ಕಾರವಾರ 11: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನಕಾಯಿಲೆ ಸಂಬಂಧ ಕಾಡಿನ ನಿವಾಸಿಗಳಲ್ಲಿ ಜಾಗೃತಿ ಮೂಡಿಸುವ ಅಭಿಯಾನ ಜಾರಿಯಲ್ಲಿದ್ದು, ಈ ತನಕ 7536 ಜನರಿಗೆ ಮಂಗನ ಕಾಯಿಲೆ ನಿಯಂತ್ರಣ ಸಂಬಂಧ ಲಸಿಕೆ ನೀಡಲಾಗಿದೆ. ಹಾಗಾಗಿ ಜನರು ಭಯ ಪಡುವ ಅಗತ್ಯ ಇಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶೋಕಕುಮಾರ್ ಹೇಳಿದರು.
ಪತ್ರಿಕಾ ಭವನದಲ್ಲಿ ಮಾಧ್ಯಮಗಳ ಜೊತೆ ಮಾತಾನಾಡಿದ ಅವರು 1956ರಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕ್ಯಾಸನೂರು ಅರಣ್ಯ ಪ್ರದೇಶದಲ್ಲಿ ಪ್ರಥಮ ಬಾರಿಗೆ ಮಂಗನ ಕಾಯಿಲೆ ಕಾಣಿಸಿಕೊಂಡಿತು. ಇದಕ್ಕೆ ಕ್ಯಾಸನೂರು ಕಾಯಿಲೆ ಎಂತಲೂ ಕರೆಯುತ್ತಾರೆ. ಸತ್ತ ಮಂಗಗಳಲ್ಲಿನ ಉಣಗು ಮನುಷ್ಯರನ್ನು ಕಚ್ಚಿದಾಗ ಅದರ ವೈರಸ್ ನಿಂದ ಮಂಗನ ಕಾಯಿಲೆ ಪ್ರಾರಂಭವಾಗುತ್ತದೆ. ಇದು ಸಂಕ್ರಾಮಿಕ ಕಾಯಿಲೆಯಲ್ಲ.ಪ್ಲೇವಿ ವೈರಸ್ ಇರುವ ಉಣಗು ಅಥವಾ ಉಣ್ಣೆಗಳು ಕಚ್ಚಿದಾಗ ಮನುಷ್ಯರಲ್ಲಿ ಮಂಗನಕಾಯಿಲೆ ಹಬ್ಬುತ್ತದೆ. ಮಂಗಗಳು, ದನಗಳು, ನಾಯಿಗಳಲ್ಲಿನ ಉಣ್ಣೆಯಲ್ಲಿ ಪ್ಲೇವಿ ವೈರಸ್ ಇರುತ್ತದೆ ಎಂದರು.
ರೋಗದ ಲಕ್ಷಣಗಳು:
ಜ್ವರ, ತೀವ್ರ ತಲೆನೋವು, ಕಣ್ಣು ಕೆಂಪಾಗುವುದು, ಮೈ ಕೈ ನೋವು, ಹೊಟ್ಟೆನೋವು, ಕೆಮ್ಮು, 3-4 ದಿನಗಳ ನಂತರ ವಾಂತಿ ಬೇಧಿ, ಪ್ಲೇಟ್ಲೇಟ್ ಕೌಂಟ್ ಕಡಿಮೆಯಾಗುವುದು ಮಂಗನ ಕಾಯಿಲೆಯ ಲಕ್ಷಣಗಳು ಎಂದು ಅವರು ವಿವರಿಸಿದರು.
ಉತ್ತರ ಕನ್ನಡದ ಹೊನ್ನಾವರ,ಭಟ್ಕಳ, ಸಿದ್ದಾಪುರ, ಜೊಯಿಡಾ, ದಕ್ಷಿಣ ಕನ್ನಡದ ಪುತ್ತೂರು, ಬೆಳ್ತಂಗಡಿ, ಚಾಮರಾಜ ನಗರದ ಬಂಡೀಪುರ, ಮೈಸೂರಿನ ಕೆಲ ಅರಣ್ಯ ಪ್ರದೇಶದಲ್ಲಿ ಈ ಕಾಯಿಲೆ ಬರುವ ಪ್ರದೇಶಗಳಾಗಿವೆ. ಜೊಯಿಡಾಕ್ಕೆ ಹೊಂದಿಕೊಂಡ ಗೋವಾದ ಅರಣ್ಯವಾಸಿಗಳಲ್ಲಿ ಹಾಗೂ ಚಾಮರಾಜ ನಗರಕ್ಕೆ ಹೊಂದಿಕೊಂಡ ತಮಿಳು ನಾಡಿನ ಅರಣ್ಯ ಪ್ರದೇಶದ ವಾಸಿಗಳಲ್ಲಿ ಮಂಗನ ಕಾಯಿಲೆಯ ಸಾಧ್ಯತೆಗಳಿವೆ.
