ಪ್ರಯತ್ನದಿಂದ ಕ್ರಿಯಾಶೀಲತೆ ಸಾಧ್ಯ: ಎನ್‌.ಬಿ.ಪಾಟೀಲ

Activism is possible with effort: NB Patil

ದೇವರಹಿಪ್ಪರಗಿ 11: ಜೀವನದಲ್ಲಿ ಯಾರೂ ಪರಿಪೂರ್ಣರಲ್ಲ. ದಿನದಿಂದ ದಿನಕ್ಕೆ ಹೊಸ ವಿಚಾರಗಳನ್ನು ತಿಳಿದುಕೊಳ್ಳುವುದು ಬಹಳಷ್ಟಿದೆ ಎಂದು ದೇವರಹಿಪ್ಪರಗಿ ಪಟ್ಟಣದ ಹೊಸನಗರದ ಪ್ರಿನ್ಸ್‌ ಪಬ್ಲಿಕ್ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲೆ ಅಧ್ಯಕ್ಷರಾದ ಎನ್‌.ಬಿ.ಪಾಟೀಲ ಹೇಳಿದರು. 

ಪಟ್ಟಣದ ಜ್ಞಾನಜ್ಯೋತಿ, ಪ್ರಿನ್ಸ್‌ ಪಬ್ಲಿಕ್ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆ ಮತ್ತು ಕ್ಷೇತ್ರಶಿಕ್ಷಣಾಧಿಕಾರಿಗಳು ಹಾಗೂ ಸಮನ್ವಯಾಧಿಕಾರಿ ಕಾರ್ಯಾಲಯ ಸಿಂದಗಿ ಇವರ ಸಹಯೋಗದಲ್ಲಿ ಶನಿವಾರದಂದು ಸನ್ 2024 -25ನೇ ಸಾಲಿನ ದೈಹಿಕ ಶಿಕ್ಷಣ ಶಿಕ್ಷಕರಿಗೆ ಚೆಸ್ ಕ್ರೀಡೆಯ ಕುರಿತು ಒಂದು ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರ ಅತಿ ಮುಖ್ಯವಾಗಿದ್ದು, ಶಿಕ್ಷಕರಲ್ಲಿ ಕ್ರೀಡಾಸಕ್ತಿ ಜತೆಗೆ ಸದೃಢವಾದ ಮನಸ್ಸೂ ಸಹ ಇರಬೇಕು. ಮಕ್ಕಳಲ್ಲಿ ಅಗಾಧವಾದ ಶಕ್ತಿ ಮತ್ತು ಪ್ರತಿಭೆ ಇದೆ. ಅದನ್ನು ಗುರುತಿಸುವ ಕೆಲಸವನ್ನು ಶಿಕ್ಷಕರು ನಿರ್ವಸಿದರೆ, ನಮ್ಮ ಮಕ್ಕಳು ಸಹಾ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಿವಮೊಗ್ಗ ಅಂತರಾಷ್ಟ್ರೀಯ ಚೆಸ್ ತಿಪುಗಾರರಾದ ಪ್ರಾಣೇಶ ಯಾದವ್ ಅವರು ಮಾತನಾಡಿ,’ಕ್ರೀಡಾ ಶಿಕ್ಷಕರಿಗೆ ಚೆಸ್ ಬಗ್ಗೆ ಪ್ರಾಥಮಿಕ ಜ್ಞಾನ ಇರಬೇಕು. ಅವರಿಗೆ ಕಬಡ್ಡಿ, ಕೊಕ್ಕೊ, ವಾಲಿಬಾಲ್ ಮೊದಲಾದ ಹೊರಾಂಗಣ ಕ್ರೀಡೆಗಳ ಬಗ್ಗೆ ಹೆಚ್ಚು ಆಸಕ್ತಿ. ಶಿಕ್ಷಕರು ಚೆಸ್ ಆಟದ ಬಗ್ಗೆ ಜ್ಞಾನ, ಕೌಶಲ್ಯಗಳನ್ನು ಕಲಿತುಕೊಂಡು ಗ್ರಾಮೀಣ ಭಾಗದ ಮಕ್ಕಳಲ್ಲಿ ಚೆಸ್ ಕ್ರೀಡೆಯ ಬಗ್ಗೆ ಆಸಕ್ತಿ ಮುಡಿಸುವ ಕೆಲಸ ಆಗಬೇಕು ಎಂದು ಹೇಳಿದರು.ಕಾರ್ಯಕ್ರಮದ ಗೌರವಾಧ್ಯಕ್ಷರಾದ ಎನ್‌.ಆರ್‌.ಚವ್ಹಾಣ ಅವರು ಮಾತನಾಡಿ, ದೈಹಿಕ ಶಿಕ್ಷಕರು  ಪ್ರತಿ ದಿನ ಪುನಃಶ್ಚೇತನಗೊಳ್ಳುತ್ತಿರಬೇಕು. ಇಂದಿನ ವಿವಿಧ ಸವಾಲುಗಳಿಗೆ ವಿದ್ಯಾರ್ಥಿಗಳನ್ನು ತಯಾರುಗೊಳಿಸಲು ಜ್ಞಾನ, ಕೌಶಲಗಳನ್ನು ಕಲಿತುಕೊಳ್ಳುವುದುಬಹಳ ಮುಖ್ಯ ಎಂದರು.

