ಬೆಂಗಳೂರು, ಡಿ 11 : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ನಲ್ಲಿ ಇಂದು ವಿಧಿವಶರಾದ, ದಿವಂಗತ ನಟ ಉದಯ ಕುಮಾರ್ ಅವರ ಪತ್ನಿ ಕಮಲಮ್ಮ ಕಲಾ ಪೋಷಕರಾಗಿದ್ದರು ಎಂಬುದು ಹೆಮ್ಮೆಯ ಸಂಗತಿ
ಪವನಸುತ ಕೇಸರಿ ಕಲಾ ಶಾಲಾ ಪ್ರತಿಷ್ಠಾನವನ್ನು ಸ್ಥಾಪಿಸಿದ್ದ ಕಮಲಮ್ಮ ಅವರು ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಅಂತಿಮ ದಿನಗಳವರೆಗೂ ಪ್ರತಿಷ್ಠಾನದ ಮೂಲಕ ಕಲಾ ಸೇವೆಯನ್ನು ಮುಂದುವರಿಸಿದ್ದರು.
ಕಲಾಕೇಸರಿ ಹೆಸರನಲ್ಲಿ ಕನ್ನಡ ಸೇವೆಯನ್ನು, ಪ್ರತಿಷ್ಠಾನದ ಹೆಸರಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು.
ಉದಯ್ಕುಮಾರ್ ಸ್ಮರಣಾರ್ಥ ಕಮಲಮ್ಮ ಹಾಗೂ ಪುತ್ರ ವಿಕ್ರಂ ಉದಯ್ಕುಮಾರ್, ಪುತ್ರಿ ಶ್ಯಾಮಲತ ಅವರು ಸೇರಿ ಈ ಪ್ರತಿಷ್ಠಾನವನ್ನು ಸ್ಥಾಪಿಸಿದ್ದರು. ಆನೇಕಲ್ ನಲ್ಲಿರುವ ಕಲಾಶಾಲೆಯನ್ನು ಇವರ ಕುಟುಂಬ ನಡೆಸುತ್ತಿದೆ. ಇಲ್ಲಿ ಶಾಸ್ತ್ರೀಯ ಸಂಗೀತ ಹಾಗೂ ಪ್ರದರ್ಶನ ಕಲೆಗಳು, ಭರತನಾಟ್ಯವನ್ನು ಕಲಿಯಲು ಅವಕಾಶವಿದೆ.
ಕಮಲಮ್ಮನವರ ಅಂತಿಮ ವಿಧಿ-ವಿಧಾನದ ಎಲ್ಲಾ ಕಾರ್ಯಗಳು ಆನೇಕಲ್ ನಲ್ಲಿ ಮಾಡಲಾಗುತ್ತದೆ ಎಂಬ ಮಾಹಿತಿ ಲಭಿಸಿದೆ.