ತಮಿಳು ನಾಡಿನಿಂದ 10 ಲಕ್ಷ ಲಸಿಕೆಗೆ ಬೇಡಿಕೆ :
ಈ ವರ್ಷದ ಆರಂಭದಲ್ಲೇ ತಮಿಳುನಾಡು ಆರೋಗ್ಯ ಇಲಾಖೆ ಮಂಗನಕಾಯಿಲೆ ನಿಯಂತ್ರಣದ ಲಸಿಕೆಯನ್ನು ಕೇಳಿದೆ. ತಮಿಳುನಾಡು ಒಂದರಿಂದಲೇ 10 ಲಕ್ಷ ಲಸಿಕೆಗೆ ಬೇಡಿಕೆ ಬಂದಿದೆ.
ಉತ್ತರ ಕನ್ನಡದಲ್ಲಿ ಲಸಿಕೆ ನೀಡಿಕೆ :
ಹೊನ್ನಾವರ ತಾಲ್ಲೂಕಿನ ಸಾಲ್ಕೋಡು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಸತ್ತ ಮಂಗನಲ್ಲಿ ಮಂಗನಕಾಯಿಲೆಯ (ಕೆಎಫ್ಡಿ) ವೈರಸ್ ಪತ್ತೆಯಾಗಿದೆ. ಸುತ್ತಮುತ್ತಲಿನ ಹಳ್ಳಿಗಳಲ್ಲಿ ವ್ಯಾಪಕ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಅಶೋಕಕುಮಾರ್ ಹೇಳಿದರು. ಜಿಲ್ಲೆಯಲ್ಲಿ 2018 ಜನವರಿಯಿಂದ ಡಿಸೆಂಬರ್ವರೆಗೆ ನಾನಾ ಕಾರಣಗಳಿಂದ 23 ಮಂಗಗಳು ಮೃತಪಟ್ಟಿರುವುದು ಗಮನಕ್ಕೆ ಬಂದಿದೆ. ಅವುಗಳಲ್ಲಿ ಎರಡನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿತ್ತು. 13 ಉಣ್ಣಿಗಳ (ಉಣುಗು) ಮಾದರಿಗಳನ್ನೂ ಸಂಗ್ರಹಿಸಲಾಗಿದ್ದು, ಒಂದರಲ್ಲೂ ಮಂಗನಕಾಯಿಲೆಯ ವೈರಸ್ ಕಂಡುಬಂದಿಲ್ಲ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಕಳೆದ ವರ್ಷ 19 ರೋಗಿಗಳ ರಕ್ತದ ಮಾದರಿಗಳನ್ನು ಪರೀಕ್ಷಿಸಲಾಗಿತ್ತು. ಅವರ ಪೈಕಿ ಹೊನ್ನಾವರ ತಾಲ್ಲೂಕಿನ ಸಂಶಿಯ ನಾಲ್ವರಲ್ಲಿ ದೃಢಪಟ್ಟಿತ್ತು. ಕಳೆದ ಎರಡು ತಿಂಗಳ ಅವಧಿಯಲ್ಲಿ ಯಾರಲ್ಲೂ ಪತ್ತೆಯಾಗಿಲ್ಲ ಎಂದು ದೃಢಪಡಿಸಿದರು.
ಹೊನ್ನಾವರ, ಸಿದ್ದಾಪುರ ಮತ್ತು ಭಟ್ಕಳ ತಾಲ್ಲೂಕಿನ ಹಳ್ಳಿಗಳಲ್ಲಿ ಕರಪತ್ರಗಳ ಹಂಚಿಕೆ, ಧ್ವನಿವರ್ಧಕಗಳಲ್ಲಿ ಮಾಹಿತಿ ಪ್ರಕಟಣೆ, ಉಣ್ಣೆ ಕಚ್ಚದಂತೆ ತಡೆಯುವ ಡಿಎನ್ಸಿ ತೈಲ ವಿತರಣೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮಾಹಿತಿ, ಮನೆಮನೆ ಭೇಟಿ, ಲಸಿಕಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.
ಜಿಲ್ಲೆಯ 11 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಂಗನಕಾಯಿಲೆಯ ಲಸಿಕೆ ನೀಡಲಾಗುತ್ತಿದೆ. ಹೊನ್ನಾವರ ತಾಲ್ಲೂಕಿನಲ್ಲಿ ಎಂಟು, ಭಟ್ಕಳ ತಾಲ್ಲೂಕಿನ ಮುಡರ್ೇಶ್ವರ, ಸಿದ್ದಾಪುರ ತಾಲ್ಲೂಕಿನ ಕಾನಸೂರು ಹಾಗೂ ಕೊರ್ಲಕೈ, ಜೊಯಿಡಾ ತಾಲ್ಲೂಕಿನ ಕ್ಯಾಸಲ್ರಾಕ್ ಗ್ರಾಮಗಳಲ್ಲಿ ಈ ವ್ಯವಸ್ಥೆಯಿದೆ. ಹೊನ್ನಾವರ ತಾಲ್ಲೂಕಿನ ಗೇರುಸೊಪ್ಪ ಗ್ರಾಮದ ಸುತ್ತಮುತ್ತ ಜ.9ರಂದು ಲಸಿಕೆ ನೀಡುವ ಕಾರ್ಯ ಪ್ರಾರಂಭವಾಗಿದೆ. ಭಟ್ಕಳದ ಕೊಣಾರ ಗ್ರಾಮದಲ್ಲಿ ಕೂಡ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ವಿವರಿಸಿದರು.
