ಪರಿಶ್ರಮವೇ ಯಶಸ್ಸಿನ ಗುಟ್ಟು -ಡಾ. ಅಜಿತ ಪ್ರಸಾದ
Hard work is the secret to success – Dr. Ajitha Prasad
ಲೋಕದರ್ಶನ ವರದಿ
ಧಾರವಾಡ 29: ಪ್ರತಿಭೆ ಮಾತ್ರ ಯಶಸ್ಸಿಗೆ ಸಾಕಾಗುವುದಿಲ್ಲ. ಪ್ರತಿಭೆಯ ಜೊತೆಗೆ ಕಠಿಣ ಪರಿಶ್ರಮ, ಶಿಸ್ತು ಮತ್ತು ಗುರಿಯ ಕಡೆಗೆ ನಿರಂತರ ಪ್ರಯತ್ನ ಅಗತ್ಯ. ಎಂಬುದನ್ನು ತೋರಿಸಿಕೊಟ್ಟವರು ವಿಶ್ವವಿಖ್ಯಾತ ಹಾಕಿ ಆಟಗಾರ ಹಾಗೂ “ಹಾಕಿಯ ಮಾಂತ್ರಿಕ” ಮೇಜರ್ ಧ್ಯಾನ್ಚಂದ್ರವರು. ಅವರ ಜೀವನವು ಯುವಜನತೆಗೆ ಪರಿಶ್ರಮ, ಶಿಸ್ತು, ದೃಢಸಂಕಲ್ಪ ಮತ್ತು ದೇಶಪ್ರೇಮದ ಮಹತ್ವವನ್ನು ತಿಳಿಸುತ್ತದೆ ಎಂದು ಧಾರವಾಡದ ವಿದ್ಯಾಗಿರಿಯ ಜೆ.ಎಸ್.ಎಸ್ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆಯಲ್ಲಿ ಮೇಜರ್ ಧ್ಯಾನಚಂದ್ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸ ಜೆ.ಎಸ್.ಎಸ್ ನ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದರವರು ಮಾತನಾಡಿದರು.
ಮೇಜರ್ ಧ್ಯಾನ್ ಚಂದ್ ಅವರು 1905ರ ಆಗಸ್ಟ್ 29ರಂದು ಜನಿಸಿದರು. ತಮ್ಮ ಅದ್ಭುತ ಹಾಕಿ ಕೌಶಲ್ಯ, ಚೆಂಡಿನ ಮೇಲಿನ ಅದ್ಭುತ ನಿಯಂತ್ರಣ ಮತ್ತು ನಿರಂತರ ಪರಿಶ್ರಮದಿಂದ ಅವರು ವಿಶ್ವದಾದ್ಯಂತ ಪ್ರಸಿದ್ಧರಾದರು. ಮೇಜರ್ ಧ್ಯಾನ್ ಚಂದ್ ಅವರು ಭಾರತಕ್ಕೆ 1928, 1932 ಮತ್ತು 1936ರ ಒಲಿಂಪಿಕ್ಸ್ನಲ್ಲಿ ಸತತ ಮೂರು ಚಿನ್ನದ ಪದಕಗಳನ್ನು ಗೆಲ್ಲಲು ಮಹತ್ವದ ಕೊಡುಗೆ ನೀಡಿದರು. 1936ರ ಬರ್ಲಿನ್ ಒಲಿಂಪಿಕ್ಸ್ನಲ್ಲಿ ಅವರು ಭಾರತೀಯ ಹಾಕಿ ತಂಡವನ್ನು ನಾಯಕನಾಗಿ ಮುನ್ನಡೆಸಿದರು. ಅವರ ಸಾಧನೆಗಳಿಂದ ಭಾರತೀಯ ಹಾಕಿ ವಿಶ್ವದ ಮಟ್ಟದಲ್ಲಿ ತನ್ನ ಪ್ರಭಾವವನ್ನು ಸ್ಥಾಪಿಸಿತು.
ಅವರ ಅಪಾರ ಸಾಧನೆ ಮತ್ತು ಕ್ರೀಡೆಗೆ ನೀಡಿದ ಕೊಡುಗೆಯನ್ನು ಗೌರವಿಸಿ ಭಾರತದಲ್ಲಿ ಪ್ರತಿವರ್ಷ ಆಗಸ್ಟ್ 29ರಂದು ರಾಷ್ಟ್ರೀಯ ಕ್ರೀಡಾ ದಿನಾಚರಣೆ ಆಚರಿಸಲಾಗುತ್ತದೆ. ಕ್ರೀಡೆಗೆ ಮಹತ್ವ ನೀಡಬೇಕು. ಕ್ರೀಡೆ ನಮ್ಮ ದೈಹಿಕ ಆರೋಗ್ಯವನ್ನು ಮಾತ್ರವಲ್ಲದೆ ಮಾನಸಿಕ ಶಕ್ತಿ, ಆತ್ಮವಿಶ್ವಾಸ, ನಾಯಕತ್ವ ಮತ್ತು ತಂಡದ ಮನೋಭಾವವನ್ನು ಬೆಳೆಸುತ್ತದೆ. ಮೇಜರ್ ಧ್ಯಾನ್ಚಂದ್ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಆರೋಗ್ಯವಂತ ಮತ್ತು ಕ್ರೀಡಾಪ್ರಿಯ ಭಾರತವನ್ನು ನಿರ್ಮಿಸಲು ಶ್ರಮ ವಹಿಸಬೇಕು ಎಂದರು. ಈ ಸಂದರ್ಭ ಡಾ. ಸೂರಜ ಜೈನ್, ಶೃತಿ ಶೆಟ್ಟಿ, ಕ್ರೀಡಾ ನಿರ್ದೇಶಕರುಗಳಾದ ಡಾ. ಜಿನ್ನಪ್ಪ ಕುಂದಗೋಳ, ಶ್ರವಣಕುಮಾರ ಯೋಗಿ, ಮಂಜುನಾಥ ಪೂಜಾರ, ವಿ.ಕೆ ಭರಣಿ, ರೋನಿಲ್ ಮನೋಹರ ಇತರರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 