ಬೆಂಗಳೂರು 19: ಶಬರಿಮಲೆ ಪ್ರವೇಶಕ್ಕೆ ಯತ್ನಿಸಿ ವಿಫಲವಾದ ಮಹಿಳಾ ಕಾರ್ಯಕರ್ತೆ ರೆಹಾನಾ ಫಾತಿಮಾ ವಿರುದ್ಧ ನಟ ಜಗ್ಗೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಕಿಸ್ ಆಫ್ ಲವ್ ನಿಂದ ಸುದ್ದಿಯಾಗಿದ್ದ ರೆಹನಾ ಫಾತಿಮಾ ಅಯ್ಯಪ್ಪ ಮಾಲಾಧಾರಿಯ ಗೆಟಪ್‌ನಲ್ಲಿ ಶಬರಿಮಲೆ ಪ್ರವೇಶಕ್ಕೆ ಯತ್ನಿಸಿದ್ದು, ಈ ಕುರಿತು ನಟ ಜಗ್ಗೇಶ್ ಟ್ವೀಟರ್‌ನಲ್ಲಿ ಕಿಡಿಕಾರಿದ್ದಾರೆ.
ಅನ್ಯಧರ್ಮಿಯಳು ಈ ಅವತಾರದಲ್ಲಿ ಪೋಲಿಸರ ಬೆಂಗಾವಲಿನಲ್ಲಿ ಅಯ್ಯಪ್ಪನ ದರ್ಶನಮಾಡಿ ಸಾಧಿಸಿ ಬಣ್ಣದ ವೇಶತೊಟ್ಟು ಜಾಲತಾಣದಲ್ಲಿ ಹಾಕಿರುವ ಪೋಸ್ಟ್..ಇದು ನಮ್ಮ ಸಂಪ್ರದಾಯಕ್ಕೆ ಕೊಡಲಿಪೆಟ್ಟಲ್ಲವೆ!ವಿನಾಶಕಾಲೆ ವಿಪರೀತ ಬುದ್ಧಿ!ಇಂಥವರ ಸಂತೈಸಿ ವಿಕೃತ ಆನಂದ ಪಡುತ್ತಿರುವ ಕೇರಳ ಸರ್ಕಾರ!ಬ್ರಿಟಿಷರು ಮೊಘಲ್ ಗಳಿಗೆ ಬಗ್ಗದ ಹಿಂದೂ ಧರ್ಮ ಇಂಥವರಿಗಾ? ಜೈಹಿಂದ್ ಎಂದು ಬರೆದಿದ್ದಾರೆ.
ರೆಹಾನಾ ಫಾತಿಮಾ ಅಯ್ಯಪ್ಪ ಮಾಲಾಧಾರಿಯಂತೆ ಕಾಣಿಸಿಕೊಂಡಿದ್ದು, ಈ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.