ಕಾಗವಾಡ 09: ಮಂಗಸೂಳಿಯ ಸುಪುತ್ರರು, ಅಥಣಿ ಎಪಿಎಂಸಿ ಆಧ್ಯಕ್ಷರವೀಂದ್ರ ಪೂಜಾರಿ ಇವರಿಗೆ ಮಂಗಸೂಳಿ, ಲೋಕುರಗ್ರಾಮದ ನೂರಾರುಕಾರ್ಯಕರ್ತರು ಗುಲಾಲ್ ಏರಚಿ, ಪಟಾಕಿ ಸಿಡಿಸಿ, ಶ್ರೀಮಂತ ಪಾಟೀಲ ಅವರಚುನಾವಣೆಯಲ್ಲಿ ವಿಶೇಷವಾಗಿ ಶ್ರಮಿಸಿದ ರವೀಂದ್ರ ಪೂಜಾರಿಇವರಿಗೆ ಸಿಹಿ ಉನ್ನಿಸಿ, ಸಂತಸ ಹಂಚಿಕೊಂಡರು.
ರವೀಂದ್ರ ಪೂಜಾರಿಇವರು, ಇದುಜಯ ಸಾಮಾನ್ಯ ಕಾರ್ಯಕರ್ತರ ಜಯ. ಸರಳ, ಸಜ್ಜನ ಶ್ರೀಮಂತ ಪಾಟೀಲ ಇವರು ಮತದಾರರ ಮನಸ್ಸುಗೆದ್ದು, ಕಳೇದ ಚುನಾವಣೆಯಂತೆ ಈ ಚುನಾವಣೆಯಲ್ಲಿ ಯೂಜಯ ಭೇರಿ ಸಾಧಿಸಿದ್ದಾರೆ.
ಶೀಘ್ರದಲ್ಲಿ ಸಚಿವರಾಗಿ ಕ್ಷೇತ್ರದ ಅಭಿವೃದ್ಧಿ ಪ್ರಾರಂಭಿಸುತ್ತಾರೆ. ಕಳೇದ 20 ವರ್ಷಗಳಿಂದ ಅಭಿವೃದ್ಧಿಕಾಣದೆ, ಕೇವಲ ಕಾಲಹರಣವಾಗಿದೆ ಎಂದು ರಾಜು ಕಾಗೆ ಇವರಿಗೆ ಟಾಂಗ್ ನೀಡಿದರು.
ಈ ವೇಳೆ ಅಥಣಿ ಪಿಎಲ್ಡಿ ಬ್ಯಾಂಕ್ ಸಂಚಾಲಕ ಎಸ್.ಎಂ.ಮಾಳಿ, ಮಾಜಿಆಧ್ಯಕ್ಷ ಬಾಬಾಸಾಹೇಬ ಪಾಟೀಲ, ಗ್ರಾಮ ಪಂಚಾಯತ ಸದಸ್ಯರು, ಬಿಜೆಪಿ ಕಾರ್ಯಕರ್ತರು, ಶ್ರೀಮಂತ ಪಾಟೀಲರ ಅಭಿಮಾನಿಗಳು ಪಾಲ್ಗೊಂಡಿದ್ದರು.