ಇದೇ ಸಂದರ್ಭದಲ್ಲಿ ವಿಷಯ ವೇದಿಕೆಯ ಅಧ್ಯಕ್ಷರಾದ ಆರ್‌.ಎಂ.ಬಿರಾದಾರ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಂ.ಎಂ. ಕೊಟ್ಟವಿ, ಶರಣಪ್ಪ ಕೇಸರಿ, ಶಿಕ್ಷಕರುಗಳಾದ ಎಸ್‌. ಸಿ. ಕೊಣ್ಣೂರ, ಪಿ.ಎಸ್‌. ಹದುಗಲ್, ಬಿ.ಎನ್‌.ಯಾತನೂರ, ಎಸ್‌. ಎಸ್‌. ನವಲಿ ಎಂ.ಎನ್‌. ಬಿರಾದಾರ, ಎಸ್‌.ಎಸ್‌. ಹೂಗಾರ, ಸ್ಥಳೀಯ ಶಾಲೆಯ ಮುಖ್ಯ ಶಿಕ್ಷಕಿ ಜ್ಯೋತಿ.ಎಸ್‌. ಬಾಗೇವಾಡಿ, ಜ್ಞಾನಜ್ಯೋತಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಮಹಾಲಕ್ಷ್ಮಿ ಗೂಡ್ಯಾಳ, ಪ್ರಿನ್ಸ್‌ ಪಬ್ಲಿಕ್ ಹೈಯರ್ ಪ್ರೈಮರಿ ಸ್ಕೂಲ್ ಮುಖ್ಯ ಶಿಕ್ಷಕರಾದ ಅಖಿಲ್ ಬಾಗವಾನ, ಶಿಕ್ಷಕರುಗಳಾದ ಸೌಭಾಗ್ಯ ದೇಸಾಯಿ, ಅಶ್ವಿನಿ ಗುಂದಗಿ, ರೇಣುಕಾ ಬದಲಿ, ಸಂಜೀವ್ ಜಾದವ್, ಸದಾಶಿವ ರೊಳ್ಳಿ, ಭುವನೇಶ್ವರಿ ಒಂಟೆತ್ತಿನ, ಶ್ರೀದೇವಿ ಬಾಗೇವಾಡಿ, ಅಶ್ವಿನಿ ಹೆಬ್ಬಾಳ್, ಸರಸ್ವತಿ, ವಿನಯ, ವಿದ್ಯಾ, ಶ್ರುತಿ ಸೇರಿದಂತೆ ಬೋಧಕ ಬೋಧಕೇತರ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆ ಶಿಕ್ಷಕರಾದ ರಮೇಶ್ ಬಿರಾದಾರ, ಎ.ಎಸ್‌.ಪತ್ತಾರ ಸ್ವಾಗತಿಸಿ, ವಂದಿಸಿದರು.