ಬೆಂಗಳೂರು 24: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ʼಭೈರತಿ ರಣಗಲ್ʼ ಓಟಿಟಿ ರಿಲೀಸ್‌ಗೆ ದಿನ ನಿಗದಿಯಾಗಿದೆ.
ನಟ ಶಿವರಾಜ್‌ಕುಮಾರ್ ನಟನೆಯ ‘ಭೈರತಿ ರಣಗಲ್’ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಆ ಮೂಲಕ ʼಮಫ್ತಿʼ ಪ್ರೀಕ್ವೆಲ್‌ಗೂ ಪ್ರೇಕ್ಷಕರು ಜೈಕಾರ ಹಾಕಿದ್ದರು
ನರ್ತನ್ ನಿರ್ದೇಶನದ ʼಭೈರತಿ ರಣಗಲ್ʼ ನ.15 ರಂದು ರಿಲೀಸ್ ಆಗಿತ್ತು. ಕಪ್ಪು ಕೋಟ್ ತೊಟ್ಟು ವಕೀಲನಾಗಿ ಮತ್ತು ಮಾಸ್ ಹೀರೋ ಆಗಿ ಅಬ್ಬರಿಸಿದ ಎರಡು ಶೇಡ್ ನಲ್ಲಿ ಸೆಂಚುರಿ ಸ್ಟಾರ್ ಮಿಂಚಿದ್ದರು. ಸಿನಿಮಾ ಥಿಯೇಟರ್‌ನಲ್ಲಿ ಹಿಟ್ ಆಗುವುದರ ಜತೆಗೆ ಬಾಕ್ಸಾಫೀಸ್‌ನಲ್ಲೂ ಸಮಾಧಾನ ತರುವ ಬ್ಯುಸಿನೆಸ್ ಮಾಡಿತ್ತು. ಅಂದಾಜಿನ ಪ್ರಕಾರ ಚಿತ್ರ 20 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.
ಸಿನಿಮಾದಲ್ಲಿ ದೇವರಾಜ್, ಅವಿನಾಶ್,ರಾಹುಲ್ ಭೋಸ್, ರುಕ್ಮಿಣಿ ವಸಂತ್ ಮುಂತಾದವರು ನಟಿಸಿದ್ದು, ಗೀತಾ ಪಿಕ್ಚರ್ಸ್ ಲಾಂಛನದಲ್ಲಿ ಗೀತಾ ಶಿವರಾಜಕುಮಾರ್ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ನವೀನ್ ಕುಮಾರ್ ಛಾಯಾಗ್ರಹಣ, ಆಕಾಶ್ ಹಿರೇಮಠ ಸಂಕಲನ, ಗುಣ ಕಲಾ ನಿರ್ದೇಶನ ಹಾಗೂ ದಿಲೀಪ್ ಸುಬ್ರಹ್ಮಣ್ಯ, ಚೇತನ್ ಡಿಸೋಜ ಸಾಹಸ ನಿರ್ದೇಶನ ಭೈರತಿ ರಣಗಲ್ ಚಿತ್ರಕ್ಕಿದೆ.
ಸಿನಿಮಾ ರಿಲೀಸ್ ಆಗಿ 40 ದಿನಕ್ಕೆ ʼಭೈರತಿ ರಣಗಲ್ʼ ಓಟಿಟಿ ಅಖಾಡಕ್ಕೆ ಕಾಲಿಡಲಿದೆ. ಡಿ.25 ರಂದು ʼಭೈರತಿ ರಣಗಲ್ʼ ಅಮೇಜಾನ್ ಪ್ರೈಮ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ.
ಆ ಮೂಲಕ ಕ್ರಿಸ್ಮಸ್ ಹಾಲಿಡೇಗೆ ಸಿನಿಮಂದಿಗೆ ಭರ್ಜರಿ ಮನರಂಜನೆ ಸಿಗಲಿದೆ.