ಕಲಾವಿದ ಪುರುಷೋತ್ತಮ್ ಹಂದ್ಯಾಳ್ ಗೆ ನಾಟಕ ಅಕಾಡಮಿ ಪ್ರಶಸ್ತಿ

ಕಲಾವಿದ ಪುರುಷೋತ್ತಮ್ ಹಂದ್ಯಾಳ್ ಗೆ  ನಾಟಕ ಅಕಾಡಮಿ ಪ್ರಶಸ್ತಿ Actor Purushottam Handyal won the Natak Akademi Award


ಬಳ್ಳಾರಿ. ಆ. 21 : ನಗರದ  ರಂಗಭೂಮಿ ಕಲಾವಿದ  ಪುರುಷೋತ್ತಮ ಹಂದ್ಯಾಳ್  ಇವರಿಗೆ 2026-27ನೇ ಸಾಲಿನ ನಾಟಕ ಅಕಾಡಮಿಯ ವಾರ್ಷಿಕ ಪ್ರಶಸ್ತಿ ಲಭಿಸಿದೆ.ಇವರು  ’ಮತ್ತೊಂದು ಕುರುಕ್ಷೇತ್ರ’, ’ಮಹಿಮಾಪುರ’, ’ರಕ್ತರಾತ್ರಿ’, ’ಸತ್ಯ ಹರಿಶ್ಚಂದ್ರ’, ’ಕಲ್ಯಾಣ ಕ್ರಾಂತಿ’ ಸೇರಿದಂತೆ ಹತ್ತಾರು ಸಾಮಾಜಿಕ, ಪೌರಾಣಿಕ ಹಾಗೂ ಐತಿಹಾಸಿಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ.  ಜೊತೆಗೆ ’ಅಪಶೃತಿ’, ’ಗಂಗಾ’ ಧಾರಾವಾಹಿಗಳಲ್ಲಿ ಹಾಗೂ ’ಕೊರೊನಾ’ ಜಾಗೃತಿಕಿರುಚಿತ್ರಗಳಲ್ಲೂ ನಟಿಸಿದ್ದಾರೆ. ಹಂದ್ಯಾಳುವಿನ ಶ್ರೀ ಮಹದೇವ ತಾತ ಕಲಾ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿ ರಂಗಭೂಮಿಯ ಪೋಷಣೆಯಲ್ಲಿ ತೊಡಗಿರುವ ಇವರು, ಮೈಸೂರು ದಸರಾ, ಹಂಪಿ ಉತ್ಸವ, ಕರಾವಳಿ ಹಾಗೂ ವಿವಿಧ ಜಿಲ್ಲಾ ರಂಗೋತ್ಸವಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಇವರು ಈಗಾಗಲೇ  ಕಲಾ ಸೇವೆಯನ್ನು ಗುರುತಿಸಿ ’ಅಭಿನಯ ಸಿರಿ’, ’ಕಲಾಶೋಭಿತ’, ’ರಂಗ ಕೌಸ್ತುಭ’, ’ಬಳ್ಳಾರಿ ರಾಘವ ಪ್ರಶಸ್ತಿ’, ’ಕನ್ನಡ ಶ್ರೀ’, ’ಕಲಾ ಚತುರ’, ’ಕಾರಂತ ರತ್ನ’ ಸೇರಿದಂತೆ ಹಲವು ಗೌರವಗಳನ್ನು ತಮ್ಮದಾಗಿಸಿಕೊಂಡಿದ್ದಾರೆ, ಇವರಿಗೆ ನಾಟಕ ಅಕಾಡೆಮಿ ಪ್ರಶಸ್ತಿ ದೊರಿತ ಸಂದರ್ಭದಲ್ಲಿ ಅವರ ಸಹಪಾಠಿಗಳು ಸ್ನೇಹಿತರು ಮತ್ತು ಬಂಧುಗಳು ಅಭಿನಂದನೆಗಳನ್ನು ತಿಳಿಸಿದ್ದಾರೆ.