ಕಠಿಣ ಪರಿಶ್ರಮ ಹಾಕಿದರೆ ಮಾತ್ರ ಸಾಧನೆ ಮಾಡಲು ಸಾಧ್ಯ: ಶಾಸಕ ನ್ಯಾಮಗೌಡ
Achievements can only be achieved through hard work: MLA Nyamagowda
ಜಮಖಂಡಿ 29: ಸರಳವಾಗಿ ಸಾಧನೆ ಮಾಡಲು ಸಾಧ್ಯವಿಲ್ಲ, ಕಠಿಣ ಪರಿಶ್ರಮ ಹಾಕಿದರೆ ಮಾತ್ರ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಸಾಧನೆ ಮಾಡುವ ಛಲ ವಿದ್ಯಾರ್ಥಿಗಳಲ್ಲಿ ಹುಟ್ಟಬೇಕು ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು.
ನಗರದ ರಾಯಲ್ ಪ್ಯಾಲೇಸ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಪ್ರತಿಯೊಬ್ಬರು ಶಿಸ್ತು ಅಳವಡಿಸಿಕೊಳ್ಳಬೇಕು. ಸಾಧನೆ ಮಾಡುವ ಛಲ ವಿದ್ಯಾರ್ಥಿಗಳಲ್ಲಿ ಹುಟ್ಟಬೇಕು ಸಾಧನೆಗೆ ಬಡತನದ ಯಾವ ಕಷ್ಟಗಳು ಅಡ್ಡಿಯಾಗುವದಿಲ್ಲ, ಸಾಧನೆ ಮಾಡಿರುತ್ತಾರೆ ಅವರ ಪ್ರೇರಣೆ ಪಡೆದುಕೊಳ್ಳಬೇಕು, ಸಾಧನೆ ಮಾಡಲು ನಮ್ಮ ಸುತ್ತಮುತ್ತಲಿನ ವಾತಾವರಣ ಒಳ್ಳೆಯದಾಗಿರಬೇಕು ಎಂದರು.
ಡಾ,ಸಿದ್ದು ಸೊನ್ನದ ಮಾತನಾಡಿ, ವಿದ್ಯಾರ್ಥಿಗಳು ಅಂಕ ಗಳಿಸುವದು ಮುಖ್ಯವಲ್ಲ, ವಿಷಯವನ್ನು ಗ್ರಹಿಸಿಕೊಳ್ಳಬೇಕು, ವಿದ್ಯಾರ್ಥಿ ಜೀವನ ಮರಳಿ ಸಿಗುವದಿಲ್ಲ, ಹಲವಾರು ಜನರು ಸಾಧನೆ ಮಾಡಲು ಪ್ರಯತ್ನಿಸುತ್ತಿರುತ್ತಾರೆ ಆದರೆ ಅವರಿಗೆ ಅವಕಾಶ ಸಿಗುವದಿಲ್ಲ, ನಿಮ್ಮಗೆ ಸಿಕ್ಕಿರುವ ಅವಕಾಶವನ್ನು ಸದುಪಯೋಗ ಪಡೆಸಿಕೊಳ್ಳಬೇಕು ಎಂದರು.
ನೀಟ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ನೀಖೀಲ ಸೊನ್ನದ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಧನಾತ್ಮಕವಾಗಿ ಓದಬೇಕು, ಋಣಾತ್ಮಕ ಭಾವಣೆಗಳು ನಮ್ಮಲ್ಲಿ ಬರಬಾರದು, ತಮಗೆ ಅನೂಕೂಲವಾಗುವಂತೆ ಓದುವದನ್ನು ರೂಡಿಸಿಕೊಳ್ಳಬೇಕು, ಇನ್ನೊಬ್ಬರನ್ನು ನೋಡಿ ಓದಲು ಸಾಧ್ಯವಾಗುವದಿಲ್ಲ ಎಂದರು.
ಡಾ,ಸಂಗಮೇಶ ನ್ಯಾಮಗೌಡ, ಡಾ,ಬಸವರಾಜ ಸೊನ್ನದ, ಸುಮಿತ್ರಾ ನ್ಯಾಮಗೌಡ, ಬಸವರಾಜ ನ್ಯಾಮಗೌಡ, ಪ್ರಾಚಾರ್ಯೆ ರೀತಾ ಜೈನರ, ಪ್ರಾಚಾರ್ಯ ಎನ್,ಎಮ್, ರೊಳ್ಳಿ ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 