ಆ್ಯಸಿಡ್ ದಾಳಿಗೊಳಗಾದ ಮಹಿಳೆಯರಿಗೆ ಬದುಕಲು ಮನೋಸ್ಥೈರ್ಯ ತುಂಬಿ

ಹಾವೇರಿ: ಆ್ಯಸಿಡ್ ದಾಳಿಗೊಳಗಾದ ಮಹಿಳೆ ಆತ್ಮಹತ್ಯೆಗೆ ಶರಣಾಗದಂತೆ ಹಾಗೂ ಮಾನಸಿಕ ಖಿನ್ನತೆಗೊಳಗಾಗದಂತೆ ಅವಳಿಗೆ ಮನೋಸ್ಥೈರ್ಯದ ಮೂಲಕ ಬದುಕಲು ಧೈರ್ಯ ತುಂಬಬೇಕು ಎಂದು ಪ್ರಧಾನ ಸಿವ್ಹಿಲ್ ನ್ಯಾಯಾಧೀಶರಾದ ಲಕ್ಷ್ಮೀ ಎನ್.ಗರಗ ಹೇಳಿದರು. 

ಜಿಲ್ಲಾ ಕಾನೂನು ಸೇವಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿ ಸಂಘ, ಜಿಲ್ಲಾ ಅಭಿಯೋಜನಾ ಇಲಾಖೆ, ಜಿಲ್ಲಾ ಆಡಳಿತ, ಪೊಲೀಸ್ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯéಾಣ ಇಲಾಖೆ, ಜಿಲ್ಲಾ ಆಸ್ಪತ್ರೆ ಹಾಗೂ ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯ ಇವರ ಸಹಯೋಗದಲ್ಲಿ ಮಂಗಳವಾರ ನಗರದ ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯದ ಸಭಾಭವನದಲ್ಲಿ ಜರುಗಿದ "ಆ್ಯಸಿಡ್ ದಾಳಿಗೊಳಗಾದ ಸಂತ್ರಸ್ಥರಿಗೆ ಪರಿಹಾರ ಯೋಜನೆ-2016" ವಿಷಯದ ಕುರಿತು ಕಾನೂನು ಅರಿವು ಮತ್ತು ನೆರವು  ಕಾರ್ಯಕ್ರಮ ಉದ್ಘಾಟಿಸಿದರು.

   ಆ್ಯಸಿಡ್ ದಾಳಿಯು ದೇಶಕ್ಕೆ ಅಂಟಿದ ಕಳಂಕವಾಗಿದ್ದು ದಾಳಿಮಾಡಿದವರು ಸಮಾಜದಲ್ಲಿ ಜೀವಿಸಲು ಅನರ್ಹರರು. ಪ್ರೀತಿ ನಿರಾಕರಣೆ, ವರದಕ್ಷಿಣೆ, ವೈರತ್ವ, ಮದುವೆಗೆ ಒಪ್ಪದ ಕಾರಣ, ಮಕ್ಕಳಾಗಿಲ್ಲ ಇಂತಹ  ಕಾರಣಗಳಿಗಾಗಿ ಮಹಿಳೆಯ ಮೇಲೆ ಹೆಚ್ಚಾಗಿ ಆ್ಯಸಿಡ್ ದಾಳಿ ನಡೆಸಲಾಗುತ್ತಿದೆ.  ದ್ವೇಷ ಸಾಧಿಸಲು ಸಾಕ್ಷಿ ನಾಶ ಮಾಡಲು ಜೀವನ ಪರ್ಯಂತ ಕೊರಗುವಂತೆ ಮಾಡಲು ಕೆಲವು ದುಷ್ಕಮರ್ಿಗಳು ಇಂತಹ ಹೀನ ಕೃತ್ಯಗಳನ್ನು ಎಸಗುತ್ತಾರೆ. ಈ ಬಗ್ಗೆ ಮಹಿಳೆಯರು ಎಚ್ಚರವಹಿಸಬೇಕು. ದಾಳಿಗೊಳಗಾದ ಮಹಿಳೆಯರು ಧೈರ್ಯದಿಂದ ಕಾನೂನಿನ ಮೂಲಕ ಹೋರಾಡಬೇಕು ಎಂದು ಅವರು ಕರೆ ನೀಡಿದರು. 

ವ್ಯಕ್ತಿಯ ಮುಖ ಅಥವಾ ದೇಹದ ಯಾವುದೇ ಭಾಗಗಳ ಮೇಲೆ ಆ್ಯಸಿಡ್ ಎರಚಿದರೆ ಅಥವಾ ಎರಚಲು ಪ್ರಯತ್ನ ಮಾಡಿದರೂ ಸಹ ಪ್ರಕರಣ ದಾಖಲಾಗುತ್ತದೆ. ದಾಳಿ ನಡೆಸಿದ ವ್ಯಕ್ತಿಗೆ 10 ವರ್ಷ ಕಠಿಣ ಶಿಕ್ಷೆ ಹಾಗೂ ದಂಡದ ಜೊತೆಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಬಹುದು.  ದಾಳಿ ನಡೆಸಲೂ ಪ್ರಯತ್ನ ಮಾಡಿದ ಆರೋಪಿಗೂ 5 ರಿಂದ 7 ವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ ದಂಡವನ್ನು ವಿಧಿಸಲಾಗುವುದು.

