ಆರ್.ಡಿ.ಪಾಟೀಲ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ
Achievements of students of R.D. Patil College
ಲೋಕದರ್ಶನ ವರದಿ
ಸಿಂದಗಿ 13: 2025-26 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಪಟ್ಟಣದ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಆರ್.ಡಿ.ಪಾಟೀಲ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುನ್ನತಶ್ರೇಣಿಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
ಕಾಲೇಜಿಗೆ ಪ್ರಥಮ ಸ್ಥಾನ ಪಡೆದ ಕಲಾವಿಭಾಗದಲ್ಲಿ ಕುಮಾರ ಗಣೇಶ ಬಿರಾದಾರ 588 (98ಅ) ಪ್ರಥಮಸ್ಥಾನ ಮತ್ತು ವಿಷಯಗಳಾದ ಅಲ್ಲದೇ ಇತಿಹಾಸ, ರಾಜ್ಯಶಾಸ್ತ್ರ, ಶಿಕ್ಷಣಶಾಸ್ತ್ರದಲ್ಲಿ 100ಕ್ಕೆ 100 ಅಂಕಗಳನ್ನು ಪಡೆದುಕೊಂಡಿದ್ದಾನೆ. ಕುಮಾರ ನಾಗರಾಜ 579 (96.5ಅ), ದ್ವಿತೀಯಸ್ಥಾನ, ಕುಮಾರ ಶಿವಾನಂದ ಬ. ಬಜಂತ್ರಿ 574 (95.66ಅ) ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಅತ್ಯುನ್ನತ ಶ್ರೇಣಿಯಲ್ಲಿ ಪಾಸಾದ ಒಟ್ಟು ಕಲಾ ವಿಭಾಗದಲ್ಲಿ 73 ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾದ ಕುಮಾರಿ ಸುಪ್ರೀತಾ ಎ. ಮಾವೂರ 576 (96ಅ), ಕುಮಾರ ಸಮರ್ಥ ಬ. ಜಂಬಗಿ 575 (95.83ಅ), ಕುಮಾರ ಭೀಮಾಶಂಕರ ಬೋವರ್ 573 (95.5ಅ) ಲೆಕ್ಕಶಾಸ್ತ್ರ ವಿಷಯದಲ್ಲಿ 100ಕ್ಕೆ 100 ಪಡೆದುಕೊಂಡಿದ್ದಾನೆ. ಸೇರಿದಂತೆ ವಾಣಿಜ್ಯ ವಿಭಾಗದಲ್ಲಿ 37 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾದ ಕುಮಾರಿ ಲಕ್ಷ್ಮೀ ಉಮದಿ 564 94 ಅ, ಕುಮಾರಿ ಸವಿತಾ ಹಿರೇಮಠ 545 (90.83ಅ), ಕುಮಾರಿ ಸಂಜನಾ ಹೊಸಮನಿ 542 (90.33ಅ) ಒಟ್ಟು ವಿಜ್ಞಾನ ವಿಭಾಗದಲ್ಲಿ 27 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ.
ಕಲಾ, ವಾಣಿಜ್ಯ, ವಿಜ್ಞಾನ ಸೇರಿದಂತೆ ಒಟ್ಟು 137 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿ ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ.
ಕಲಾ ವಿಭಾಗದಲ್ಲಿ 390 ವಿದ್ಯಾರ್ಥಿಗಳು ಹಾಜರಾಗಿದ್ದು ಅದರಲ್ಲಿ 363 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ ಪ್ರತಿಶತ 93.08ಅ, ವಾಣಿಜ್ಯ ವಿಭಾಗದಲ್ಲಿ 125 ವಿದ್ಯಾರ್ಥಿಗಳು ಹಾಜರಾಗಿದ್ದು ಅದರಲ್ಲಿ 121 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ ಪ್ರತಿಶತ 96.08ಅ, ವಿಜ್ಞಾನ ವಿಭಾಗದಲ್ಲಿ 283 ವಿದ್ಯಾರ್ಥಿಗಳು ಹಾಜರಾಗಿದ್ದು ಅದರಲ್ಲಿ 268 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ ಪ್ರತಿಶತ 94.7 ಅ ರಷ್ಟಾಗಿದೆ.
ಒಟ್ಟಾರೆ ಮಹಾವಿದ್ಯಾಲಯದಲ್ಲಿ 809 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಇದರಲ್ಲಿ 752 ವಿದ್ಯಾರ್ಥಿಗಳು ಪಾಸಾಗಿದ್ದು ಮಹಾವಿದ್ಯಾಲಯದ ಪರೀಕ್ಷೆ ಪರಿಣಾಮ ಶೇಕಡಾ 92.95 ಅ ರಷ್ಟಾಗಿದೆ. ಇದರಲ್ಲಿ 137 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಮತ್ತು 493 ಪ್ರಥಮ, 108 ದ್ವಿತೀಯ, 14 ತೃತೀಯ ಶ್ರೇಣೆಯಲ್ಲಿ ಪಾಸಾಗಿದ್ದಾರೆ.
ಇವರ ಸಾಧನೆಗೆ ಸಂಸ್ಥೆಯ ಚೇರಮನ್ನರಾದ ಪೂಜ್ಯಶ್ರೀ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು, ಉತ್ತರಾಧಿಕಾರಿಗಳಾದ ಪೂಜ್ಯಶ್ರೀ ಡಾ. ವಿಶ್ವಪ್ರಭುದೇವ ಶಿವಾಚಾರ್ಯರು, ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ಹಾಗೂ ಪ್ರಾಚಾರ್ಯ ಭೀಮನಗೌಡ ಸಿಂಗನಳ್ಳಿ, ಉಪಪ್ರಾಚಾರ್ಯ ಪಿ.ಎಂ.ಮಹಲಿನಮಠ, ಎಸ್.ಎಚ್.ಜಾಧವ, ಅಧೀಕ್ಷಕ ಡಾ. ವಿಶ್ವನಾಥ ನಂದಿಕೋಲ, ವಿಜಯಲಕ್ಷ್ಮೀ ಹಿರೇಮಠ, ಎಂ.ಐ.ಮುಜಾವರ್, ಎಸ್.ಆರ್.ಬೂದಿಹಾಳ, ಡಾ. ಶರಣಬಸವ ಜೋಗೂರ, ಶಿವಯೋಗಿ ತಾಳಿಕೋಟಿ, ಎನ್.ಬಿ.ಪೂಜಾರಿ, ಬಿ.ಬಿ.ಜಮಾದಾರ, ಜಂಟಿಗರಾಯ ಗಾಣಗೇರ್, ರಾಹುಲ ನಾರಾಯಣಕರ್, ರೋಹಿತ್ ಸುಲ್ಪಿ, ಉದಯ ಸಿಂಪಗೇರ್, ಎನ್.ಎಂ.ಶೆಳ್ಳಗಿ, ಭಾಗ್ಯಾ ಕೋರಿ, ಸುಮಿತ್ರಾ ಕರನಾಳ, ಎ.ಬಿ.ಬಮ್ಮಣ್ಣಿ, ಚಂದು ಬಬಲೇಶ್ವರ, ನೀಲಕಂಠ ಮೇತ್ರಿ ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿವರ್ಗ ಅಭಿನಂದಿಸಿದ್ದಾರೆ.
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ 