ಬಸ್ ನಿಲ್ದಾಣದ ಸಮಗ್ರ ಸ್ವಚ್ಛತೆ ಮತ್ತು ನಿಯಮಿತ ನಿರ್ವಹಣೆಗೆ ಕ್ರಮ: ಪ್ರಿಯಾಂಗಾ ಎಂ.

ಬಸ್ ನಿಲ್ದಾಣದ ಸಮಗ್ರ ಸ್ವಚ್ಛತೆ ಮತ್ತು ನಿಯಮಿತ ನಿರ್ವಹಣೆಗೆ ಕ್ರಮ: ಪ್ರಿಯಾಂಗಾ ಎಂ.   Action taken for comprehensive cleanliness and regular maintenance of the bus stand: Priyanga M.

ಯಲ್ಲಾಪುರ 19: ಸಂಸ್ಥೆ  ವ್ಯವಸ್ಥಾಪಕ ನಿರ್ದೇಶಕರಾದ  ಪ್ರಿಯಾಂಗಾ ಎಂ.  ರವರು, ದಿನಾಂಕ: 19-06-2025 ರಂದು ಯಲ್ಲಾಪುರ ಘಟಕ ಹಾಗೂ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ವಾಹನಗಳ ತಾಂತ್ರಿಕ ನಿರ್ವಹಣೆ ಮತ್ತು ಸಾರಿಗೆ ಕಾರ್ಯಾಚರಣೆಯನ್ನು ಪರೀಶೀಲಿಸಿದರು.   

ಪರೀಶೀಲನೆಯ ಸಂದರ್ಭದಲ್ಲಿ ಬಸ್ಸುಗಳ ಸ್ವಚ್ಛತೆ ಹಾಗೂ ನಿರ್ವಹಣೆಯ ಕುರಿತು ಸೂಚನೆ ನೀಡಿದರು. ಬಸ್ ನಿಲ್ದಾಣದ ಸಮಗ್ರ ಸ್ವಚ್ಛತೆ ಮತ್ತು ನಿಯಮಿತ ನಿರ್ವಹಣೆಗೆ ಸಂಬಂಧಿಸಿದಂತೆ ತಕ್ಷಣ ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಹಾಗೂ ಎಲ್ಲಾ ಅಂತರರಾಜ್ಯ ಮಾರ್ಗದ ಬಸ್ಸುಗಳು ನಿರಂತರ  ಸಮಯಪಾಲಿತವಾಗಿ ಚಲಾಯಿಸಬೇಕೆಂದು ಮತ್ತು ಬಸ್ಸುಗಳನ್ನು ನಿರಂತರವಾಗಿ ನಿರ್ವಹಿಸಿ, ಅಗತ್ಯ ಸೇವೆ ಹಾಗೂ ತಾತ್ಕಾಲಿಕ ದುರಸ್ತಿ ಕಾರ್ಯಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕೆಂದು, ಬಸ್ಸುಗಳಲ್ಲಿ ರೂಫ್ ಲೀಕೆಜ್ ಇದ್ದರೆ ಅವುಗಳನ್ನು ಪರೀಶೀಲಿಸಿ ಅಗತ್ಯ ದುರಸ್ತಿಗಳನ್ನು ಶೀಘ್ರವಾಗಿ ಕೈಗೊಳ್ಳುವಂತೆ ನಿರ್ದೇಶನ ನೀಡಿದರು. ಹಾಗೂ ಇತರೆ ಎಲ್ಲಾ ಸಣ್ಣಪುಟ್ಟ ದುರಸ್ತಿ ಹಾಗೂ ನಿರ್ವಹಣಾ ಸಮಸ್ಯೆಗಳನ್ನು ಕೂಡ ತಕ್ಷಣ ಸರಿಪಡಿಸಬೇಕು ಎಂಬ ಸೂಚನೆ ನೀಡಿರುತ್ತಾರೆ. ಈ ಸಂದರ್ಭದಲ್ಲಿ ವಿಭಾಗೀಯ ತಾಂತ್ರಿಕ ಅಭಿಯಂತರರು, ವ್ಯವಸ್ಥಾಪಕರ ನಿರ್ದೇಶಕರವರ ವಿಶೇಷಾಧಿಕಾರಿ ರವಿ ಅಂಚಿಗಾವಿ ಹಾಗೂ ಘಟಕ ವ್ಯವಸ್ಥಾಪಕರು, ಇನ್ನಿತರ ಸಿಬ್ಬಂದ್ದಿಗಳು ಉಪಸ್ಥಿತರಿದ್ದರು