ಎಲ್ಲೆಲ್ಲಿ ಎಷ್ಟು ಲಸಿಕೆ :
ಹೊನ್ನಾವರ, ಸಿದ್ದಾಪುರ , ಭಟ್ಕಳದ ಮುರುಡೇಶ್ವರ ಹಾಗೂ ಜೊಯಿಡಾದಲ್ಲಿ ಮಂಗನ ಕಾಯಿಲೆ ನಿರೋಧಕ ಲಸಿಕೆಯನ್ನು 7536 ಜನರಿಗೆ ನೀಡಲಾಗಿದೆ. ಇದರಲ್ಲಿ 6 ವರ್ಷಕ್ಕಿಂತ ಮೇಲ್ಪಟ್ಟ 1375 ಮಕ್ಕಳು ಹಾಗೂ 6161 ವಯಸ್ಕರಿಗೆ ಲಸಿಕೆ ನೀಡಲಾಗಿದೆ. ಲಸಿಕೆ ನೀಡುವ ಕಾರ್ಯ ಮುಂದುವರಿದಿದೆ. ಹೊನ್ನಾವರ ತಾಲೂಕಿನ ಗೇರುಸೊಪ್ಪ ,ಖವರ್ಾ, ಕಡತೋಕಾ, ಸಾಲ್ಕೋಡು,ಸಂಶಿ, ಹೊಸಾಡ ಸೇರಿದಂತೆ 8 ಗ್ರಾಮಗಳಲ್ಲಿ ವಯಸ್ಕರಿಗೆ 3575 ಜನರಿಗೆ ಲಸಿಕೆ ನೀಡಲಾಗಿದೆ. ಇಲ್ಲಿ ಇನ್ನು 3 ಸಾವಿರ ಜನರಿಗೆ ಲಸಿಕೆ ನೀಡುವ ಕಾರ್ಯ ಮುಂದುವರಿದಿದೆ.
ಮುರುಡೇಶ್ವರದಲ್ಲಿ 870 ಜನರಿಗೆ, ಸಿದ್ದಾಪುರದ ಕಾನಸೂರು,ದೊಡ್ಮನೆ, ಕೋರ್ಲಕೈನ ಒಟ್ಟು 1476 ಜನರಿಗೆ, ಜೊಯಿಡಾದಲ್ಲಿ 240 ಜನರಿಗೆ ಲಸಿಕೆ ನೀಡಲಾಗಿದೆ. ಲಸಿಕೆ ನೀಡುತ್ತಾ ಜಾಗೃತಿ ಮೂಡಿಸುವ ಕಾರ್ಯ ಜಾರಿಯಲ್ಲಿದೆ.
ಮೂರು ಇಲಾಖೆಗಳಿಗೆ ಜಂಟಿ ಹೊಣೆಗಾರಿಕೆ:
ಮಂಗನಕಾಯಿಕೆ ಕುರಿತು ಜಾಗೃತಿ ಮೂಡಿಸುವಲ್ಲಿ ಅರಣ್ಯ ಇಲಾಖೆ, ಪಶುಸಂಗೋಪನಾ ಇಲಾಖೆ ಹಾಗೂ ಆರೋಗ್ಯ ಇಲಾಖೆಗಳು ಕೆಲಸ ಮಾಡುತ್ತಿವೆ. ಹೀಗೆ ಮೂರು ಇಲಾಖೆಗಳು ಸಾಮೂಹಿಕ ಜವಾಬ್ದಾರಿಯನ್ನು ಸಕರ್ಾರ ನೀಡಿದೆ. ಈ ಕಾಯಿಲೆ ಸೀಮಿತ ಪ್ರದೇಶದಲ್ಲಿ ಇರುವ ಕಾರಣ ನಿದರ್ಿಷ್ಟ ಲಸಿಕೆ ಕಂಡು ಹಿಡಿಯುವಲ್ಲಿ ಸಂಶೋಧನೆಗಳು ನಡೆದಿಲ್ಲ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಅಭಿಪ್ರಾಯಪಟ್ಟರು. ಮಂಗನಕಾಯಿಲೆಗೆ ನಿಧರ್ಿಷ್ಟ ಲಸಿಕೆ ಕಂಡು ಹಿಡಿಯುವ ಸಂಶೋಧನೆಗಳು ಇನ್ನಷ್ಟೆ ನಡೆಯಬೇಕಿದೆ.