ರೈಲು ಮೇಲ್ಸೇತುವೆ ವೀಕ್ಷಣೆ ಮಾಡಿ, ಅಧಿಕಾರಿಗಳ ಜೊತೆಗೆ ಚರ್ಚಿಸಿ ಕ್ರಮ: ಜಗದೀಶ ಶೆಟ್ಟರ

Action will be taken after view of railway flyover, discuss with officials : Jagdeesh Shettar

ಬೆಳಗಾವಿ 20: ಸೂಳೆಭಾವಿ ಗ್ರಾಮದ ರೈಲು ಮೇಲು ಸೇತುವೆಯ ಅವೈಜ್ಞಾನಿಕ ನಿರ್ಮಾಣ ಅಗಿದ್ದು ಅಲ್ಲಿನ ಸೂಳೆಭಾವಿ, ಖನಗಾಂವ ಬಿ ಕೆ, ಚಂದುರ, ಯದ್ದಲಬಾವಿಹಳ್ಳಿ ಗ್ರಾಮಗಳಿಗೆ ಸಂಚರಿಸಲು ಮತ್ತು ರೈತರ ಹೊಲಗಳಿಗೆ ಸಂಚರಿಸಲು  ತೀವ್ರ ತೊಂದರೆ ಆಗುತಿದ್ದ ಪ್ರಯುಕ್ತ ಕೆಲ ದಿನಗಳ ಹಿಂದೆ ಸೂಳೆಭಾವಿ ಗ್ರಾಮಸ್ಥರು, ಕರ್ನಾಟಕ ಯುವ ರಕ್ಷಣಾ ವೇದಿಕೆ, ರಾಜ್ಯ ರೈತ ಸಂಘ ಪ್ರತಿಭಟನೆ ನಡೆಸಿದರ ಪ್ರಯುಕ್ತ ಗುರುವಾರದಂದು  ಬೆಳಗಾವಿ ಸಂಸದ ಜಗದೀಶ ಶೆಟ್ಟರ ರೈಲು ನಿಲ್ದಾಣಕ್ಕೆ ಭೆಟ್ಟಿ ನೀಡಿ ಪರೀಶೀಲಿಸಿ ಈ ಒಂದು ಸಮಸ್ಯ ಕುರಿತು ಆದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ  ಸೂಕ್ತ ಕ್ರಮ ಕೈಗೊಳ್ಳುವದಾಗಿ ಹೇಳಿದರು.     

ಈ ಸಂದರ್ಭದಲ್ಲಿ ಕರ್ನಾಟಕ ಯುವ ರಕ್ಷಣಾ ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಮಹಾಂತೇಶ ಕೂಲಿನವರ, ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಅಂಕಲಗಿ, ಸೂಳೆಭಾವಿ ಹಿರಿಯರಾದ ಸಿದ್ದ ಬಸವ  ಮನತುರಿಗಿಮಠ, ಜಿಲ್ಲಾ ಉಪಾಧ್ಯಕ್ಷರಾದ ಶ್ರೀಶೈಲ್ ವಂಟಮುರಿ, ಬಿಜೆಪಿ ಮುಖಂಡ  ಮುರುಗೇಂದ್ರ ಗೌಡ ಪಾಟೀಲ, ಮಲ್ಲಿಕಾರ್ಜುನ್ ಮಾದಮ್ಮನವರ,  ನಾಗರಾಜ ಬೆಳಗಾವಿ, ರಾಘವೇಂದ್ರ ದುದಮಿ, ಪ್ರಶಾಂತ ಮಂತುರ್ಗಿ ಮಠ, ಬಸಯ್ಯ ಹಿರೇಮಠ, ಕಾರ್ತಿಕ್ ಅಂಕಲಗಿ ಹಾಗೂ ಸೂಳೆಬಾವಿಯ ಎಲ್ಲ ರೈತರೂ ಗ್ರಾಮಸ್ಥರು ಉಪಸ್ಥಿತರಿದ್ದರು.