಾಂವ ಬಸವೇಶ್ವರ ಯಾತ ನೀರಾವರಿ ಯೋಜನೆಯ ಪ್ರಾಯೋಗಿಕ ಪರೀಕ್ಷೆಯನ್ನು ಶೀಘ್ರದಲ್ಲಿಯೇ ಮಾಡಲಾಗುವುದು ಎಂದು ಶಾಸಕ ರಾಜು ಕಾಗೆ ತಿಳಿಸಿದ್ದಾರೆ.
ಅವರು ಗುರುವಾರ ದಿ. 16 ರಂದು ಕಾಡಾ ಇಲಾಖೆಯ 35 ಲಕ್ಷ ಅನುದಾನದಲ್ಲಿ ಐನಾಪೂರ-ಉಗಾರ ಮುಖ್ಯ ರಸ್ತೆಯಿಂದ ಕುಡಚಿ ರಸ್ತೆಗೆ ಸಂಪರ್ಕ ಕಲ್ಪಿಸುವ ಬಾರಿಗಡ್ಡೆ ರಸ್ತೆ ಅಭಿವೃದ್ಧಿ ಕಾಮಗಾರಿ ಮತ್ತು 45 ಲಕ್ಷ ಅನುದಾನದ ಮದಭಾವಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಿಸಿ ರಸ್ತೆ ಮತ್ತು ಕಂಪೌಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ, ಮಾತನಾಡುತ್ತಿದ್ದರು. ಬಸವೇಶ್ವರ ಯಾತ ನೀರಾವರಿ ಯೋಜನೆಯ ಮೊದಲನೇ ಹಂತದ ಕಾಮಗಾರಿ ಜೊತೆಗೆ ವಿದ್ಯುತ್ ಸರಬರಾಜು ಕಾಮಗಾರಿ ಪೂರ್ಣಗೊಂಡಿದೆ. ಶೀಘ್ರದಲ್ಲಿ ಕಾಲುವೆಯ ಮುಖಾಂತರ ಪ್ರಾಯೋಗಿಕವಾಗಿ ನೀರು ಹರಿಸಿ, ಪರೀಕ್ಷೆ ಮಾಡಲಾಗುವುದು. ಈ ಯೋಜನೆಯನ್ನು ಪೂರ್ಣಗೊಳಿಸುವ ಭರವಸೆಯೊಂದಿಗೆ ನಾನು ಚುನಾವಣೆಯಲ್ಲಿ ಆಯ್ಕೆಗೊಂಡಿದ್ದು, ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸುವ ಭರವಸೆ ವ್ಯಕ್ತಪಡಿಸಿದರು.
ಈ ಸಮಯದಲ್ಲಿ ಕಾಡಾ ಎಇಇ ಸತೀಶ ಮಿರ್ಜೆ, ಲ್ಯಾಂಡ ಆರ್ಮಿಯ ಮಲ್ಲಿಕಾರ್ಜುನ ಕೆಂಪವಾಡೆ, ಉಗಾರ ಪುರಸಭೆ ಮುಖ್ಯಾಧಿಕಾರಿ ಎಂ.ಆರ್. ನಧಾಫ, ಗುತ್ತಿಗೆದಾರರಾದ ಗೋಪಾಲ ಹುಲಿಮನಿ, ಕಲ್ಲಪ್ಪಾ ಮೈಲೂರ ಮಾಜಿ ಜಿ.ಪಂ. ಸದಸ್ಯ ವಿನಾಯಕ ಬಾಗಡಿ, ಸತೀಶ ಜಗತಾಪ, ವಿನಾಯಕ ಜನಸೇವಕ, ವಿಜಯ ಅಸೋದೆ, ದೀಲೀಪ ಶಿಂಧೆ, ಯಲ್ಲಪ್ಪಾ ಗಸ್ತಿ, ಧನು ವಾಘಮೋಡೆ, ಅಜೀತ ಕಟಗೇರಿ, ರಾಜೇಂದ್ರ ಕಾಂಬಳೆ, ಪ್ರೇಮ ಬಾಳೋಜಿ, ದೀಲೀಪ ಹುಲ್ಲೋಳ್ಳಿ, ರಾಜು ಅಸೋದೆ, ಲಕ್ಷ್ಮಣ ಅವಳೆ, ಮಲ್ಲಿಕಾರ್ಜುನ ಅವಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.