ಮಾಸ್ಕೋ, ಏ 2, ಕೊರೊನಾ ವೈರಾಣು ಸೋಂಕಿನ ಕಾರಣ ಪ್ರಯಾಣ ನಿರ್ಬಂಧಗಳಿಂದಾಗಿ ಕತಾರ್ ನಲ್ಲಿರುವ ರಷ್ಯಾ ಪ್ರಜೆಗಳನ್ನು ಶೀಘ್ರವೇ ತವರಿಗೆ ಮರಳಿ ಕರೆತರಲಾಗುವುದು ಎಂದು ರಷ್ಯಾ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾರಿಯಾ ಝಕ್ರಕೋವಾ ಗುರುವಾರ ಹೇಳಿದ್ದಾರೆ.ರಷ್ಯಾ ಪ್ರಜೆಗಳು ತಮ್ಮ ತವರಿಗೆ ವಾಪಸಾಗಲು ಎಲ್ಲ ಸಾಧ್ಯ ನೆರವನ್ನು ರಷ್ಯಾ ಮತ್ತು ಕತಾರ್ ಪ್ರಾಧಿಕಾರ ನೀಡುತ್ತಿವೆ ಎಂದು ಬುಧವಾರವಷ್ಟೇ ಅವರು ಹೇಳಿದ್ದರು.ದೋಹಾದಲ್ಲಿರುವ ರಷ್ಯಾ ನಾಗರಿಕರು ಶೀಘ್ರವೇ ರಷ್ಯಾಗೆ ಮರಳಲಿದ್ದಾರೆ. ಕತಾರ್ ನೆರವಿಗೆ ಧನ್ಯವಾದ ಎಂದು ಮಾರಿಯಾ ಝಕ್ರಕೋವಾ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.ರಷ್ಯಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಪ್ರಯಾಣ ನಿರ್ಬಂಧ ವಿಧಿಸಿರುವ ಕಾರಣ ಅನೇಕ ಕಡೆ ರಷ್ಯಾ ನಾಗರಿಕರು ಸಿಲುಕಿಕೊಂಡಿದ್ದಾರೆ. ತಮ್ಮ ಪ್ರಜೆಗಳ ಸುರಕ್ಷಿತ ವಾಪಸಾತಿಗೆ ವಿದೇಶಾಂಗ ಸಚಿವಾಲಯ ಇತರ ದೇಶಗಳೊಂದಿಗೆ ಮಾತುಕತೆ ನಡೆಸಿದೆ.