ರಾಯಬಾಗ 07: ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಇತ್ತೀಚೆಗೆ ನಡೆದ 2 ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಸ್ಥಳೀಯ ಸನ್ ಶೈನ್ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳು ಬೆಳ್ಳಿ ಪದಕ ಪಡೆದು ತಾಲೂಕಿಗೆ ಕೀರ್ತಿ ತಂದಿದ್ದಾರೆ.
ಪ್ರಿಯಾ ಭಿರಡಿ (30 -33 ಕೆಜಿ ಫ್ರೀ ಜೂನಿಯರ್ ಫೈಟಿಂಗ್ ವಿಭಾಗದಲ್ಲಿ) ಬೆಳ್ಳಿ ಪದಕ, ವೈಷ್ಣವಿ ಕಾಗಲಿ (36-39 ಕೆಜಿ ಫ್ರೀ ಜೂನಿಯರ್ ಫೈಟಿಂಗ್ ವಿಭಾಗದಲ್ಲಿ) ಬೆಳ್ಳಿ ಪದಕ, ಅಭಿಮಾನ ಮಾನೆ (36-39 ಕೆಜಿ ಫ್ರೀ ಜೂನಿಯರ್ ಫೈಟಿಂಗ್ ವಿಭಾಗದಲ್ಲಿ) ಕಂಚಿನ ಪದಕ, ಮನಸ್ವಿ ಮೇತ್ರಿ ( 42-45 ಕೆಜಿ ಫ್ರೀ ಜೂನಿಯರ್ ಫೈಟಿಂಗ್ ವಿಭಾಗದಲ್ಲಿ ಕಂಚಿನ ಪದಕ ಪಡೆದಿದ್ದಾರೆ, ಇವರಿಗೆ ದೈಹಿಕ ಶಿಕ್ಷಕ ಅಮೂಲ ಬಾಬಣ್ಣವರ ತರಬೇತಿ ನೀಡಿದ್ದರು. ಹಾಗೂ ಶಾಲೆ ಇನ್ನೋರ್ವ ವಿದ್ಯಾರ್ಥಿ ಪ್ರಜ್ವಲ ತೆಲಂಗಾಣದಲ್ಲಿ ನಡೆದ 38ನೇ ರಾಷ್ಟ್ರೀಯ ಸಬ್ ಜೂನಿಯರ್ ಹ್ಯಾಂಡ್ ಬಾಲ್ ಕ್ರೀಡಾಕೂಟದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದಾನೆ. ಇವನಿಗೆ ಬಸವರಾಜ ನೇಜಕರ ದೈಹಿಕ ನೀಡಿದ್ದರು.
ಈ ಎಲ್ಲ ಸಾಧಕ ವಿದ್ಯಾರ್ಥಿಗಳನ್ನು ಬಿಇಒ ಬಸವರಾಜಪ್ಪ.ಆರ್, ದೈಹಿಕ ಶಿಕ್ಷಣ ಪರಿವಿಕ್ಷಕ ಎಮ್.ಪಿ.ಜೀರಗ್ಯಾಳ, ಸಂಸ್ಥೆ ಅಧ್ಯಕ್ಷ ಮಲ್ಲಪ್ಪ. ಮೇತ್ರಿ ಉಪಾಧ್ಯಕ್ಷ ರವೀಂದ್ರ ಮೆತ್ರಿ ,ಕಾರ್ಯದರ್ಶಿ ಸ್ನೇಹಲ ಮೇತ್ರಿ ಹಾಗೂ ನಿರ್ದೇಶಕರು ಮತ್ತು ಶಿಕ್ಷಕರು ಅಭಿನಂದಿಸಿ, ಸತ್ಕರಿಸಿದರು.