ಸೆ.30 ರೊಳಗೆ ಅನರ್ಹರು ಪಡೆದ ಬಿಪಿಎಲ್ ಕಾರ್ಡ ಹಿಂದಿರುಗಿಸದಿದ್ದರೆ ಕ್ರಮ: ಜಿಲ್ಲಾಧಿಕಾರಿ

ಬಾಗಲಕೋಟೆ: ಆಥರ್ಿಕವಾಗಿ ಸದೃಡರು ಪಡೆದಿರುವ ಬಿ.ಪಿ.ಎಲ್ ಕಾರ್ಡನ್ನು ಸರಕಾರ ಕ್ರಮಕೈಗೊಳ್ಳುವ ಮೊದಲೇ ಹಿಂದಿರುಗಿಸುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯ ಮೂಲಕ ಎಚ್ಚರಿಕೆ ಸಂದೇಶ ನೀಡಿದ್ದಾರೆ.

  ಆಥರ್ಿಕವಾಗಿ ದುರ್ಬಲರಿರುವ ಕುಟುಂಬಗಳಿಗೆ ಕೇಂದ್ರ ಮತ್ತು ರಾಜ್ಯ ಸರಕಾರ ನೀಡುತ್ತಿರುವ ಬಿ.ಪಿ.ಎಲ್ ಪಡಿತರವನ್ನು ಕೆಲವು ಸದೃಢ ಕುಟುಂಬಗಳು ಸುಳ್ಳು ಮಾಹಿತಿ ನೀಡಿ ಪಡೆದುಕೊಂಡು ಸಕರ್ಾರಕ್ಕೆ ವಂಚನೆ ಮಾಡಿದ್ದಾರೆ. ಆದಾಯ ತೆರಿಗೆ ಪಾವತಿಸುತ್ತಿರುವ ಮತ್ತು 1000 ಚದುರಡಿಗಿಂತ ದೊಡ್ಡದಾದ ಪಕ್ಕಾ ಮನೆ ಹೊಂದಿರುವ ಕೆಲವು ಕುಟುಂಬಗಳು ಬಿಪಿಎಲ್ ಪಡೆದು ವಂಚಿಸಿದ್ದಾರೆ. 

ಅಲ್ಲದೇ ಶಿಕ್ಷಣ, ಸಾರಿಗೆ, ವಿದ್ಯುತ್, ರೇಲ್ವೆ, ಪೊಲೀಸ್ ಮೊದಲಾದ ಇಲಾಖೆಗಳಲ್ಲಿ ಸಕರ್ಾರಿ ನೌಕರಿ ಮಾಡುತ್ತಿರುವ ಕೆಲವರು ತಮ್ಮ ಹೆಸರನ್ನು ಹೊರತುಪಡಿಸಿ ಕುಟುಂಬದ ಇತರರ ಹೆಸರಿನಲ್ಲಿ ಬಿಪಿಎಲ್ ಪಡೆದುಕೊಂಡಿದ್ದಾರೆ. ಸಹಕಾರ ಸಂಘಗಳ ಖಾಯಂ ನೌಕರರು, ಸ್ವಾಯುತ್ತ ಸಂಸ್ಥೆ, ಮಂಡಳಿಗಳ ನೌಕರರು, ಬ್ಯಾಂಕ್ ನೌಕರರುಗಳು, ಆಸ್ಪತ್ರೆ ನೌಕರರು, ವಕೀಲರು, ಆಡಿಟರ್ಸ್ಗಳು, ದೊಡ್ಡ ಅಂಗಡಿ, ಹೋಟೆಲ್ ವರ್ತಕರು ಬಿಪಿಎಲ್ ಪಡೆದು ವಂಚಿಸಿರುತ್ತಾರೆ.