     ಆ್ಯಸಿಡ್ ದಾಳಿಗೊಳಗಾದ ಮಹಿಳೆಯರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಥವಾ ತಾಲ್ಲೂಕಾ ಸೇವೆಗಳ ಪ್ರಾಧಿಕಾರದಲ್ಲಿ ಅರ್ಜಿ  ಸಲ್ಲಿಸಬಹುದು. ಇವರಿಗೆ ಅಜರ್ಿ ಸಲ್ಲಿಸಿದ ತತಕ್ಷಣ ಸಕರ್ಾರದಿಂದ ಒಂದು ಲಕ್ಷ ರೂ ವೈದ್ಯಕೀಯ ಖರ್ಚಿಗಾಗಿ ನೀಡಲಾಗುತ್ತದೆ. ಶೇ. 50 ರಷ್ಟು ದಾಳಿಗೆ ಒಳಗಾದರೆ 5 ರಿಂದ 8 ಲಕ್ಷ ರೂ ಹಾಗೂ ಪೂರ್ಣ ಪ್ರಮಾಣದಲ್ಲಿದ್ದರೆ 7ರಿಂದ8 ಲಕ್ಷ ರೂ ವನ್ನು ಪ್ರಾಧಿಕಾರದಿಂದ ಪರಿಹಾರವಾಗಿ ನೀಡಲಾಗುತ್ತದೆ ಎಂದು ಅವರು ಹೇಳಿದರು. 

ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಅವರು ಜಿಲ್ಲೆಯಲ್ಲಿ ಆ್ಯಸಿಡ್ ದಾಳಿಯ ಪ್ರಕರಣಗಳು ಹೆಚ್ಚು ಕಂಡುಬರುತ್ತವೆ. ವಿಕೃತ ಮನಸ್ಸುಳ್ಳವರು ಇಂತಹ ಕೃತ್ಯ ಎಸಗುತ್ತಾರೆ. ಅಮಾಯಕ ಹೆಣ್ಣು ಮಕ್ಕಳು ಇದಕ್ಕೆ ಬಲಿಯಾಗುತ್ತಾರೆ ಎಂದು ಹೇಳಿದರು. 

     ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ. ದೇವರಾಜ್ ಮಾತನಾಡಿ, ಆ್ಯಸಿಡ್ ದಾಳಿಗೊಳಗಾದ ವ್ಯಕ್ತಿಗೆ ದೈಹಿಕ ನೋವು, ಮಾನಸಿಕ ನೋವಿನ ಜೊತೆ ಸಾಮಾಜಿಕ ನೋವು ಸಹ ಅವರನ್ನು ಭಾಧಿಸುತ್ತದೆ. ಇವರಿಗೆ ತುರ್ತರಾಗಿ  ಚಿಕಿತ್ಸೆ ಅವಶ್ಯಕವಿರುತ್ತದೆ ಎಂದು ಹೇಳಿದರು. 

ನಂತರ ಆ್ಯಸಿಡ್ ದಾಳಿಗೊಳಗಾದ ಸಂತ್ರಸ್ಥರಿಗೆ ಪರಿಹಾರ ಯೋಜನೆ 2016 ಹಾಗೂ ಸಂತ್ರಸ್ಥ ಪರಿಹಾರ ಯೋಜನೆ 2011 ವಿಷಯ ಕುರಿತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪೆನೆಲ್ ವಕೀಲರು ಎಂ.ಎಚ್. ವಾಲೀಕಾರ, ಆ್ಯಸಿಡ್ ದಾಳಿಗೊಳಗಾದ ಸಂತ್ರಸ್ಥರಿಗೆ ಕಾನೂನು ಸಲಹೆಗಳ ಕುರಿತು ಗ್ರಾಮೀಣ ಪೋಲೀಸ್ ಠಾಣೆಯ ಸಿ.ಪಿ.ಐ. ಎಸ್.ಎ. ಪವಾರ ವಿದ್ಯಾಥರ್ಿಗಳಿಗೆ ಉಪನ್ಯಾಸ ನೀಡಿದರು. 

ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದಶರ್ಿ ಕೆ. ಶ್ರೀವಿದ್ಯಾ, ಹಿರಿಯ ಸಕರ್ಾರಿ ಅಭಿಯೋಜಕರು ಸರೋಜ ಕೂಡಲಮಠ, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕೆ.ಸಿ.ಪಾವಲಿ,  ಜಿಲ್ಲಾ ನ್ಯಾಯವಾದಿಗಳ ಸಂಘದ ಕಾರ್ಯದಶರ್ಿ ಪಿ.ಎಂ. ಬೆನ್ನೂರು, ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ನಾಗರಾಜ ನಾಯಕ,  ಹುಕ್ಕೇರಿಮಠದ ಶ್ರೀ ಶಿವಲಿಂಗೇಶ್ವರ ವಿದ್ಯಾಪೀಠದ ಅಧ್ಯಕ್ಷ ಎಸ್.ಎಸ್. ಮುಷ್ಠಿ, ಹುಕ್ಕೇರಿಮಠದ ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯದ ಪ್ರಾಂಶುಪಾಲರು ಡಾ. ಸವಿತಾ ಹಿರೇಮಠ ಮತ್ತಿತರರು ಉಪಸ್ಥಿತರಿದ್ದರು.