ಸ್ವಂತ ಕಾರು, ಲಾರಿ, ಜೆಸಿಬಿ ಮೊದಲಾದ ವಾಹನ ಹೊಂದಿರುವವರು, ಅನುದಾನಿತ ಶಾಲಾ ಕಾಲೇಜು ನೌಕರರು, ಗುತ್ತಿಗೆದಾರರು, ಕಮೀಷನ್ ಏಜೆಂಟಗಳು, ಮನೆ, ಮಳಿಗೆ ಕಟ್ಟಡಗಳನ್ನು ಬಾಡಿಗೆಗೆ ನೀಡಿ ವರಮಾನ ಪಡೆಯುತ್ತಿರುವವರು, ಬಹುರಾಷ್ಟ್ರೀಯ ಕಂಪನಿ ಉದ್ದಿಮೆದಾರರು, ನಿವೃತ್ತಿ ವೇತನ ಪಡೆಯುತ್ತಿರುವ ಸಕರ್ಾರಿ ನೌಕರರು ಬಿಪಿಎಲ್ ಪಡೆದಿರುತ್ತಾರೆ. ಸಕರ್ಾರವು ಬಿಪಿಎಲ್ ಪಡಿತರ ಚೀಟಿ ಪಡೆಯಲು ರೂ.1,20,000-00 ರೊಳಗೆ ಕುಟುಂಬದ ಆದಾಯ ನಿಗಧಿಪಡಿಸಲಾಗಿದ್ದು, ಈ ಆದಾಯವನ್ನು ಮೀರಿದ ಕುಟುಂಬಗಳು ಬಿಪಿಎಲ್ ಕಾರ್ಡ ಪಡೆಯಲು ಅರ್ಹರಿರುವದಿಲ್ಲ. 

ಸರಕಾರ 1 ಕೆಜಿ ಅಕ್ಕಿಗೆ ರೂ.35 ರಂತೆ ಪಾವತಿಸಿ ದುರ್ಬಲ ಕುಟುಂಬಗಳಿಗೆ ನೀಡುತ್ತಿರುವ ಈ ಯೋಜನೆಯ ಲಾಭವನ್ನು ಕೆಲವು ಸದೃಡರು ಸುಳ್ಳು ಮಾಹಿತಿ ನೀಡಿ ಕಬಳಿಸಿರುವುದು ವಿಷಾಧನೀಯ ಸಂಗತಿಯಾಗಿದೆ. ಇಂತಹ ವಂಚಕರನ್ನು ಸಕರ್ಾರ ಗಂಭೀರವಾಗಿ ಪರಿಗಣಿಸಿ ಪತ್ತೆ ಮಾಡುತ್ತಿದೆ. ಸಕರ್ಾರಕ್ಕೆ ವಂಚಿಸಿ ಬಿಪಿಎಲ್ ಕಾರ್ಡ ಪಡೆದುಕೊಂಡಿರುವ ಸದೃಡರು ಸಪ್ಟೆಂಬರ 30 ರೊಳಗಾಗಿ ಕೂಡಲೇ ಕಚೇರಿಗೆ ಹಿಂದಿರುಗಿಸಬೇಕು.

ಇಲ್ಲವಾದಲ್ಲಿ ಅಂತಹ ಅನರ್ಹರನ್ನು ಸಕರ್ಾರವೇ ಪತ್ತೆ ಮಾಡಿ ಯಾವಾಗಿನಿಂದ ಎಷ್ಟು ಅಕ್ಕಿ ಪಡೆದಿದ್ದಾರೆ ಎಂಬುದನ್ನು ಲೆಕ್ಕ ಮಾಡಿ ಮಾರುಕಟ್ಟೆ ದರ ಅಂದಾಜು 1 ಕೆಜಿ ಅಕ್ಕಿಗೆ ರೂ.35 ರಂತೆ ದಂಡ ವಸೂಲಿ ಮಾಡುವುದರ ಜೊತೆಗೆ ಕನರ್ಾಟಕ ಪ್ರಿವೇನ್ಶನ್ ಆಪ್ ಅನ್ಅಥರಾಯಜ್ಡ ಪೊಜಿಷನ್ ಆಪ್ ರೇಷನ್ ಕಾರ್ಡ ಆರ್ಡರ್-1977ರ ಅನ್ವಯ ಕ್ರಮ ಜರುಗಿಸಲಾಗುವುದು ಮತ್ತು ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದೆಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.